ರಾಗ ಭೂಪ ತಾಳ -ದೀಪಚಂದಿ
ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು |
ಅರಿತು ಸದ್ಭಾವದಲಿ ಧೃಡಗೊಳ್ಳಬೇಕು || ಪ||
ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು |
ನಿಶ್ಚಿಂತದಲಿ ನಿಜಸುಖ ಪಡಿಯಬೇಕು ||೧||
ನಂಬಿ ನಡಿಯಬೇಕು ಡಂಭಕವ ಬಿಡಬೇಕು |
ಹಂಬಲಿಸಿ ಅಂಬುಜಾಕ್ಷನ ನೋಡಬೇಕು ||೨||
ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು |
ವಿಶ್ವವ್ಯಾಪಕನ ವಿಶ್ವದಿ ನೋಡಬೇಕು ||೩||
ರತಿಪ್ರೇಮ ಬಿಡಬೇಕು ಅತಿ ಹರುಷಪಡಬೇಕು |
ಸ್ತುತಿಸ್ತವನವನು ಪಾಡಿ ಗತಿ ಪಡಿಯಬೇಕು ||೪||
ಆರು ಜರಿಯಬೇಕು ಮೂರು ಹರಿಯಬೇಕು |
ಅರಿತು ಗುರುಪಾದ ಮಹಿಪತಿ ಬೆರಿಯಬೇಕು ||೫||
****
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು ಅರತು ಸದ್ಭಾವದಲಿ ದೃಢಗೊಳ್ಳಬೇಕು ಪ
ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು ನಿಶ್ಚಿಂತದಲಿ ನಿಜಸುಖ ಪಡೆಯಬೇಕು 1
ನಂಬಿನಡಿಯಬೇಕು ಡಂಭಕವ ಬಿಡಬೇಕು ಹಂಬಲಿಸಿ ಅಂಬುಜಾಕ್ಷನ ನೋಡಬೇಕು 2
ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು ವಿಶ್ವವ್ಯಾಪಕನ ವಿಶ್ವದಿ ನೋಡಬೇಕು 3
ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು 4
ಆರು ಜರಿಯಬೇಕು ಮೂರು ಹರಿಯಬೇಕು ಅರಿತು ಗುರುಪಾದ ಮಹಿಪತಿಬೆರೆಯಬೇಕು 5
****