Showing posts with label ದಾಸರ ಭಜಿಸುತ ಕ್ಲೇಶವ ಕಳೆಯಿರೊ kamalanabha vittala. Show all posts
Showing posts with label ದಾಸರ ಭಜಿಸುತ ಕ್ಲೇಶವ ಕಳೆಯಿರೊ kamalanabha vittala. Show all posts

Thursday 5 August 2021

ದಾಸರ ಭಜಿಸುತ ಕ್ಲೇಶವ ಕಳೆಯಿರೊ ankita kamalanabha vittala

 ..

ಗುರುಸ್ತುತಿ

kruti by Nidaguruki Jeevubai


ದಾಸರ ಭಜಿಸುತ ಕ್ಲೇಶವ ಕಳೆಯಿರೊ

ವಾಸುದೇವನ ಭಕ್ತರಾದ ಶ್ರೀಪುರಂದರ ಪ


ಮೀಸಲ ಮನದಲಿ ಕೇಶವನಡಿಗಳ

ಆಸೆಲಿ ಪೂಜಿಪ ದಾಸರೊಳಗೆ ಶ್ರೇಷ್ಠ ಅ.ಪ


ಪುರಂದರ ಗಡದೊಳು ಹಿರಿಯನೆಂದೆನಿಸಿದ

ವರದಪ್ಪನಿಗೆ ವರಕÀುವರ ನೆಂದೆನಿಸಿದೀ

ಧರೆಯೊಳು ತನಗ್ಯಾರು ಸರಿಯಿಲ್ಲದಂತೆ ಮೆರೆಯೆ

ಸಿರಿಯರಸನು ಶೀಘ್ರದಲಿ ತಾನರಿಯುತ 1

ಬಂದನು ಮಗನಿಗೆ ಮುಂಜಿಯೆಂದೆನುತಲಿ

ಚಂದದಿಂದಲಿ ಬೇಡಲು ಧಣಿಯ

ಬಂದೆಯಾತಕೆ ನಮ್ಮ ಚಂದದ ಬೀದಿಲಿ

ಹಿಂದಕೆ ತೆರಳೆನೆ ಬಂದನು ಬಾರಿ ಬಾರಿ 2


ಹರಿಯೆಂದು ತಿಳಿಯದೆ ಜರಿಯುತ ನುಡಿಯಲು

ಮರಳಿ ಮರಳಿ ಯಾಚಿಸೆ ಬಿಡದೆ

ತೆರಳನು ಈ ವೃದ್ಧ ತೆರಳಿಪೆನೆನುತಲಿ

ಸರಸರ ತೆಗೆಯುತ ಸುರಿದನು ನಾಣ್ಯವ 3


ನೋಡುತ ಶ್ರೀಹರಿ ಗಾಡದಿ ಕೈನೀಡೆ

ನೀಡಿದ ಸವೆದ ರೊಕ್ಕವ ನೋಡೀ

ಗಾಡನೆ ಬಂದು ನಾಯಕನ ಸತಿಯಳನು

ಬೇಡಿದ ಪುಣ್ಯವು ಬಾಹೋದೆನುತಲಿ 4


ಏನು ನೀಡಲಿ ಎನಗೇನಿಹುದೆನ್ನಲು

ಮಾನಿನಿ ಮೂಗುತಿ ನೀಡೆಂದೆನಲು

ಶ್ರೀನಿಧಿಗರ್ಪಣೆ ಮಾನಿನಿ ಮಾಡಲು

e್ಞÁನಿಗಳರಸನು ಗಾಡ ಹಿಂತಿರುಗುತ 5


ಗಾಡನೆ ಮೂಗುತಿ ನೀಡುತ ದ್ರವ್ಯವ

ಬೇಡಲು ಬೇಗದಿ ನೀಡುತ ನುಡಿದನು

ನೋಡುತ ವಡವೆಯ ನೀಡಿದ ಭರಣಿಲಿ

ಓಡುತ ಬಂದು ನೋಡಿದ ಸತಿ ಮುಖವಾ 6


ಮೂಗುತಿ ಎಲ್ಲೆನೆ ಬೇಗದಿ ನಡುಗುತ

ನಾಗವೇಣಿಯು ಪ್ರಾರ್ಥಿಸಿ ಹರಿಯ

ಆಗ ಕುಡಿವೆ ವಿಷವೆನ್ನುತ ಕರದಲಿ

ನಾಗವಿಷದ ಬಟ್ಲಲಿ ಇರಲು 7

ತೋರಿದಳಾಗಲೆ ತನ್ನಯ ರಮಣಗೆ

ತೋರದಿರಲು ಮುಂದಿನ ಕಾರ್ಯ

ಭಾರಿ ಆಲೋಚನೆಯ ಮಾಡುತ ಮನದಲಿ

ಸಾರಿದ ತನ್ನ ವ್ಯಾಪಾರದ ಸ್ಥಳಕೆ 8


ತೆರೆದು ನೋಡಲು ಆ ವಡವೆಯ ಕಾಣದೆ

ಮಿಗೆ ಚಿಂತೆಯು ತಾಳುತ ಮನದಿ

ನಗಧರನ ಬಹು ಬಗೆಯಲಿ ಪೊಗಳುತೆ

ತೆಗೆದ ಅಸ್ಥಿರ ರಾಜ್ಯದಿ ಮನವ 9

ಕಳವಳ ಪಡುತಲಿ ಆ ಲಲನೆಯ ಸಹಿತದಿ

ತನುಮನ ಧನ ಹರಿಗರ್ಪಿಸುತಾ

ಕ್ಷಣ ಬಿಡದಲೆ ಹರಿ ಚರಣವ ಸ್ಮರಿಸುತ

ಕಮಲನಾಭ ವಿಠ್ಠಲನೆನ್ನುವ ಹರಿ 10

***