kruti by Nidaguruki Jeevubai
ಲಾಲಿ ಲಾಲಿ ಹನುಮ ಲಾಲಿ ಬಲಭೀಮ
ಲಾಲಿ ಲಾಲಿ ಮಧ್ವರಾಯ ಗುರುವರ್ಯ ಪ
ತ್ರೇತೆಯಲಿ ರಘುಪತಿಯ ಸೇವೆ ಸಲಿಸಿದವನೆ
ಸೀತೆಯನು ಕಂಡು ರಕ್ಕಸರ ಗೆಲಿದವನೆ
ದೂತರಾವಣಗೆ ನೀತಿಗಳ ಕಲಿಸಿದವನೆ
ಭೀತಿಯಿಲ್ಲದೆ ಲಂಕಾಪುರವ ದಹಿಸಿದವನೆ 1
ದ್ವಾಪರದಿ ಶ್ರೀ ಕೃಷ್ಣನನು ಪೂಜಿಸಿದವನೆ
ಪಾಪಿ ದುರ್ಯೋಧನಾದಿಗಳ ಗೆಲಿದವನೆ
ಕೋಪದಲಿ ಜರಾಸಂಧನನು ಸೀಳಿದವನೆ
ಶ್ರೀಪತಿಯ ಸೇವೆಯಲಿ ನಿಸ್ಸೀಮನೆನಿಸಿದವನೆ2
ಮಧ್ವಮತದವರನುದ್ಧರಿಸಿ ಮೆರೆದವನೆ
ಶ್ರದ್ಧೆಯಿಂದಲಿ ಹರಿಯ ಭಜಿಪ ಗುರುವರನೆ
ಮುದ್ದು ಕಮಲನಾಭ ವಿಠ್ಠಲನೊಲಿಸಿದವನೆ
ಶುದ್ಧ ಮೂರುತಿ ಉಡುಪಿ ಕೃಷ್ಣನರ್ಚಿಸಿದವನೆ3
***