Showing posts with label ಸಂಪತ್ತು ನಿನಗಿಂದು ಪೊಸದಾಯಿತೆ ಸಿಂಪಿನಲಿ ಪಾಲುಗುಡಿದದು vijaya vittala. Show all posts
Showing posts with label ಸಂಪತ್ತು ನಿನಗಿಂದು ಪೊಸದಾಯಿತೆ ಸಿಂಪಿನಲಿ ಪಾಲುಗುಡಿದದು vijaya vittala. Show all posts

Thursday 17 October 2019

ಸಂಪತ್ತು ನಿನಗಿಂದು ಪೊಸದಾಯಿತೆ ಸಿಂಪಿನಲಿ ಪಾಲುಗುಡಿದದು ankita vijaya vittala

ವಿಜಯದಾಸ
ಸಂಪತ್ತು ನಿನಗಿಂದು ಪೊಸದಾಯಿತೆ |
ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ

ಪಾಲು ಮೊಸರು ಕದ್ದು ಗೋವಳರೆಂಜಲನುಂಡು |
ತಾಳ ಫಲಗಳ ಮೆದ್ದದು ಮರದಿಯಾ ||
ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು |
ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1

ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ |
ಕೊಂಡು ಭಂಡಾಗಿ ಇದ್ದದು ಮರದಿಯಾ ||
ವಾಹನ |
ಕರ ಮುಗಿದು ಕೊಂಡಾಡುವ ಭರವೊ 2

ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ |
ವತಿಯಲ್ಲಿ ವಾಸವಾದದು ಮರದಿಯಾ ||
ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ |
ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3

ಈ ವೈವಸ್ವತ ಮನ್ವಂತರ ಉಳ್ಳತನಾಕಾ |
ಕರ್ಮ ತಪ್ಪಲರಿಯದು ||
ಕೋವಿದರು ಪೇಳುವದು ಪುಸಿ ಎನ್ನದಿರು ದೇವ |
ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4

ಕ್ಲೇಶ ಕಳಿಯದಿರಲು |
ಭಕುತವತ್ಸಲನೆಂಬ ಬಿರಿದು ಬರಿದೇ ||
ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | 
ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
*********