ಈಶ ನಿನ್ನ ಚರಣ ಭಜನೆ Isha Ninna Charana Bhajane
ಕೇಶವಾಯ ನಮ:ದಿಂದ ಆರಂಭವಾಗುವ ಚತುರ್ವಿಂಶತಿ ನಾಮಗಳನ್ನು
ಉಪಯೋಗಿಸಿಕೊಂಡು ಕನಕದಾಸರು ಸರ್ವರಿಗೂ ಉಪಯೋಗ ವಾಗುವಂತೆ ಅನುಕೂಲವಾಗುವಂತೆ, ಹೆಣ್ಣುಮಕ್ಕಳಿಗೂ ಸುಲಭವಾದ ಮಂತ್ರವನ್ನು ತಮ್ಮ ಕೃತಿಯ ಮೂಲಕ ಉಪದೇಶಿಸಿದ್ದಾರೆ.
ಈಶ ನಿನ್ನ ಚರಣ ಭಜನೆ | ಆಶೆಯಿಂದ ಮಾಡುವೆನು
ದೋಶರಾಶಿ ನಾಶಮಾಡು ಶ್ರೀಶ ಕೇಶವ || 1 ||
ಶರಣು ಹೊಕ್ಕೆನಯ್ಯ ಎನ್ನ | ಮರಣ ಸಮಯದಲ್ಲಿ ನಿನ್ನ |
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 2 ||
ಶೋಧಿಸೆನ್ನ ಭವದ ಕಲುಶ | ಭೋಧಿಸಯ್ಯ ಜ್ಞಾನವೆನಗೆ||
ಬಾಧಿಸುವ ಯಮನ ಬಾಧೆ | ಬಿಡಿಸು ಮಾಧವ || 3 ||
ಹಿಂದನೇಕ ಯೋನಿಗಳಲಿ | ಬಂದು ಬಂದು ನೊಂದೆನಯ್ಯ ||
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || 4 ||
ಭ್ರಷ್ಟನೆನಿಸಬೇಡ ಕೃಷ್ಣ | ಇಷ್ಟು ಮಾತ್ರ ಬೇಡಿಕೊಂಬೆ ||
ಶಿಷ್ಟರೊಡನೆ ಇಟ್ಟು ಕಷ್ಟ | ಬಿಡಿಸು ವಿಷ್ಣುವೇ || 5 ||
ಮದನನಯ್ಯ ನಿನ್ನ ಮಹಿಮೆ | ವದನದಲ್ಲಿ ನುಡಿಯುವಂತೆ ||
ಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 6 ||
ಕವಿದುಕೊಂಡು ಇರುವ ಪಾಪ | ಸವೆದು ಪೋಗುವಂತೆ ಮಾಡಿ ||
ಜವನ ಬಾಧೆಯನ್ನು ಬಿಡಿಸೋ | ಶ್ರೀತ್ರಿವಿಕ್ರಮ || 7 ||
ಕಾಮಜನಕ ನಿನ್ನ ನಾಮ | ಪ್ರೇಮದಿಂದ ಪಾಡುವಂಥ ||
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ || 8 ||
ಮೊದಲು ನಿನ್ನ ಪಾದಪೂಜೆ | ಒದಗುವಂತೆ ಮಾಡೋ ಎನ್ನ ||
ಹೃದಯದೊಳಗೆ ಸದನ ಮಾಡು ಮುದದಿ ಶ್ರೀಧರ || 9 ||
ಹುಸಿಯನಾಡಿ ಹೊಟ್ಟೆ ಹೊರೆವ | ವಿಷಯದಲ್ಲಿ ರಸಿಕನೆಂದು ||
ಹುಸಿಗೆ ಹಾಕದಿರೋ ಎನ್ನ ಹೃಷೀಕೇಶನೇ || 10 ||
ಕಾಮಕ್ರೋಧ ಬಿಡಿಸಿ ನಿನ್ನ | ನಾಮ ಜಿಹ್ವೆಯೊಳಗೆ ನುಡಿಸು ||
ಶ್ರೀಮಹಾನುಭಾವನಾದ ದಾಮೋದರ || 11 ||
ಬಿದ್ದು ಭವದನೇಕ ಜನುಮ | ಬದ್ದನಾಗಿ ಕಲುಷದಿಂದ ||
ಗೆದ್ದು ಪೋಪ ಬುಧ್ಧಿ ತೋರೊ ಪದ್ಮನಾಭನೆ || 12 ||
ಪಂಕಜಾಕ್ಷ ನೀನೆ ಎನ್ನ | ಮಂಕುಬುದ್ಧಿಯನ್ನು ಬಿಡಿಸಿ |
ಕಿಂಕರನ್ನ ಮಾಡಿಕೊಳ್ಳೋ ಸಂಕರ್ಷಣ || 13 ||
ಏಸು ಜನ್ಮ ಬಂದರೇನು | ದಾಸನಲ್ಲವೇನು ನಾನು ||
ಘಾಸಿ ಮಾಡದಿರು ಇನ್ನು ವಾಸುದೇವನೇ || 14 ||
ಬುದ್ಧಿ ಶೂನ್ಯನಾಗಿ ಎನ್ನ | ಬದ್ಧಕಾಯ ಕುಹಕ ಮನವ ||
ತಿದ್ದಿ ಹೃದಯ ಶುದ್ಧ ಮಾಡೋ ಪ್ರದ್ಯುಮ್ನನೇ || 15 ||
ಜನನಿ ಜನಕ ನೀನೆಯೆಂದು | ನೆನೆವೆನಯ್ಯ ದೀನಬಂಧು ||
ಎನಗೆ ಮುಕ್ತಿ ಪಾಲಿಸಿನ್ನು ಅನಿರುದ್ಧನೇ || 16 ||
ಹರುಶದಿಂದ ನಿನ್ನ ನಾಮ | ಸ್ಮರಿಸುವಂತೆ ಮಾಡು ಕ್ಷೇಮ ||
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ || 17 ||
ಸಾಧುಸಂಗ ಕೊಟ್ಟು ನಿನ್ನ | ಪಾದಭಜನೆ ಇತ್ತು ಎನ್ನ ||
ಭೇದಮಾಡಿ ನೋಡದಿರೊ ಹೇ ಅಧೋಕ್ಷಜ || 18 ||
ಚಾರುಚರಣ ತೋರಿ ಎನಗೆ | ಪಾರುಗಾಣಿಸಯ್ಯ ಕೊನೆಗೆ ||
ಭಾರ ಹಾಕಿರುವೆ ನಿನಗೆ ನಾರಸಿಂಹನೇ || 19 ||
ಸಂಚಿತಾದಿ ಪಾಪಗಳು | ಕಿಂಚಿತಾದ ಪೀಡೆಗಳನು ||
ಮುಂಚಿತಾಗಿ ಕಳೆಯಬೇಕೋ ಸ್ವಾಮಿ ಅಚ್ಯುತ || 20 ||
ಜ್ಞಾನ ಭಕುತಿ ಕೊಟ್ಟು ನಿನ್ನ | ಧ್ಯಾನದಲ್ಲಿ ಇಟ್ಟು ಸದಾ ||
ಹೀನ ಬುದ್ಧಿ ಬಿಡಿಸೊ ಮುನ್ನ ಶ್ರೀ ಜನಾರ್ಧನ || 21 ||
ಜಪತಪಾನುಷ್ಠಾನವಿಲ್ಲ | ಕುಪಿತಗಾಮಿಯಾದ ಎನ್ನ ||
ಕೃಪೆಯ ಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || 22 ||
ಮೊರೆಯ ಇಡುವೆನಯ್ಯ ನಿನಗೆ | ಶರಧಿಶಯನ ಶುಭಮತಿಯ||
ಇರಿಸೋ ಭಕ್ತರೊಳಗೆ ಪರಮಪುರುಷ ಶ್ರೀಹರೇ || 23 ||
ಪುಟ್ಟಿಸಲೇಬೇಡ ಇನ್ನು | ಪುಟ್ಟಿಸಿದಕೆ ಪಾಲಿಸಿನ್ನು||
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || 24 ||
ಸತ್ಯವಾದ ನಾಮಗಲನು | ನಿತ್ಯದಲ್ಲಿ ಪಠಿಸುವರಿಗೆ ||
ಅರ್ಥಿಯಿಂದ ಸಲಹುತಿರುವ ಕರ್ತೃ ಕೇಶವ || 25 ||
ಮರೆಯದಲೆ ಹರಿಯ ನಾಮ | ಬರೆದು ಓದಿ ಪೇಳ್ದವರಿಗೆ ||
