Showing posts with label ತೀರ್ಥಯಾತ್ರೆ ಎಂಬುದು ಇದೆ ನೋಡಿ ಪಾದ ಕೂಡಿ mahipati TEERTHAYAATRE EMBUDU IDE NODI PAADA KOODI. Show all posts
Showing posts with label ತೀರ್ಥಯಾತ್ರೆ ಎಂಬುದು ಇದೆ ನೋಡಿ ಪಾದ ಕೂಡಿ mahipati TEERTHAYAATRE EMBUDU IDE NODI PAADA KOODI. Show all posts

Wednesday, 1 December 2021

ತೀರ್ಥಯಾತ್ರೆ ಎಂಬುದು ಇದೆ ನೋಡಿ ಪಾದ ಕೂಡಿ ankita mahipati TEERTHAYAATRE EMBUDU IDE NODI PAADA KOODI



 ತೀರ್ಥಯಾತ್ರೆ ಎಂಬುದು ಇದೆ ನೋಡಿ

 ಪಾದ ಕೂಡಿ ||ಪ || 


ಭ್ರೂಮಧ್ಯವೆಂಬುದಿದೆ ಕಾಶಿ 

ಬ್ರಹ್ಮಸುಖ ತುಳುಕುತಿದೆ ಸೂಸಿ 

ನೇಮದಿಂದಲಿ ನೋಡಲು ಧ್ಯಾನಿಸಿ 

ಕರ್ಮಪಾಶ ಹೋಯಿತು ಛೇದಿಸಿ|| 1 ||


ತ್ರೀವೇಣಿ ಸಂಗಮ ಸುಕ್ಷೇತ್ರ 

ಜೀವ ಪ್ರಾಣ ಮಾಡಿತು ಪವಿತ್ರ 

ದಿವ್ಯ ದೇಹವಾಯಿತು ಸರ್ವಗಾತ್ರ

ಭವಹಿಂಗಿ ಹೋಯಿತು ವಿಚಿತ್ರ ||2 ||


ಭ್ರಮರ ಗುಂಫ ಎಂಬುದು ಗಯಾ

ನೇಮದಿಂದ ಕಂಡವಗ ವಿಜಯ 

ಪ್ರೇಮಭಾವೆಂಬುದು ಸರ್ವಕ್ರಿಯ 

ವರ್ಮದೋರಿತು ಗುರು ಪುಣ್ಯೋದಯ|| 3 ||


ಪೃಥ್ವಿ ಪರ್ಯವಣಿದೆವೆ ನೋಡಿ 

ತತ್ವದೊಳೇಕತ್ವ ಸಮಗೂಡಿ 

ಹಿತತ್ವವೆಂಬ ದಯ ಮಾಡಿ

ಕಥತ್ವವೆಂಬು ದೀಡಾಡಿ ||4 ||


ಕಣ್ಣ ದೋರಿ ಬಂತೆನಗ ತಾರ್ಕಣ್ಯ

ಕಣ್ಣು ಕಂಡುಗೆಯಿತು ಧನ್ಯಧನ್ಯ 

ಚಿಣ್ಣ ಮಹಿಪತಿಗಿದೆ ಸರ್ವಪುಣ್ಯ 

ಇನ್ನೊಂದು ಪಥವ್ಯಾಕೆ ಅನ್ಯ|| 5||

***


ತೀರ್ಥಯಾತ್ರೆ ಎಂಬುದು ಇದೆ ನೋಡಿ ಪಾದ ಕೂಡಿ ಪ  


ಭ್ರೂಮಧ್ಯವೆಂಬುದಿದೆ ಕಾಶಿ ಬ್ರಹ್ಮಸುಖ ತುಳುಕುತಿದೆ ಸೂಸಿ ನೇಮದಿಂದಲಿ ನೋಡಲು ಧ್ಯಾನಿಸಿ ಕರ್ಮಪಾಶ ಹೋಯಿತು ಛೇದಿಸಿ 1 

ತ್ರೀವೇಣಿ ಸಂಗಮ ಸುಕ್ಷೇತ್ರ ಜೀವ ಪ್ರಾಣ ಮಾಡಿತು ಪವಿತ್ರ ದಿವ್ಯ ದೇಹವಾಯಿತು ಸರ್ವಗಾತ್ರ ಭವಹಿಂಗಿ ಹೋಯಿತು ವಿಚಿತ್ರ 2 

ಭ್ರಮರ ಗುಂಫ ಎಂಬುದು ಗಯಾ ನೇಮದಿಂದ ಕಂಡವಗ ವಿಜಯ ಪ್ರೇಮಭಾವೆಂಬುದು ಸರ್ವಕ್ರಿಯ ವರ್ಮದೋರಿತು ಗುರು ಪುಣ್ಯೋದಯ 3 

ಪೃಥ್ವಿ ಪರ್ಯವಣಿದೆವೆ ನೋಡಿ ತತ್ವದೊಳೇಕತ್ವ ಸಮಗೂಡಿ ಹಿತತ್ವವೆಂಬ ದಯ ಮಾಡಿ ಕಥತ್ವವೆಂಬು ದೀಡಾಡಿ 4 

ಕಣ್ಣ ದೋರಿ ಬಂತೆನಗ ತಾರ್ಕಣ್ಯ ಕಣ್ಣು ಕಂಡುಗೆಯಿತು ಧನ್ಯಧನ್ಯ ಚಿಣ್ಣ ಮಹಿಪತಿಗಿದೆ ಸರ್ವಪುಣ್ಯ ಇನ್ನೊಂದು ಪಥವ್ಯಾಕೆ ಅನ್ಯ 5
****