Showing posts with label ಧೀರೇಂದ್ರ ಸುಕರಾರ್ಚಿತ ಗುರು ರಾಘವೇಂದ್ರ prahladavarada shreehari vittala. Show all posts
Showing posts with label ಧೀರೇಂದ್ರ ಸುಕರಾರ್ಚಿತ ಗುರು ರಾಘವೇಂದ್ರ prahladavarada shreehari vittala. Show all posts

Wednesday 1 September 2021

ಧೀರೇಂದ್ರ ಸುಕರಾರ್ಚಿತ ಗುರು ರಾಘವೇಂದ್ರ ankita prahladavarada shreehari vittala

 ಶ್ರೀ ಪ್ರಹ್ಲಾದವರದ ಹರಿವಿಠ್ಠಲರು 

ಹೆಸರು : ಶ್ರೀ ರಾಘವೇಂದ್ರರಾಯರು., ಬೆಂಗಳೂರು

ಅಂಕಿತ : ಪ್ರಹ್ಲಾದ ವರದ ಶ್ರೀ ಹರಿ ವಿಠ್ಠಲ

ಶ್ರೀ ರಾಯರ ಸ್ತೋತ್ರ ಪದ...


ರಾಗ : ಕಾಂಬೋಧಿ     ತಾಳ : ಝ೦ಪೆ


ಧೀರೇಂದ್ರ ಸುಕರಾರ್ಚಿತ -

ಗುರು ರಾಘವೇಂದ್ರ ।। ಪಲ್ಲವಿ ।।


ನೀರದಪ್ರಕಾಶರವರ -

ವೃಂದಾವನಸ್ಥಿತ ।। ಅ ಪ ।।


ಸುಂದರ ಬದರಿಯಿಂದ -

ತಂದ ಶಿಲೆಯಿಂದ ।

ಚೆಂದಾಗಿ ರಚಿಸಿದ -

ವೃಂದಾವನದಿ ನಿಂತ ।। ಚರಣ ।।


ಮಂತ್ರಾಲಯಕೆ ಮಿಗಿಲು -

ತಂತ್ರವ ನಡೆಸುವ ।

ಯಂತ್ರವಾಹಕನ ದಾಸ -

ಶ್ರೀ ಗುರುರಾಜ ।। ಚರಣ ।।


ಮಂದಸ್ಮಿತಯುತ -

ಸುಂದರ ವಿಗ್ರಹ ।

ಮಂದ ಜನಕೆ ಆ-

ನಂದದಾಯಕ ।। ಚರಣ ।।


ತ್ರಿಷಣ ರೂಪನೆ ನಿತ್ಯ 

ಸುಫಲದಾಯಕನಾಗಿ ।

ಚಪಲತೆಯನು ಕಳೆದು -

ಅಪವರ್ಗ ಫಲವೀವೋ ।। ಚರಣ ।।

ನಿನ್ನ ಅಂತರ್ಯಾಮಿ 

ಘನ್ನ ಮಾರುತನೊಳು ।

ಚೆನ್ನಾಗಿ ಸೀತಾರಾಮರನ್ನ -

ನೀ ತೋರಿಸೋ ।। ಚರಣ ।।


ಫಣಿರಾಜ ಶಯನಗೆ -

ಮಣಿದು ಬಿನ್ನೈಸಿ ನಿತ್ಯ ।

ಬಣಗು ಸೇವಕರನ್ನು ಕ್ಷಣ -

ಬಿಡದೆಲೆ ಪೊರೆ ।। ಚರಣ ।।


ಪ್ರಹ್ಲಾದ ವರದ ಶ್ರೀ -

ಹರಿ ವಿಠ್ಠಲನ ಭಜಕ ।

ಸಹ್ಲಾದಾಗ್ರಜನಾದ -

ಪ್ರಹ್ಲಾದನವತಾರನೇ ।। ಚರಣ ।।

***

ರಾಗ: [ಶಹನ] ತಾಳ: [ಖಂಡಛಾಪು]

ಧೀರೇಂದ್ರ ಸುಕರಾರ್ಚಿತ ಗುರು ರಾಘವೇಂದ್ರ

ನೀರದಪ್ರಕಾಶ ವರವೃಂದಾವನಸ್ಥಿತ

ಸುಂದರ ಬದರಿಯಿಂದ ತಂದ ಶಿಲೆಯಿಂದ

ಛಂದಾಗಿ ರಚಿಸಿದ ವೃಂದಾವನದಿನಿಂದ 1

ಮಂತ್ರಾಲಯಕೆ ಮಿಗಿಲು ತಂತ್ರವ ನಡೆಸುವ

ಯಂತ್ರವಾಹಕನದಾಸ ಶ್ರೀ ಗುರುರಾಜ 2

ಮಂದಸ್ಮಿತಯುತ ಸುಂದರ ವಿಗ್ರಹ

ಮಂದಜನಕೆ ಆನಂದದಾಯಕ 3

ತ್ರಿಫಣ(ತ್ರಿಷಣ?)ರೂಪನೆ ನಿತ್ಯ ಸುಫಲದಾಯಕನಾಗಿ 

ಚಪಲತೆಯನು ಕಳೆದು ಅಪವರ್ಗಫಲವೀವೊ 4

ನಿನ್ನ ಅಂತರ್ಯಾಮಿ ಘನ್ನಮಾರುತನೊಳು

ಚೆನ್ನಾಗಿ ಸೀತಾರಾಮರನ್ನ ನೀ ತೋರಿಸೊ 5

ಫಣಿರಾಜಶಯನಗೆಮಣಿದು ಬಿನ್ನೈಸಿ ನಿತ್ಯ

ಬಣಗುಸೇವಕರನು ಕ್ಷಣಬಿಡದೆಲೆ ಪೊರೆ 6

ಪ್ರಹ್ಲಾದವರದಶ್ರೀಹರಿವಿಠಲನಭಜಕ

ಸಹ್ಲಾದಾಗ್ರಜನಾದ ಪ್ರಹ್ಲಾದನವತಾರನೆ 7

***