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವ || 26 ||
***
Isha ninna charaNa bhajane
Asheyinda mADu venu
dOsharAshi nAshamADu shreesha kEshava ||1||
sharaNu hokkenayya yenna
maraNa samayadalli ninna
carana smaraNe karuNisayya nArAyaNa ||2||
shOdhisenna bhavada kalusha
bhOdisayya gyAnavenage
bAdhisuva yamana bAdhe biDisu mAdhavA ||3||
hindanEka yOnigaLali
bandu bandu nondenayya
indu bhavada bandha biDisu tande gOvindA ||4||
bhrashTanenisa bEDa krishNa
ishTu mAtra bEDikombe
shishTaroDane ishTu kashTa biDisu vishNuvE ||5||
madananayya ninna mahime
vadanadalli nuDiyuvante
hrudayadoLage hudugisayya madhusUdhanA ||6||
kavidukonDu iruva pApa
savidu pOguvante mADo
javana bAdheyannu biDisu trivikramA ||7||
kAmajanaka ninna nAma
prEmadinda pADuvantha
nEmavenage pAlisayya swAmi vAmanA ||8||
modalu ninna pAda pUje
odaguvante mADO yenna
hrudayalli sadana mADo mudadi shriidara ||9||
husiyanADi hoTTe horeva
vishayadalli rasikanendu
husige hAkadiirayya hrushiikEshanE ||10||
biddu bhavadanEka januma
baddhanAgi kalushadinda
geddupOpa buddhi tOrO padmanAbhane ||11||
kAma krOdha biDisi ninna
nAma jihveyoLage nuDiso
shrii mahAnubhAvanAda dAmOdarA ||12||
pankajAksha nEnu yenna
manku buddhyannu biDisi
kinkaranna mADikoLLo sankarushaNA ||13||
yEsu januma bandarEnu
dAsanalla vEno nAnu
ghAsi mADadiru yenna vAsudEvanE ||14||
buddhi shOnyanAgi yenna
paddha kArya kuhakamanava
tiddi hrudaya shuddhi mADo pradyumnanE ||15||
jananijanaka nIne yendu
nenevenayya diina bandhu
yenage mukti pAlisayya aniruddhanE ||16||
harushadinda ninna nAma
smarisuvate mADu nEma
virisu caraNa dalli pushOttamA ||17||
sAdhusanga koTTu ninna
pAdabhajaneyiTTu enna
bhEdamAdi nODadirO shri adhOkshajA ||18||
cAru caraNa tOri yenage
pArugANisayya konege
bhAra hAkutiruve ninage nArasimhanE ||19||
sancitArtha pApagaLanu
kincitAda piiDegaLanu
muncitavAgi kaLedu poreyo swAmi accyutA ||20||
gyAna bhakti koTTu ninna
dhyAnadalli yiTTu sadA
hiina buddhi biDisu munna shrii janArdhana ||21||
japatapAnushTAna villade
kupathAgAmiyAda yenna
krupeyamADi kshamisabEku upEndranE ||22||
moreya iDuvenayya ninage
sharadhi shayana shubhamatIya
irisu bhaktanendu paramapurusha shri harI ||23||
puTTisalEbEDa innu
puTTisidake pAlisenna
ishTu mAtra bEDikombe shrii krishNanE ||24||
satyavAda nAmagaLanu
nityadalli paThisuvavara
arthiyinda salahuvanu kartru kEshavA ||25||
mareyadale hariyanAma
baredu Odi kELidavage
karedu mukti koDuva neleyAdikEshavA ||26||
***
Isha ninna charana bhajane
Asheyinda madu venu
dosharashi nashamadu shreesha keshava ||1||
Sharanu hokkenayya yenna
marana samayadalli ninna
