Showing posts with label ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ ankita gurumahipati. Show all posts
Showing posts with label ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ ankita gurumahipati. Show all posts

Wednesday, 1 September 2021

ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಗೋಪಿ ನೋಡಮ್ಮಾ ಪ 


ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 

ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 

ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3

****