Showing posts with label ಭಕ್ತವತ್ಸಲ ಬಂದು ಬಾಗಿಲಲಿ ramesha. Show all posts
Showing posts with label ಭಕ್ತವತ್ಸಲ ಬಂದು ಬಾಗಿಲಲಿ ramesha. Show all posts

Thursday, 14 November 2019

ಭಕ್ತವತ್ಸಲ ಬಂದು ಬಾಗಿಲಲಿ ankita ramesha

by ಗಲಗಲಿಅವ್ವನವರು
ಭಕ್ತವತ್ಸಲ ಬಂದು ಬಾಗಿಲಲಿ ನಿಂತುಎತ್ತ ಹೋದನೆಂದು ಧಿಗಿಲು ಎನುತಮತ್ಯಾಕೆ ಬರಲಿಲ್ಲವೊ ಅರ್ಜುನರಾಯ ಪ.

ವೀರರಾಯರÀ ಸೇವೆ ಪರಿಪರಿ ಮಾಡಿದ್ದುಮರೆತುಕೊಂಡು ಧರ್ಮ ದೊರೆಯಾಗಿ ಕುಳಿತ 1

ಪಾಂಚಾಲಿ ರಮಣನು ಪಂಚ ಪಗಡೆಯನಾಡಿವಂಚನೆ ಮಾಡದೆ ಹಂಚಿಕೆಯಲಿಕುಳಿತ 2

ಧಿಟ್ಟ ಭೀಮರಾಯ ಹುಟ್ಟು ಬಚ್ಚಿಟ್ಟುಕೊಂಡುಸಿಟ್ಟಿಲಿಂದ ಮೈ ಮುಟಿಗ್ಯಾಗಿ ಕುಳಿತ 3

ಪುಂಡ ಭೀಮರಾಯ ಮಂಡಿ ಕೆದರಿಕೊಂಡುಖಂಡಗನ್ನವ ಉಂಡು ದಿಂಡೆನ್ಹಾಂಗ ಕುಳಿತ 4

ಚಲ್ವ ಅರ್ಜುನರಾಯ ಬಿಲ್ಲು ಮೂಲೆಗೆ ಇಟ್ಟುಒಲ್ಲಿಯ ಮುಸುಕು ಹಾಕಿ ಎಲ್ಲೋ ಹೋಗಿ ಕುಳಿತ 5

ಹೆÀಚ್ಚಿನ ಗಾಂಡೀವ ಬಚ್ಚಿಟ್ಟು ಕೋಣ್ಯಾಗೆಹುಚ್ಚನ್ಹಾಂಗೆಮಾರಿಮುಚ್ಚಿಕೊಂಡು ಕುಳಿತ6

ಚದುರ ನಕುಲರಾಯ ಎದುರಿಗೆ ಬಾರದೆಹೆದರಿಕೊಂಡು ತಾನು ಕುದುರೆ ಮನೆಯ ಹೊಕ್ಕ 7

ಧನವೆತ್ತಿಸಹದೇವಘನವಿದ್ಯಾನರಿಯದೆದನಕರುಗಳನ್ನೆಲ್ಲ ಅನುಸರಿಸಿ ಇರುವ 8

ಪಾಂಡವರೆ ಶ್ರೇಷ್ಠರು ಧೈರ್ಯವೆ ಇರಲೆಂದುಶೌರಿಕುರುರಾಯಗೆ ತಾ ನುಡಿದನು9

ಇಷ್ಟೂರು ಹರಿಗಂಜಿ ಬಿಟ್ಟರು ಕೈಕಾಲುಧಿಟ್ಟ ಬಲರಾಮ ತಾ ಘÀಟ್ಯಾಗಿ ಕೈ ಹೊಯಿದನು 10

ಇಷ್ಟೊಂದು ಗಾಬರಿ ದಿಟ್ಟೆಯರೆ ಆಗದಿರಿಕೊಟ್ಟನುಅಭಯದಿಟ್ಟ ರಾಮೇಶ11
********