charana smarane karunisayya narayana ||2||
Shodhisenna bhavada kalusha
bhodisayya gyanavenage
badhisuva yamana badhe bidisu madhava ||3||
Hindaneka yonigalali
bandu bandu nondenayya
indu bhavada bandha bidisu tande govinda ||4||
Bhrashtanenisa beda krishna
ishtu matra bedikombe
shishtarodane ishtu kashta bidisu vishnuve ||5||
Madananayya ninna mahime
vadanadalli nudiyuvante
hrudayadolage hudugisayya madhusudhana ||6||
Kavidukondu iruva papa
savidu poguvante mado
javana badheyannu bidisu trivikrama ||7||
Kamajanaka ninna nama
premadinda paduvantha
nemavenage palisayya swami vamana ||8||
Modalu ninna pada puje
odaguvante mado yenna
hrudayalli sadana mado mudadi shriidara ||9||
Husiyanadi hotte horeva
vishayadalli rasikanendu
husige hakadiirayya hrushiikeshane ||10||
Biddu bhavadaneka januma
baddhanagi kalushadinda
geddupopa buddhi toro padmanabhane ||11||
Kama krodha bidisi ninna
nama jihveyolage nudiso
shrii mahanubhavanada damodara ||12||
Pankajaksha nenu yenna
manku buddhyannu bidisi
kinkaranna madikollo sankarushana ||13||
Yesu januma bandarenu
dasanalla veno nanu
ghasi madadiru yenna vasudevane ||14||
Buddhi shonyanagi yenna
paddha karya kuhakamanava
tiddi hrudaya shuddhi mado pradyumnane ||15||
Jananijanaka nine yendu
nenevenayya diina bandhu
yenage mukti palisayya aniruddhane ||16||
Harushadinda ninna nama
smarisuvate madu nema
virisu carana dalli pushottama ||17||
Sadhusanga kottu ninna
padabhajaneyittu enna
bhedamadi nodadiro shri adhokshaja ||18||
Caru carana tori yenage
paruganisayya konege
bhara hakutiruve ninage narasimhane ||19||
Sancitartha papagalanu
kincitada piidegalanu
muncitavagi kaledu poreyo swami accyuta ||20||
Gyana bhakti kottu ninna
dhyanadalli yittu sada
hiina buddhi bidisu munna shrii janardhana ||21||
Japatapanushtana villade
kupathagamiyada yenna
krupeyamadi kshamisabeku upendrane ||22||
Moreya iduvenayya ninage
sharadhi shayana shubhamatiya
irisu bhaktanendu paramapurusha shri hari ||23||
Puttisalebeda innu
puttisidake palisenna
ishtu matra bedikombe shrii krishnane ||24||
Satyavada namagalanu
nityadalli pathisuvavara
arthiyinda salahuvanu kartru keshava ||25||
Mareyadale hariyanama
baredu Odi kelidavage
karedu mukti koduva neleyadikeshava ||26||
***
ಕೇಶವಾದಿ ನಾಮಗಳ ಅರ್ಥ (24 ನಾಮಗಳು)
1. ಕೇಶವ - ಬ್ರಹ್ಮ ರುದ್ರರಿಗೆ ಪ್ರೇರಕ,
2. ನಾರಾಯಣ - ಗುಣಪೂರ್ಣ
3. ಮಾಧವ - ಲಕ್ಷ್ಮೀ ರಮಣ,
4. ಗೋವಿಂದ - ವೇದ ವೇದ್ಯ
5. ಮಧುಸೂದನ - ಮಧು ದೈತ್ಯನನ್ನು ಕೊಂದವ
6. ವಿಷ್ಣು - ಸರ್ವ ವ್ಯಾಪಿ
7. ತ್ರಿವಿಕ್ರಮ - ಮೂರು ಹೆಜ್ಜೆ ಇಟ್ಟವನು
8. ವಾಮನ - ಮಂಗಳಕರ
9. ಶ್ರೀಧರ - ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿದವನು
10. ಹೃಷಿಕೇಶ - ಇಂದ್ರಿಯಗಳ ದೇವತೆ.
