..
ಎಂಥ ನಗರ ಎಂಥನಗರ ನಿಂತು ವರ್ಣಿಸಬೇಕುಶ್ರೀಕಾಂತೆಯಿಂದ ಇಂತು ರಮಿಸುವುದು ಪ.
ಮುಂದಕ್ಕೆ ನೋಡಲು ಹೊಂದಿದ್ದ ಮನೆಗಳುಹಂದರದ ಜಗಲಿ ಸುಳಿಗೊಳಹಂದರದ ಜಗಲಿ ಸುಳಿಯೆಲಿ ಬೀದಿಯಲಿತುಂಬಿದ ಜನರು ಕಡೆಯಿಲ್ಲ 1
ಅತ್ತಿತ್ತ ನೋಡಲು ಕಾಣುವ ಗೋಪುರಮುತ್ತಿನಂಗಡಿ ಎಡಬಲಮುತ್ತಿನಂಗಡಿ ಎಡಬಲ ನೋಡುತ ಕತ್ತೆತ್ತಿ ನೋಡಿದರೂ ಕಡೆಯಿಲ್ಲ 2
ಕೋಗಿಲದ ಸ್ವರದಂತೆ ಮಕ್ಕಳ ಜೋಗುಳಹಾಡುತೆ ಮನೆ ಬಾಗಿಲ ಮುಂದೆಹಾಡುತೆ ಮನೆಮುಂದೆ ಮಕ್ಕಳಲಾಲಿ ಪಾಡುವರು ಕಡೆಯಿಲ್ಲ3
ಸಾರಾಮೃತವುಳ್ಳ ಕ್ಷೀರ ನವನೀತ ಭಾರವ ವಹಿಸಿ ಕೆಲರುಭಾರವ ವಹಿಸಿ ಕೆಲರು ಅಲ್ಲಲ್ಲಿಸಾರಿ ಮಾರುವವರು ಕಡೆಯಿಲ್ಲ4
ಹಸಿರು ಬಳೆತೊಟ್ಟು ಕುಸುರಿನ ಸಿಂಬೆಯಲಿಮೊಸರ ಗಡಿಗೆ ಎಸಗುತಮೊಸರ ಗಡಿಗೆ ಎಸಗುತ ಮಾರುವ ಬಿಸಜನೇತ್ರಿಯರು ಕಡೆಯಿಲ್ಲ 5
ಬಿಳಿಯ ದಟ್ಟಿಯುಟ್ಟು ಸಣ್ಣ ಬುಟ್ಟಿಹೊತ್ತುಕಣ್ಣು ಕಜ್ಜಲದ ಕೆಲದೆಯರು ಕಣ್ಣು ಕಜ್ಜಲದ ಕೆಲದೆಯರು ಕೂಗುತಹಣ್ಣು ಮಾರುವವರು ಕಡೆಯಿಲ್ಲ 6
ಅಮ್ಮಮ್ಮ ರಮಿಯರಸು ಒಮ್ಮೊಮ್ಮೆ ಬೀದಿಲೆಸುಮ್ಮನೆ ಸುಳಿವ ಯಮಕದಿಸುಮ್ಮನೆ ಸುಳಿವ ಯಮಕದಿ ಶ್ರೀಕೃಷ್ಣತನ್ನ ಭಕುತರನ ಸಲುಹಲಿ 7
****