Showing posts with label ಸೋದಾಪುರದಲಿ ಮನೆ ಮಾಡಿದ ಮುನಿವರನ್ಯಾರೆ ಪೇಳಮ್ಮಯ್ಯ hayavadana. Show all posts
Showing posts with label ಸೋದಾಪುರದಲಿ ಮನೆ ಮಾಡಿದ ಮುನಿವರನ್ಯಾರೆ ಪೇಳಮ್ಮಯ್ಯ hayavadana. Show all posts

Friday, 13 December 2019

ಸೋದಾಪುರದಲಿ ಮನೆ ಮಾಡಿದ ಮುನಿವರನ್ಯಾರೆ ಪೇಳಮ್ಮಯ್ಯ ankita hayavadana

ಶ್ರೀ ವಾದಿರಾಜ ಪೂಜ್ಯ ಚರಣವಿರಚಿತಂ ‌ ಪ್ರಾರ್ಥನಾ ದಶಕ ಸ್ತೋತ್ರಂ


ಸೋದಾಪುರದಲಿ ಮನೆ ಮಾಡಿದ/
ಮುನಿವರನ್ಯಾರೆ ಪೇಳಮ್ಮಯ್ಯ//

ಬಾದರಾಯಣ ಪದ ಪೂಜಕರಿಗೆ
ಮೋದ ಕೊಡುವ ವಾದಿರಾಜ ಕಾಣಮ್ಮ//

ಶ್ರೀ ಗುರುಭ್ಯೋ ನಮಃ/ಹರಿ ಓಂ.

ರಮಾರಮಣ ಮದ್ವಾಧಿದೇಶಿಕ ಶ್ರೀ ಹೃದಬ್ಜಗ/
ಹಯಗ್ರೀವ ಕೃಪಾಲೋ ಮೇ ಪ್ರಾರ್ಥನಾಂ ಶೃಣು ಸಾದರಮ್//೧//

ಹೇ ಲಕ್ಷ್ಮೀ ಪತಿ! ಮಧ್ವಾಚಾರ್ಯ ರೇ ಮೊದಲಾಗಿ ಗುರುಗಳ ಹೃದಯಕಮಲ ವಾಸಿಯಾದ ದಯಾಸಿಂಧು
ಹಯಗ್ರೀವ ದೇವ! ನನ್ನ ಪ್ರಾರ್ಥನೆ ಯನ್ನು ಆದರದಿಂದ ಆಲಿಸು.

೨_---
ಅಯೋಗ್ಯ ವಿಷಯೇ ಸ್ವಾಮಿನ್ ಸರ್ವಥಾ ನಮನೋ ಭವೇತ್/
ಚಾಂಚಲ್ಯಂ ಮೂಲತ ಶ್ಚಿಂಧಿ ದುರಾಶಾ ಹರದೂರತ//೨//.

ಹೇ ಸ್ವಾಮಿ ನನ್ನ ಮನಸ್ಸು ಅಯೋಗ್ಯವಿಷಯದಲ್ಲಿ ಎಂದಿಗೂ ಹೋಗದಿರಲಿ!
ನನ್ನ ಮನೋಚಾಂಚಲ್ಯವನ್ನು ಬೇರು ಸಹಿತ ಕಿತ್ತು ಹಾಕಿ ದುರಾಶೆಗಳನ್ನು ದೂರ ಮಾಡು!

೩-
ಸಜ್ಞಾನಂ ಸರ್ವದಾ ದೇಹಿ ಸಚ್ಛಾಸ್ತ್ರಾವರ್ತನೇ ರತಿಮ್/
ಸತ್ಸಂಗಂ ಸತ್ಕ್ರಿಯಾಂ ಚೈವ ಪಾದೌತ್ವತ್ ಕ್ಷೇತ್ರ ಸಮರ್ಪಣೆ//

ಹೇ ದೇವಾ !ಸದಾ ಒಳ್ಳೆಯ ಜ್ಞಾನವನ್ನು ನೀಡು .
ಸುಚರಿತ್,ಗಳನ್ನು ಅಧ್ಯಯನ ಮಾಡುವುದರಲ್ಲಿ ಆಸಕ್ತಿ ಯನ್ನು ಅನುಗ್ರಹ ಮಾಡು.