11. ಪದ್ಮನಾಭ - ನಾಭಿಯಲ್ಲಿ ಪದ್ಮ (ತಾವರೆ) ವನ್ನು ಹೊಂದಿರುವವನು.
12. ದಾಮೋದರ - ಹೊಟ್ಟೆಯಲ್ಲಿ ಹಗ್ಗದಿಂದ ಕಟ್ಟಲ್ಪಟ್ಟವನು.
13. ಸಂಕರ್ಷಣ - ಪ್ರಳಯಕಾಲದಲ್ಲಿ ಎಲ್ಲರನ್ನೂ ಸೆಳೆಯುವವನು
14. ವಾಸುದೇವ - ಜಗದಾಧಾರ
15. ಪ್ರದ್ಯುಮ್ನ - ಉತ್ತಮ ಐಶ್ವರ್ಯ ನೀಡುವವನು
16. ಅನಿರುದ್ಧ - ತನ್ನಾಜ್ಞೆಗೆ ಯಾರಿಂದಲೂ ತಡೆ ಇಲ್ಲದವನು
17. ಪುರುಷೋತ್ತಮ - ಎಲ್ಲಾ ಜೀವರಿಗಿಂತಲೂ ಲಕ್ಷ್ಮಿಗಿಂತಲೂ ಉತ್ತಮ
18. ಅಧೋಕ್ಷಜ - ಇಂದ್ರಿಯಗಳಿಗೆ ನಿಲಕದವನು
19. ನಾರಸಿಂಹ - ನರ ಮತ್ತು ಸಿಂಹ ಆಕೃತಿ ಉಳ್ಳವನು
20. ಅಚ್ಯುತ - ತನ್ನ ಸಾಮರ್ಥ್ಯಕ್ಕೆ ಎಂದೂ ಚ್ಯುತಿ ಇಲ್ಲದವನು
21. ಜನಾರ್ಧನ - ಜನನವಿಲ್ಲದಂತೆ ಮಾಡುವವನು
22. ಉಪೇಂದ್ರ - ಎಲ್ಲಾ ಇಂದ್ರರಿಗಿಂತ ಉತ್ತಮ
23. ಹರ - ಪಾಪ ಪರಿಹಾರಕ
24. ಶ್ರೀ ಕೃಷ್ಣ - ಲೋಕ ನಿಯಾಮಕನಾಗಿದ್ದು ಎಲ್ಲವನ್ನು ಸೆಳೆದುಕೊಳ್ಳು ವವನು...
||ಶ್ರೀ ಕೃಷ್ಣಾರ್ಪಣಮಸ್ತು||
***
|| ಪದ್ಯ -1 - ವಿವರಣೆ||
ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು |
ದೋಷರಾಶಿ ನಾಶ ಮಾಡು
ಶ್ರೀಶ ಕೇಶವ || 1 ||
ಈಶ ನಿನ್ನ ಚರಣಸೇವೆ ಮಾಡುವೆನು.
ನೀನು ಈಶ ಸರ್ವನಿಯಾಮಕ. ನಾನು ನಿನ್ನ ದಾಸ -ನಿಯಮ್ಯ . ಆದುದರಿಂದ ನಿನ್ನ ಸೇವೆ ನಾನು ಮಾಡಬೇಕು .ನಾನೇನು ? ಈ ಪ್ರಕೃತಿ
ಸಹಿತವಾದ ಪ್ರಪಂಚವೇ ನಿನ್ನದು.
ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚ ಜಗತ್ಯಾಂ ಜಗತ್ |
ಈಶವಾಸ್ಯ ಉಪನಿಷತ್
ಯ ಏತತ್ ಪರತಂತ್ರ ಚ
ಸರ್ವಮೇವ ಹರೇಃ ಸದಾ
ವಶಮಿತ್ಯೇವ ಜಾನಾತಿ ಸಂಸಾರಾನ್ಮುಚ್ಯತೇ ಹಿ ಸಃ
ತತ್ವವಿವೇಕ
ಈ ಪರತಂತ್ರ ಪ್ರಪಂಚವೆಲ್ಲವೂ
ಸರ್ವದಾ ಶ್ರೀಹರಿಯ ವಶ ಎಂದು ತಿಳಿದವನೆ ಮುಕ್ತಿ ಪಡೆಯುವುದು ತಾನೆ .
