Showing posts with label ಕನಕಮುನಿ ಕರಕಮಲ ಪೂಜಿತಾಂಘ್ರಿ jagannatha vittala KANAKA MUNI KARAKAMALA POOJITANGHRI. Show all posts
Showing posts with label ಕನಕಮುನಿ ಕರಕಮಲ ಪೂಜಿತಾಂಘ್ರಿ jagannatha vittala KANAKA MUNI KARAKAMALA POOJITANGHRI. Show all posts

Saturday, 14 December 2019

ಕನಕಮುನಿ ಕರಕಮಲ ಪೂಜಿತಾಂಘ್ರಿ ankita jagannatha vittala KANAKA MUNI KARAKAMALA POOJITANGHRI

 Audio by Vidwan Sumukh Moudgalya



 ಶ್ರೀ ಜಗನ್ನಾಥದಾಸಾರ್ಯ ವಿರಚಿತ 

 ಕನಕಾಚಲ ಶ್ರೀ ನರಸಿಂಹ ದೇವರ ಸ್ತುತಿ

 ರಾಗ : ಕಾಂಬೋಧಿ    ಖಂಡಛಾಪು


ಕನಕಮುನಿ ಕರಕಮಲ ಪೂಜಿತಾಂಘ್ರಿ
ಮನುಜಮೃಗವೇಷ ಮಾರಮಣ ನಿನಗಾನಮಿಪೆ ॥ಪ॥

ನಿರ್ದೋಷ ಸುಖಪೂರ್ಣ ನಿರವಧಿಕ ಮಹಮಹಿಮ
ಸ್ವರ್ಧೂನಿ ಪಿತನೆ ಸಮಾಭ್ಯಧಿಕ ಶೂನ್ಯ
ವರ್ಧಿಸಲಿ ನಿನ್ನಲ್ಲಿ ಸದ್ಭಕ್ತಿ ಖಳಸಂಪ್ರ
ಮರ್ದನ ಮಮಃ ಸ್ವಾಮಿ ಸರ್ವರಂತರ್ಯಾಮಿ ॥೧॥


ತೀರ್ಥಪದ ನಿನ್ನ ಸತ್ಕೀರ್ತಿ ಸರ್ವತ್ರ ಸಂ-
ಕೀರ್ತಿಸುವ ಭಕ್ತರ ಭವಾಬ್ಧಿಹರನೆ
ಪಾರ್ಥಸಖ ಸರ್ವದಾ ಪ್ರಾರ್ಥಿಸುವೆ ನಿನ್ನ ಚಿ-
ನ್ಮೂರ್ತಿ ಮನದಲ್ಲಿ ಸ್ಪೂರ್ತಿಸಲಿ ಸರ್ವದಾ ॥೨॥

ಸೂತ್ರನಾಮಕ ಪ್ರಾಣಮಿತ್ರ ಭಾರತ ಪಂಚ-
ರಾತ್ರಾದಿ ಆಗಮ ಸ್ತೋತ್ರ ಪ್ರೀಯಾ
ಕ್ಷೇತ್ರಜ್ಞ ಶ್ರೀಜಗನ್ನಾಥವಿಠ್ಠಲ ಅಹೋ-
ರಾತ್ರಿಯಲಿ ನಿನ್ನವರ ಸಹವಾಸವೆ ಕೊಡು ಎನಗೆ ॥೩॥
******

ಜಗನ್ನಾಥದಾಸರು
ಕನಕಮುನಿ ಕರಕಮಲ ಪೂಜಿತಾಂಘ್ರಿ
ಮನುಜಮೃಗವೇಷ ಮಾರಮಣ ನಿನಗಾನಮಿಪೆ ಪ

ನಿರವದ್ಯ ನಿರವಧಿಕ ಮಹಮಹಿಮ
ಸ್ವರ್ದುನಿ ಪಿತನೆ ಸಮಭ್ಯಧಿಕ ಶೂನ್ಯ
ವರ್ಧಿಸಲಿ ನಿನ್ನಲ್ಲಿ ಸದ್ಭಕ್ತಿ ಖಳಸಂಪ್ರ
ಮರ್ದನ ಮಮಸ್ವಾಮಿ ಸರ್ವರಂತರ್ಯಾಮಿ 1

ತೀರ್ಥಪದ ನಿನ್ನ ಸತ್ಕೀರ್ತಿ ಸರ್ವತ್ರ
ಕೀರ್ತಿಸುವ ಭಕ್ತರ ಭವಾಬ್ಧಿಹರನೆ
ಪಾರ್ಥಸಖ ಸರ್ವದಾ ಪ್ರಾರ್ಥಿಸುವೆ ನಿನ್ನ ಚಿ
ನ್ಮೂರ್ತಿ ಮನದಲ್ಲಿ ಸ್ಪೂರ್ತಿಸಲಿ ಸರ್ವದಾ 2

ಸೂತ್ರನಾಮಕ ಪ್ರಾಣಮಿತ್ರ ಭಾರತ ಪಂಚ
ರಾತ್ರಾದಿ ಆಗಮಸೂತ್ರಪ್ರಿಯ
ಕ್ಷೇತ್ರಜ್ಞ ಶ್ರೀ ಜಗನ್ನಾಥವಿಠ್ಠಲ ಅಹೋ
ರಾತ್ರಿಯಲಿ ನಿನ್ನವರ ಸಹವಾಸ ಕೊಡು ಎನಗೆ3
********