Showing posts with label ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ purandara vittala. Show all posts
Showing posts with label ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ purandara vittala. Show all posts

Friday, 6 December 2019

ಸಂತಾನಸರೋವರ ತೀರದಲ್ಲಿ ನಿಂತ ಕರಿಕೃಷ್ಣರಾಯ purandara vittala

ರಾಗ ಧನಶ್ರೀ ಆದಿ ತಾಳ

ಸಂತಾನಸರೋವರ ತೀರದಲ್ಲಿ
ನಿಂತ ಕರಿಕೃಷ್ಣರಾಯ ನಿನಗೆ ನಮಿಸುವೆನು ||ಪ||

ಅಂತರಂಗದಲ್ಲಿದ್ದ ಅಘಗಳ ಕಳೆದು
ಸಂತಾನ ಸೌಭಾಗ್ಯ ಕೊಡುವ ದೀನಬಂಧು ||

ವೃಂದಾಚರಣದಲ್ಲಿ ನಂದ ವಾಲ್ಮೀಕದಲ್ಲಿ
ಚಂದದಿ ಮೇಸುದಿದ್ದ ಅಲ್ಲಿಂದ ಬಂದ ದೊರೆ ||

ಅಂಡಜವಾಹನನೆ ಕುಂಡಲಿಶಯನನೆ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನೆ ||
***

pallavi

santAna sarOrava tIradalli ninta kari krSNarAya ninage namisuvenu

caraNam 1

antarangadallidda aghagaLa kaLedu santAna saubhAgya koDuva dInabandhu

caraNam 2

vrndA caraNadalli nanda vAlmIkadalli candadi mEsudidda allinda banda dore

caraNam 3

aNdaja vAhanane kuNDali shayanane puNDarIkAkSa shrI purandara viTTalane
***