ಕ -ಬ್ರಹ್ಮ ಈ -ಲಕ್ಷ್ಮೀ ಇ -ಕಾಮ , ಈಶ -ರುದ್ರ ಇವರಿಗೆಲ್ಲ ನಿಯಾಮಕ
ಆದುದರಿಂದಲೇ ನೀನು ಕೇಶವ -ಕಂ ಬ್ರಹ್ಮಾಣಂ , ಈಂ -ಲಕ್ಷ್ಮೀಂ ಇಂ -ಕಾಮ , ಈಶಂ -ರುದ್ರಂವರ್ತಯತಿ ಇತಿ ಕೇಶವಃ ಬ್ರಹ್ಮಾದಿಗಳಿಗಿಂತ ಹಿರಿಯಳಾದ ಶ್ರೀದೇವಿಗೂ ನಿನು ಈಶ . ಹೀಗೆ ಸರ್ವೋತ್ತಮನು . ಸರ್ವನಿಯಾಮಕನು . ಆಗಿ ಕೇಶವ ಎನಿಸಿದ ಶ್ರೀಶ ನಿನ್ನ ಚರಣಭಜನೆ ಮಾಡುವೆನು.
***
ಈಶ !ನಿನ್ನ ಚರಣಗಳಲ್ಲಿ ಒಂದು ಚರಣ ಮುಕ್ತಿಯಲ್ಲಿ ಭಜಕರಿಗೆ ಸುಖವನ್ನು ಕೊಡುವುದರಿಂದ ಸು ಎನಿಸಿದರೆ. ಮತ್ತೊಂದು ಚರಣ ಜ್ಞಾನವನ್ನು ಕೊಡುವುದರಿಂದ. ವರ್ ಎನಿಸುವುದು. ಜ್ಞಾನ ಆನಂದಗಳನ್ನು ಪಡೆಯಲು ನಿನ್ನ ಚರಣ ಭಜನೆ ಮಾಡುವೆನು .
ಎನ್ನ ಸೇವೆ ಬೆಸರದೆ ದಿನ
ದಿನ್ನ ಮಾಡುವ ಮಾನವರಿಗೆ
ಪ್ರಸನ್ನ ನಾಹೆ ಕೃಪಾಳು ಎಂಬುದು ಎನಗೆ ಬಲು ಬಿರುದು
ಮನ್ನದಲ್ಲಿ ಬೇಸತ್ತು ಕೊಂಡರೆ ಮಣ್ಣು ಹೊಯಿಸದೆ ಮಾಣೆನದರಿಂ - ದುನ್ನತೋನ್ನತ ಪೂಜೆಗಳನು ದಿನ್ನ ಮಾಡುತಿರು.
ಸ್ವಪ್ನಪದ -ಶ್ರೀವಾದಿರಾಜರು
ಎಂದು ನಿನ್ನ ಆದೇಶ ಆದುದರಿಂದಲೆ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು.
***
ಸೂರ್ಯಸ್ಯ ತಪತೊ ಲೋಕಾನಗ್ನೇಃ ಸೋಮಸ್ಯ ವಾಪ್ಯುತಃ ಅಂಶವೋ ಯತ್ ಪ್ರಕಾಶಂತೇ ಮಮ ತೇ ಕೇಶಸಂಜ್ಞಿತಾಃ | ಸರ್ವಜ್ಞಾಃ ಕೇಶವಂ ತಸ್ಮಾನ್ಮಾಮಾಹುರ್ದ್ವಿಜಸತ್ತಮಾಃ | ತೇನ ಕೇಶವನಾಮಾಹಂ ಖ್ಯಾತೋ ಲೋಕೇ ಯುಗೇ ಯುಗೇ ||
ಲೋಕಗಳನ್ನು ಸುಡುವ ಸೂರ್ಯನ ಅಗ್ನಿಯ ಹಾಗೂ ಚಂದ್ರನ ಪ್ರಕಾಶಿಸುವ ಕಿರಣಗಳೇ ವಿಶ್ವವ್ಯಾಪಿಯಾದ ನನ್ನ ಕೇಶ ಎನ್ನಿಸಿದ್ದು ಅವುಗಳನ್ನು ಮುಖ್ಯವಾಗಿ ನಾನು ಹೊಂದಿರುವುದರಿಂದ ಜ್ಞಾನಿಗಳು ನನ್ನನ್ನು ಕೇಶವ ಎಂದು ಕರೆಯುವರು . ಆದುದರಿಂದ ಲೋಕದಲ್ಲಿ ಪ್ರತಿಯೊಂದು ಯುಗದಲ್ಲೂ ನಾನು ಕೇಶವ ಎಂಬ ಹೆಸರಿನಿಂದ ಪ್ರಸಿದ್ದನಾಗಿರುವೆನು -ಎಂದು ಭಗವಂತನೇ ತಾನು ಕೇಶವ ಏಂದೆನಿಸಿರುವುದ ಔಚಿತ್ಯವನ್ನು ಮಹಾಭಾರತ ಶಾಂತಿಪರ್ವದಲ್ಲಿ ತಿಳಿಸಿದ್ದಾನೆ
***
ಕೇಶವೋsನ್ಯತರಸ್ಯಾಮ್ ಇತಿ ಸೂತ್ರಾನುಸಾರೇಣ ಪ್ರಶಸ್ತಾಃ ಕೇಶಾಃ ಅಸ್ಯ ಸಂತೀತಿ ಪ್ರಶಂಸಾಯಾಮ್ ಕೇಶಾದ್ ವಪ್ರತ್ಯಯೇ ಸತಿ ಕೇಶವ ಇತಿ ಸಿದ್ಧ್ಯತಿ .
