ಎಣಿಸಲೆನ್ನಳವೆ ನಿನ್ನ ಮಹಿಮೆಗಳ
ಗುಣಗಣನುತ ನಾಮ ಕೋದಂಡರಾಮ ಪ.
ಜಲದಿ ಸಂಚರಿಸಿದೆ ಬಲುಗಿರಿಯ ಧರಿಸಿದೆ
ಲಲನೆ ಧರಿತ್ರಿಯ ಪೊರೆದೆ
ಛಲದಿ ಹಿರಣ್ಯಕಶಿಪುವ ಸಂಹರಿಸಿದೆ
ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1
ದುರುಳ ರಾಯರ ತರಿದೆ
ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ
ತರುಣಿಯರ ವ್ರತ ಗೆಲಿದೆ
ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2
ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ
ಕರುಣಿಸು ಗುಣಸಂಪನ್ನ
ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ
ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
***