Showing posts with label ರಾಮ ಗೋವಿಂದ ಹರೇ ಕೃಷ್ಣ ಗೋವಿಂದ neleyadikeshava RAAMA GOVINDA HARE KRISHNA GOVINDA. Show all posts
Showing posts with label ರಾಮ ಗೋವಿಂದ ಹರೇ ಕೃಷ್ಣ ಗೋವಿಂದ neleyadikeshava RAAMA GOVINDA HARE KRISHNA GOVINDA. Show all posts

Monday, 6 December 2021

ರಾಮ ಗೋವಿಂದ ಹರೇ ಕೃಷ್ಣ ಗೋವಿಂದ ankita neleyadikeshava RAAMA GOVINDA HARE KRISHNA GOVINDA



by ಕನಕದಾಸ 

ರಾಮ ಗೋವಿಂದ ಹರೇ ಕೃಷ್ಣ ಗೋವಿಂದದಾಮೋದರಹರಿವಿಷ್ಣು ಮುಕುಂದ ಪ

ಮಚ್ಛವತಾರದೊಳಾಡಿದನೆ -ಮಂದರಾಚಲ ಬೆನ್ನೊಳಾಂತವನೆಅಚ್ಛ ಸೂಕರನಾಗಿ ಬಾಳಿದನೆ - ಮದಹೆಚ್ಚಿ ಹಿರಣ್ಯಕನ ಸೀಳಿದನೆ1

ಬಲಿಯೊಳು ದಾನವ ಬೇಡಿದನೆ - ಕ್ಷಾತ್ರಕುಲವ ಬಿಡದೆ ಕ್ಷಯ ಮಾಡಿದನೆಜಲನಿಧಿಗೆ ಬಿಲ್ಲ ಹೂಡಿದನೆ - ಕಾಮ-ಗೊಲಿದು ಗೊಲ್ಲತಿಯೊಳಾಡಿದನೆ2

ಸಾಧಿಸಿ ತ್ರಿಪುರರ ಗೆಲಿದವನೆ - ಪ್ರತಿ-ವಾದಿಸಿ ಹಯವೇರಿ ನಲಿದವನೆಭೇದಿಸಿ ವಿಶ್ವವ ಗೆಲಿದವನೆ - ಬಾಡದಾದಿಕೇಶವರಾಯ ನಮಗೊಲಿದವನೆ3
***


ರಾಮ ಗೋವಿಂದ ಹರೇ ಕೃಷ್ಣ ಗೋವಿಂದ

ದಾಮೋದರ ಹರಿ ವಿಷ್ಣು ಮುಕುಂದ || ಪ ||

ಮಚ್ಚವತಾರದೊಳಾಡಿದನೆ

ಮಂದರಾಚಲ ಬೆನ್ನೊಳ ಗಾಂತವನೆ

ಅಚ್ಚ ಸೂಕರನಾಗಿ ಬಾಳಿದನೆ

ಮದ ಹೆಚ್ಚಿ ಹಿರಣ್ಯಕನ ಸೀಳಿದನೆ || ೧ ||

ಬಲಿಯೋಳು ದಾನವ ಬೇಡಿದನೆ

ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ

ಜಲನಿಧಿಗೆ ಬಿಲ್ಲ ಹೂಡಿದನೆ

ಕಾಮ ಕೊಲಿದು ಗೊಲ್ಲತಿಯೋಳ್ ಆಡಿದನೆ || ೨ ||

ಸಾಧಿಸಿ ತ್ರಿಪುರರ ಗೆಲಿದವನೆ

ಪ್ರತಿವಾದಿಸಿ ಹಯವೇರಿ ನಲಿದವನೆ

ಭೇದಿಸಿ ವಿಶ್ವವ ಗೆಲಿದವನೆ

ಬಾಡದಾದಿ ಕೇಶವರಾಯ ನಮಗೊಲಿದವನೆ || ೩ ||
***

raama gOviMda harE kRuShNa gOviMda
dAmOdara hari viShNu mukuMda || pa ||

maccavataaradoLADidane
maMdarAcala bennoLa gAMtavane
acca sookaranaagi baaLidane
mada hecci hiraNyakana sILidane || 1 ||

baliyOLu dAnava bEDidane
kShAtra kulava biDade kShaya mADidane
jalanidhige billa hooDidane
kAma kolidu gollatiyOL ADidane || 2 ||

sAdhisi tripurara gelidavane
prativaadisi hayavEri nalidavane
bhEdisi viSwawa gelidavane
bADadAdi kESavarAya namagolidavane || 3 ||
***