Showing posts with label ನಾರಿ ಶಿರೋಮಣಿ ವಾರಿಜ ಮುಖಿಯೆ mohana vittala NARI SHIROMANI VARIJA MUKHIYE. Show all posts
Showing posts with label ನಾರಿ ಶಿರೋಮಣಿ ವಾರಿಜ ಮುಖಿಯೆ mohana vittala NARI SHIROMANI VARIJA MUKHIYE. Show all posts

Monday 7 June 2021

ನಾರಿ ಶಿರೋಮಣಿ ವಾರಿಜ ಮುಖಿಯೆ ankita mohana vittala NARI SHIROMANI VARIJA MUKHIYE

Audio by Vidwan Sumukh Moudgalya


 ಶ್ರೀ ಮೋಹನದಾಸಾರ್ಯ ವಿರಚಿತ 


" ಬಾಗಿಲು ತಟ್ಟುವ ಪದ "

(ಶ್ರೀ ಹರಿಯು ಬಂದು ಬಾಗಿಲು ತಟ್ಟಿದಾಗ ಲಕ್ಷ್ಮೀದೇವಿಯು ನಿನ್ನ ಹೆಸರು ಹೇಳಿದರೆ ಮಾತ್ರ ಬಾಗಿಲು ತೆರೆಯುವುದಾಗಿ ಹೇಳಿ, ನೀನಾರೆಂದು ಕೇಳಿದಾಗ ಶ್ರೀ ಹರಿಯು ತಾನು ದಶಾವತಾರಿ ಎಂದು ಹೇಳುತ್ತಾನೆ. ಆದರೂ ಲಕ್ಷ್ಮೀದೇವಿಯು ವ್ಯಂಗ್ಯವಾಗಿ ಮಾತನಾಡಿ ಬಾಗಿಲು ತೆಗೆಯುವುದಿಲ್ಲ ಹೋಗಯ್ಯ ಎಂದು ಹೇಳುತ್ತಾಳೆ. ಕೊನೆಗೆ ಶ್ರೀಹರಿಗೆ ಮನಸೋತು ಎನ್ನಪರಾಧವನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿ ಶ್ರೀಹರಿಯಪಾದಕ್ಕೆರಗುತ್ತಾಳೆ.ಶ್ರೀಹರಿಯ ಮತ್ತು ಲಕ್ಷ್ಮೀದೇವಿಯ ಮಾತುಕತೆ ಬಹಳ ವಿನೋದವಾಗಿದೆ. ದಾಸರು ಮಾಡಿರುವ  ಈ ಸಂಭಾಷಣೀಯ ಕೃತಿಯು ಬಹಳ ಅದ್ಭುತವಾದದ್ದು.)

