ಬಂದು ನಿಲ್ಲೇ ಎನ್ನ ಮಂದಿರದಲ್ಲೇ ಕೊಲ್ಲಾಪುರ ನಿಲಯೇ ಪ.
ಬಂದು ನಿಲ್ಲೇ ಎನ್ನ ಮನಮಂದಿರದಲ್ಲಿ
ಇಂದಿರಲಾರೆನು ಮುಂದರಿಯೇ ಇಂದಿನ ದಿನ ಅ.ಪ.
ನವಮೋಹನಾಂಗಿಯೇ ನೀನು ನೀಲಾಂಬರವನುಟ್ಟು
ಜರತಾರಂಚಿನ ಕುಪ್ಪಸ ಬಿಗಿದು ತೊಟ್ಟು
ಪಾದಕೊಪ್ಪುವ ಪೈಜಣ ಋಳಿ ಕಾಲುಂಗರವಿಟ್ಟು
ಲಲಾಟದ ಕುಂಕುಮ ಬಟ್ಟು 1
ಕರದಲಿ ಕಂಕಣ ಬೆರಳಲಿ ಉಂಗುರ
ನಿಮ್ಮ ಮುಖದಿ ಸೂರ್ಯನ ಕಿರಣ
ನಾನಾಲಂಕೃತ ಭರಣ
ದೇವಿ ನಾ ಮಾಡುವೆ ಶರಣು 2
ನಿನ್ನ ಹೊರತಿನ್ನು ಜಗದೊಳಗೆ ಅನ್ಯರ ಕಾಣೆನೊ
ನಿರುತ ನಂಬಿದೆ ನೀಲವೇಣಿ
ಪಂಕಜಪಾಣಿ
ಕಾಳೀಮರ್ಧನಕೃಷ್ಣನ ರಾಣಿ3
*****