Thursday 17 October 2019

ಸಂಪತ್ತು ನಿನಗಿಂದು ಪೊಸದಾಯಿತೆ ಸಿಂಪಿನಲಿ ಪಾಲುಗುಡಿದದು ankita vijaya vittala

ವಿಜಯದಾಸ
ಸಂಪತ್ತು ನಿನಗಿಂದು ಪೊಸದಾಯಿತೆ |
ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ

ಪಾಲು ಮೊಸರು ಕದ್ದು ಗೋವಳರೆಂಜಲನುಂಡು |
ತಾಳ ಫಲಗಳ ಮೆದ್ದದು ಮರದಿಯಾ ||
ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು |
ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು 1

ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ |
ಕೊಂಡು ಭಂಡಾಗಿ ಇದ್ದದು ಮರದಿಯಾ ||
ವಾಹನ |
ಕರ ಮುಗಿದು ಕೊಂಡಾಡುವ ಭರವೊ 2

ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ |
ವತಿಯಲ್ಲಿ ವಾಸವಾದದು ಮರದಿಯಾ ||
ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ |
ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ 3

ಈ ವೈವಸ್ವತ ಮನ್ವಂತರ ಉಳ್ಳತನಾಕಾ |
ಕರ್ಮ ತಪ್ಪಲರಿಯದು ||
ಕೋವಿದರು ಪೇಳುವದು ಪುಸಿ ಎನ್ನದಿರು ದೇವ |
ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ 4

ಕ್ಲೇಶ ಕಳಿಯದಿರಲು |
ಭಕುತವತ್ಸಲನೆಂಬ ಬಿರಿದು ಬರಿದೇ ||
ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | 
ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ 5
*********

No comments:

Post a Comment