 ರಾಗ : ತಿಲಂಗ್ 


ನಾರಿ ಶಿರೋಮಣಿ ವಾರಿಜ ಮುಖಿಯೆ ಗಂ

ಭೀರಳೆ ಬಾಗಿಲು ತೆರೆಯೇ ॥ಪ॥


ಆರು ನಿನ್ನಯ ಪೆಸರೆನಗೆ ಪೇಳದಲೆ 

ದ್ವಾರವ ತೆಗೆಯೆನು ನಾನು ॥ಪ॥


ನೀರೊಳು ಸಂಚರಿಸಿ ಕ್ರೂರ ತಮನ ಕೊಂದ

ಧೀರ ಮಚ್ಛ ನಾ ಕಾಣೇ ನಾರೀ।

ಧೀರ ಮತ್ಸ್ಯನು ನೀನಾದರೊಳಿತು ದೊಡ್ಡ

ವಾರಿಧಿಯೊಳಗಿರು ಹೋಗಯ್ಯ॥೧॥


ಸುರರು ಅಸುರರು ಕೂಡಿ ಶರಧಿ ಶೋಧಿಸುತಿರಲು

ಗಿರಿಯ ತಾಳಿದ ಕೂರ್ಮ ಕಾಣೆ ನಾ | 

ಗಿರಿಯ ತಾಳಿದ ಕೂರ್ಮನಾದರೊಳಿತು ನಿನ್ನಾ

ಸರಿಬಂದ ಜಲದೊಳಗಿರು ಹೋಗಯ್ಯ ॥೨॥


ಧರೆಯ ಕದ್ದಸುರನ ದಾಡಿಯಿಂದಲಿ ಸೀಳ್ದ

ವರಹ ಕಾಣೆಲೆ ವಾರಿಜಾಕ್ಷಿ ನಾ | 

ವರಹನು ನೀನಾದರೊಳಿತು ದೊಡ್ಡ

ವಾನಾಂತ್ರದೊಳಗಿರು ಹೋಗಯ್ಯ ॥೩॥


ತರಳನ ಮೊರೆ ಕೇಳಿ ಹಿರಣ್ಯಕಶಿಪುವ ಕೊಂದ

ನರ ಮೃಗ ರೂಪ ಕಾಣೆ ನಾರೀ ನಾ।

ನರ ಮೃಗ  ರೂಪಾ ನೀನಾದರೊಳಿತು ದೊಡ್ಡ

ಗುಂಹ್ಯೆದೊಳಗೆ ಇರು ಹೋಗಯ್ಯ॥೪॥


ಭೂಮಿ ಮೂರಡಿ ಮಾಡಿ ಬಲಿಯ ಪಾತಾಳಕಿಟ್ಟ

ವಾಮನ ಕಾಣೇ ವಾರಿಜಾಕ್ಷೀ ನಾ|

ವಾಮನ ನೀನಾದರೊಳಿತು ನಿನ್ನ

ಪ್ರೇಮ ಬಂದಲಿಯಿರು ಹೋಗಯ್ಯ ॥೫॥


ತಂದಿ ಆಜ್ಞಾವಮೀರಿ ತಾಯಿಶಿರವಾನಳಿದಾ

ಕೊಂದಾವನು ನಾನೇ ಕೋಮಲಾಂಗಿ ನಾ।

ಕೊಂದವನು ನೀನಾದರೊಳಿತು ದೊಡ್ಡ

ವೃಂದಾದೊಳಗಯಿರು ಹೋಗಯ್ಯ ॥೭॥

 

ಲಂಡ ರಾವಣನ ಶಿರವ ಚಂಡಾಡಿ ಸೀತೆ ತಂದ  ಪ್ರ-

ಚಂಡ ವಿಕ್ರಮ ರಾಮ ಕಾಣೇ  ನಾ 

ಪ್ರಚಂಡ ವಿಕ್ರಮ ನೀನಾದರೊಳಿತು ಕೋತಿ

ಹಿಂಡಿನೊಳಗ ಇರು ಹೋಗಯ್ಯ ॥೭॥


ಮಧುರಾಪುರದಿ ಪುಟ್ಟಿ ಮಾವ ಕೌಂಸನ ಕೊಂದ

ಚದುರ ಕಾಣೆಲೆ ಶಾಮಲಾಂಗೀ ನಾ ।

ಚದುರ ನೀನಾದರೊಳಿತು  ಗೋಪಿ-

ರಧರ ಚುಂಬಿಸುತಿರು ಹೋಗಯ್ಯ ॥೮॥


ವ್ರದ್ಧ ಬ್ರಾಹ್ಮಣನಾಗಿ ವ್ರತವನಳಿದಾ ಬಂದಾ

ಬೌದ್ಧ ಕಾಣಲೇ ಮಂದಗಮನೇ ನಾ ।

ಬೌದ್ಧನು ನೀನಾದರೊಳಿತು ನಿನ್ನಾ

 ನಿನ್ನಬುದ್ಧಿ ಬಂದಲ್ಲಿರು ಹೋಗಯ್ಯ ॥೯॥


ತುರಗವನೇರಿ ಕಲ್ಕಿಯುಯೊದ್ದು ಶಾಂ-

ತ ರಾಜ್ಯವನೆತ್ತಿ ಕಾಣೇ ನಾರೀ ನಾ।

ಪರಮ  ಪುರುಷನಹುದೋ ರಾಹುತರಿರುವ

 ರಾಹುತರಿರುವ ಸ್ಥಳದಲ್ಲಿರು ಹೋಗಯ್ಯ॥೧೦॥


ಕನ್ಯಾಮಣಿಯೆ  ಕೇಳ ಕಮನೀಯ ಗುಣ ಮೋ -

 ಹನ್ನವಿಠಲರೇಯಾ ಕಾಣೆ | 

ಎನ್ನ ಅಪರಾಧವು ಕ್ಷಮಿಸಬೇಕೆನುತಲಿ 

ಚೆನ್ನಾಗಿ ಪಾದಕ್ಕೆರಗಿದಳು ತಾ ॥೧೧॥

******