ಸತ್ಸಂಗ ಸತ್ಕಾರ್ಯ ತೀರ್ಥಕ್ಷೇತ್ರ ದರ್ಶನ ಗಳನ್ನು ಅನುಗ್ರಹಿಸು

೪--

ಶ್ರೀ ಮಧ್ವಶಾಸ್ತ್ರ ಶ್ರವಣೇ ನಿಯಂಕ್ಪ್ವ ಶ್ರವಣೇ ಸದಾ/
ಹಯಾಸ್ಯ ಚಕ್ಷೂಂಷಿ ಚ ಮೇ ದರ್ಶನೇ ಸನಿಯೊಜನೆಯ//

ಹೇ ಹಯಾಸ್ಯ !
ನನ್ನ ಕಿವಿ ಸದಾ ಆನಂದತೀರ್ಥ ರ ಶಾಸ್ತ್ರ ವನ್ನೇ ಆಲಿಸಿ,
ನನ್ನ ಕಣ್ಣು ಸದಾ ಪರಮಾತ್ಮನನ್ನೆ ದರ್ಶಿಸಿಲೆಂದು ಬೇಡುವೆ.

೫--
ಘ್ರಾಣು ಭವತು ನಿರ್ಮಾಲ್ಯಾ ಘ್ರಾಣನೇ ನಮನೇ ಶಿರ/
ದೇಹಿ ಮೇತಂ ಜ್ಞಾನ ಭಕ್ತಿ ಪಶುಪುತ್ರ ಧನಾದಿಕಮ್//

ಶ್ರೀ ಹರಿ! ನನ್ನ ನಾಸಿಕವು ನಿನ್ನ ನಿರ್ಮಾಲ್ಯವನ್ನು ಆಘ್ರಾಣಿಸಲಿ.

ಶಿರವು ನಿನ್ನನ್ನು ನಮಿಸಲಿ.

ಪಶು ಪುತ್ರ ಧನಾದಿಗಳಲ್ಲಿ ಮೋಹವನ್ನು ಬಿಟ್ಟು ಜ್ಞಾನ ಭಕ್ತಿ ವೈರಾಗ್ಯ ಗಳನ್ನು ಆಶ್ರಯಿಸಲಿ.

ಪ್ರಾರ್ಥನಾ ದಶಕಂ ಚೈತತ್ ತ್ರಿಕಾಲಂ ಪಠೇನ್ನರ
ತಸ್ಮಾಭೀಷ್ಟಂ ಹಯಸ್ಯೋ ಸೌ ದತ್ವಾ ರಕ್ಷತಿ ಸರ್ವದಾ//.

//ಇತಿ ಶ್ರೀ ವಾದಿರಾಜ ವಿರಚಿತಂ ಪ್ರಾರ್ಥನಾ ದಶಕಂ//

ಹೀಗೆ ಈ ಪ್ರಾರ್ಥನಾ ದಶಕ ಸ್ತೋತ್ರ ವನ್ನು ಯಾರು ಭಕ್ತಿಯಿಂದ , ಶ್ರದ್ಧೆ ಗಳಿಂದ ತ್ರಿಕಾಲ ದಲ್ಲಿ ಪಠಿಸುವರೋ ಅವರಿಗೆ ಹಯಾಸ್ಯನು ಸರ್ವಾಭೀಷ್ಟನೀಡಿ ಸದಾ ರಕ್ಷಿಸುವನು.

//ಶ್ರೀ ಭಾರತೀ ರಮಣ ಮುಖ್ಯಪ್ರಾಣಂತರ್ಗತ ಶ್ರೀ ಲಕ್ಷ್ಮೀ ಹಯಗ್ರೀವಾಯ ನಮಃ.//
**********