ಪ್ರಶಸ್ತವಾದ ತಲೆಗೊದಲನ್ನು ಹೊಂದಿರುವವನು ಆದ್ದರಿಂದ ಕೇಶವ. ಎಂದು ಕರೆಯಃಲ್ಪಡುತ್ತಾನೆ .
ಆನಂದಶ್ಮಶ್ರುರಾನಂದಕೇಶ ಆಪಾದನಖಾತ್ಸರ್ವ ಏವಾನಂದಃ
ಭಗವಂತನ ತಲೆಗೂದಲು ಯಾವಾಗಲೂ ಅವನಂತೆಯೇ ಆನಂದಸ್ವರೂಪಿ
-ಮಾಧ್ಯಂದಿನ ಶ್ರುತಿ ಭಾಗವತತಾತ್ಪರ್ಯನಿರ್ಣಯ10-3-49
ಯತಃ ಪ್ರಾಣಾದಿ ಶಕ್ತಿಮಾನ್ ಕೇಶಾದಿ ಸರ್ವತ್ರ ||
ಭಗವಂತನ ಸ್ವರೂಪಾತ್ಮಕವಾದ ತಲೆಗೂದಲು ಅವನಷ್ಟೇ ಸಮರ್ಥ .ಅವನ ಕೈಕಾಲುಗಳಲ್ಲಿರುವ ಕೇಶಾದಿ ಸ್ವಸಾಮರ್ಥ್ಯವು ಅದರಲ್ಲಿದೆ .
--ಗೀತಾತಾತ್ಪರ್ಯ
ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು
ಈ ವಿಷಯವನ್ನು ತಿಳಿಸಿದ್ದಾನೆ .
ಅನಾದಿಮತ್ ಪರಂ ಬ್ರಹ್ಮ ನ ಸತ್ ತನ್ನಾಸ ದುಚ್ಯತೇ |
ಸರ್ವತಃ ಪಾಣಿಪಾದಂ ತತ್ ಸರ್ವತೋsಕ್ಷಿಶಿರೋಮುಖಂ |
ಸರ್ವತಃ ಶ್ರುತಿಮಾಲ್ಲೋಕೇ ಸರ್ವಮೋವೃತ್ಯ ತಿಷ್ಠತಿ ||
ಭಗವಂತನಿಗೆ ಪ್ರಾಕೃತದೇಹವಾಗಲಿ ಪ್ರಾಕೃತ ಇಂದ್ರಿಯವಾಗಲಿ ಇರುವುದಿಲ್ಲ .ಅವನ ದೇಹ ಇಂದ್ರಿಯಾದಿಗಳೂ ಅವನ ಸ್ವರೂಪವೇ ಅವನ ಎಲ್ಲ ಅವಯವಗಳಲ್ಲಿಯೂ ಕೈಕಾಲುಗಳುಳ್ಳ ಶಕ್ತಿ ಉಳ್ಳವನು . ಎಲ್ಲ ಅವಯವಗಳಲ್ಲಿಯೂ ಕಿವಿಯ ಕಾರ್ಯಶಕ್ತಿ ಉಳ್ಳವನು .ಪ್ರತಿಯೊಂದು ಅವಯವೂ ಎಲ್ಲ ಅವಯವಗಳ ಕಾರ್ಯಮಾಡಬಲ್ಲದು . ಜಗತ್ತಿನಲ್ಲಿರುವ ಎಲ್ಲ ವಸ್ತುವನ್ನು ವ್ಯಾಪಿಸಿರುತ್ತಾನೆ ಆತ .
ಅತ್ಯಂತ ಸೂಕ್ಷ್ಮವಾದ ಕೈಕಾಲು ಮುಂತಾದ ಎಲ್ಲ ಅವಯವಗಳಿಂದ ಕೂಡಿದ ಅಣುರೂಪಗಳಿಂದ ಎಲ್ಲ ಅಣುಪದಾರ್ಥಗಳಲ್ಲಿಯೂ ಇದ್ದು ವ್ಯಾಪ್ತರೂಪದಿಂದ ಜಗತ್ತಿನಲ್ಲಿರುವ ಎಲ್ಲ ವಸ್ತುಗಳನ್ನೂ ವ್ಯಾಪಿಸಿರುತ್ತಾನೆ .
-ಶ್ರೀಮದ್ ಭಗವದ್ಗೀತೆ 13- 13 ,14
ಕೃಷ್ಣ ಕೇಶೋ ಹಿ ಯಾದವಃ ||
-ಗೀತಾತಾತ್ಪರ್ಯ
ಹರಿಶುಕ್ಲಕೇಶಯುತಶ್ಶೇಷೋ ದೇವಕಿರೋಹೀಣಿಜಃ ||
ಭಗವಂತನ ಕಪ್ಪು ತಲೆ ಗೂದಲೇ ಶ್ರೀಕೃಷ್ಣನಾಗಿ ಅವತರಿಸಿದ್ದರೆ
ಬಿಳಿತಲೆಗೂದಲು ಶೇಷನಲ್ಲಿ ಅವೇಶ ಹೊಂದಿ ಬಲರಾಮನಾಗಿ ಅವತರಿಸಿದೆ ..ಇಷ್ಟು ಉತ್ಕೃಷ್ಟವಾದ ತಲೆಗೂದಲು ಭಗವಂತನದ್ದು .
