..
kruti by ಮಹಾನಿಧಿವಿಠಲರು mahanidhi vittalaru
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ
ಸ್ವಾಮಿ ಹಯವದನರಾಯಾ ಪ
ಬಾರಿಬಾರಿಗೂ ಈತನ ಮಂದಿರದಲಿ ನಿನ್ನ
ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ.
ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ
ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ
ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ
ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು
ಸಲೆ ಮೀಸಲವ ಮಾಡೋ ದೇವರ ದಯಾಳೊ1
ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ
ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ
ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ
ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ
ಶ್ರೀವತ್ಸಲಾಂಛನನೇ2
ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ
ಬಿಗನು ಅಘನಾಶÀನವೆಂದೊ ನಾನಿಂದೂ
ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ
ಹೀಗೆ ಮುನಿಸೋರೇನೋ ಶ್ರೀಹರೆ
ಅನಿಲಾಂತರ್ಗತ ಮಾನಿಧಿವಿಠಲ ತನುಮನ
ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ
ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
***