-ಶ್ರೀಮಹಾಭಾರತತಾತ್ಪರ್ಯನಿರ್ಣಯ 12-112
ಕೇಶೇನ ಕೃಷ್ಣರೂಪಿ ಸನ್ ಜಗತಿ ವರ್ತತ ಇತಿ ಕೇಶವಃ ||
ಕಪ್ಪು ತಲೆಗೂದಲಿಂದ ಶ್ರೀಕೃಷ್ಣನಾಗಿ ಭೂಮಿಯಲ್ಲಿ ಇರುವವನ.
-ವಾದಿರಾಜೀಯ
ಕೇಶೇನ ಕೃಷ್ಣ ಕೇಶೇನ ವಾತಿ ಗಂಧಯತಿ ದೈತ್ಯಾನಿತಿ ಕೇಶವಃ |
ಕಪ್ಪು ತಲೆಗೂದಲಿನ ಮೂಲಕ ಕಂಸನೇ ಮೊದಲಾದ ಅಸುರರನ್ನು ಸಂಹರಿಸಿದವನು.
-ಶ್ರೀಸತ್ಯಸಂಧೀಯ ವಿಷ್ಣುಸಹಸ್ರನಾಮ ಸಹಸ್ರನಾಮ ವ್ಯಾಖ್ಯಾನ
ಕೇಶಿವಧಾತ್ ಕೇಶವ
ಕೇಶಿ ಎಂಬ ಅಸುರರನ್ನು ಸಂಹರಿಸಿದವನು .
ಯಸ್ಮತ್ತ್ವಯೈವ ದುಷ್ಟಾತ್ಮ ಹತಃ ಕೇಶಿ ಜನಾರ್ದನ |
ತಸ್ಮಾತ್ ಕೇಶವನಾಮ್ನಾ ತ್ವಂ ಲೋಕೆ ಖ್ಯಾತಿಂ ಗಮಿಷ್ಯಸಿ ||
ಕೇಶಿ ಎಂಬ ಅಸುರನನ್ನು ಸಂಹರಿಸಿರುವುದರಿಂದಲೇ ನೀನು ಕೇಶವ ಎಂದೆನಿಸಿರುವಿ ಎಂದು ಭಗವಂತನಲ್ಲಿ ನಿವೇದಿಸಿಕೋಳ್ಳಲಾಗಿದೆ .
-ವಿಷ್ಣುಪುರಾಣ
ಕಸ್ಯ ಬ್ರಹ್ಮಣಃ ಈಶಃ ಕೇಶಃ |ವರಿತಿ ಜ್ಞಾನಮುಚ್ಯತೇ ಇತಿ ಜ್ಞಾನ ರೂಪತ್ವಾತ್ ವಃ | ಕೇಶಶ್ಚಾ ಸೌ ವಶ್ಚ ಕೇಶವಃ ||
ಚತುರ್ಮುಖ ಬ್ರಹ್ಮದೇವರ ಒಡೆಯ ಮತ್ತು ಜ್ಞಾನಸ್ವರೂಪಿ .ಆದ್ದರಿಂದ ಕೇಶವ ಎಂದು ಕರೆಯಲ್ಪಡುತ್ತಾನೆ .
-ಸುಖಶ್ರೇಷ್ಠಃ ವಹತಿ ವರ್ತಯತೀತಿ ಕೇಶವಃ
(ಯೋಗ್ಯರಿಗೆ ) ಸುಖಶ್ರೇಷ್ಠವಾದ ಮೋಕ್ಷ ಸುಖವನ್ನು ತಲುಪೀಸುವವನು ಅಥವ ಪ್ರವರ್ತಿಸುವವನು ಆದ್ದರಿಂದ ಕೇಶವ ಎಂದು ಕರೆಯಲ್ಪಡುತ್ತಾನೆ .
-ಶ್ರೀವಿದ್ಯಾದಿರಾಜೀಯ ವಿಷ್ಣುಸಹಸ್ರನಾಮ ವ್ಯಾಖ್ಯಾನ
***
ಅರ್ಚಿತಃ ಸಂಸ್ಮೃತೋ ಧ್ಯಾತಃ
ಕೀರ್ತಿತಃ ಕಥಿತಃ ಶ್ರುತಃ
ಯೋ ದದಾತ್ಯಮೃತತ್ವಂ ಹಿ
ಸಮಾಂ ರಕ್ಷತು ಕೇಶವಃ
ನಿನ್ನ ಅರ್ಚನ ಸಂಸ್ಮರಣೆ ,ಧ್ಯಾನ ,ಕೀರ್ತನೆ ,
ಮಾಹಾತ್ಮ್ಯ ,ಕಥನ ಶ್ರವಣಗಳನ್ನು ಮಾಡಿದವನಿಗೆ ನೀನು ಮುಕ್ತಿಯನ್ನು .ಕೊಡುವಿ ಅಂಥ ಕೇಶವ ! ನೀನು ರಕ್ಷಣೆ ಮಾಡು
-ಶ್ರೀಕೃಷ್ಣಾಮೃತ ಮಹಾರ್ಣವ
****
ಅಥಾಂಘ್ರಯೇ ಪ್ರೋನ್ನಮಿತಾಯ ವಿಷ್ಣೋ
ರುಪಾಹರತ ಪದ್ಮಭವೋsರ್ಹಣಾದಿಕಮ್ |
ಸಮರ್ಚ್ಯ ಭಕ್ತ್ಯಾsಭ್ಯಗೃಣಾಚ್ಛುಚಿಶ್ರವಾ
ಯನ್ನಾಭಿಪಂಕೇರುಹಸಂಭವಃ ಸ್ವಯಮ್ ||
ಧ್ಯಾತುಃ ಕಮಂಡಲಜಲಂ ತದುರುಕ್ರಮಸ್ಯ
ಪಾದಾವನೇಜನಪವಿತ್ರ ತಯಾ ನರೇಂದ್ರ||
ಸ್ವರ್ಧುನ್ಯಭೂನ್ನಸಿ ಸಾ ಪತತೀ ನಿರ್ಮಾಷ್ಟಿ
ಲೋಕತ್ರಯಂ ಭಗವತೋ ವಿಶದೇವ ಕೀರ್ತಿಃ ||
ವಾಮನ ರೂಪಿ ಪರಮಾತ್ಮನು ತ್ರಿವಿಕ್ರಮನಾಗಿ ಬೆಳೆದಾಗ ಸತ್ಯಲೋಕಕ್ಕೆ ಬಿಜಯಂ ಗೈದ ನಿನ್ನ ಪಾದಕ್ಕೆ ನಿನ್ನ ಪಾದನಖಾಗ್ರ ಸ್ಪರ್ಶಮಾತ್ರದಿಂದ ಸ್ಪೋಟಗೊಂಡ ಬ್ರಹ್ಮಾoಡದ ಹೊರಗಿಂದ ಬಂದ ನೀರನ್ನು ತನ್ನ ಕಮಂಡಲುವಿನಲ್ಲಿ ಹಿಡಿದು ಜೀವೋತ್ತಮರಾದ ಬ್ರಹ್ಮ ದೇವರು ಪೂಜೆಗೈದು ಕೃತಾರ್ಥರಾದರಲ್ಲವೇ ? ಅದೇ ನೀರು ನಿನ್ನ ಪಾದ ಸಂಗದಿಂದ ಪವಿತ್ರ ಗಂಗೆಯಾಗಿ ಭುವನ ಪಾವನವೆನಿಸಿದೆ .
-ಶ್ರೀಮದ್ ಭಾಗವತಪುರಾಣ 8-20-3,4,5
ಯಚ್ಛೌಚ ನಿಸೃತ ಸರಿತ್ಪ್ರವರೋದಕೇನ ತೀರ್ಥೇನ
ಮೂರ್ಧ್ನ್ಯ ಧೀಧೃತೇನ ಶಿವಃ ಶಿವೋ ಭೂತ್ ||
ಪರಶಿವನೂ ನಿನ್ನ ಈ ಪಾದೋದಕವನ್ನು ಧರಿಸಿ ಸದಾಶಿವ(ಮಂಗಲ)ನಾದನಲ್ಲವೇ ಪ್ರಭು ! .
-ಶ್ರೀಮದ್ ಭಾಗವತಪುರಾಣ
ಹೀಗೆ ಕ -ಬ್ರಹ್ಮ -ಈಶ -ರುದ್ರರನ್ನು ತನ್ನ ಪಾದಸೇವನೆಯಲ್ಲಿ ತೊಡಗಿಸಿದ ಕೇಶವ ನೀನು . (ಈ )ಲಕ್ಸ್ಮೀ ದೇವಿಗೆ (ಶ) ಚರಣಭಜನೆಯ ಸೌಖ್ಯ ಕೊಟ್ಟ ಈಶ ನೀನು .ನನ್ನಿಂದಲೂ
ನಿನ್ನ ಚರಣಭಜನೆ ಮಾಡಿಸಿಕೊ ಎಂದು ಶ್ರೀಕನಕದಾಸಾರ್ಯರು
ಈಶ ನಿನ್ನ ಚರಣಾ ಭಜನೆ ಆಶೆಯಿಂದ ಮಾಡುವೇನು |
ದೋಷರಾಶಿ ನಾಶಮಾಡು ಶ್ರೀಶ ಕೇಶವ ||
ಎಂದು ಕೇಶವರೂಪಿ ಪರಮಾತ್ಮನನನ್ನು ಮೊದಲ ಪದ್ಯದಲ್ಲಿ ವರ್ಣಿಸಿದ್ದಾರೆ
|| ಶ್ರೀಕೃಷ್ಣಾರ್ಪಣಾಮಸ್ತು ||
ಮೊದಲನೇ ಪದ್ಯದ ವಿವರಣೆ ಮುಗಿಯಿತು
***