Showing posts with label ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ purandara vittala. Show all posts
Showing posts with label ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ purandara vittala. Show all posts

Tuesday, 3 December 2019

ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ purandara vittala

ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ

ಕಾವಡಿದು ಶ್ರೀ ಕೃಷ್ಣ ದಿವ್ಯ ನಾಮ (ಪಲ್ಲವೀ)


ದೇವಾದಿ ದೇವನೆಯೆಂದು ಕರಿಮೊರೆಯಿಡಲು ತಾನೊಲಿದ ದಿವ್ಯ ನಾಮ (ಅನುಪಲ್ಲವೀ)

ದ್ರೌಪದೀದೇವಿಯಭಿಮಾನವನೆ ರಕ್ಷಿಸಿತು ಶ್ರೀಪತಿಯ ದಿವ್ಯ ನಾಮ

ಆಪತ್ತು ಪರಿಹರಿಸಿ ಅಡವಿ ಶಿಶುವನೆ ಕಾಯ್ತು ಗೋಪಾಲಕೃಷ್ಣ ನಾಮ(೧)


ಗುರು ಭೀಷ್ಮ ಕರ್ಣ ಅಶ್ವತ್ಥಾಮ ಜಯದ್ರಥರ ಪರಿಭವೈಗೈದ ನಾಮ

ಕುರುಸೈನ್ಯಶರಧಿಯೊಳು ಪಾಂಡವರ ದಾಟಿಸಿತು ಸಿರಿ ಕೃಷ್ಣ ದಿವ್ಯ ನಾಮ(೨)


ಗೋಪವನಿತೆಯರು ಕುಟ್ಟುತ್ತ ಬೀಸುತ್ತ ತಾ ಪೊಗಳುತಿಪ್ಪ ನಾಮ

ತಾಪಸನು ಸಾಂದೀಪ ಮುಚಕುಂದಸೇನರನು ಕಾಪಾಡಿದ್ಹರಿಯ ನಾಮ(೩)


ಸುಖವಾದ ಕಾಲದಲಿ ಈ ನಾಮಗಾಯನವು ಅಕಳಂಕ ಕೃಷ್ಣ ನಾಮ

ನಿಖಿಳ ದುಃಖದ ಕಾಲದಲೀ ಗಾಯನವು ದಿವ್ಯ ಸುಕೃತವಹ ಕೃಷ್ಣ ನಾಮ(೪)


ಸಕಲ ಭಕುತರಿಗೀವ ಸದ್ಗತಿಯ ಕರೆದು ಶ್ರೀ ಲಕುಮೀಪತಿ ದಿವ್ಯ ನಾಮ

ಸುಖವನಧಿ ಅರವಿಂದನಾಭ ಪುರಂದರ ವಿಠಲ ಬಕವೈರಿಗೊಲಿದ ನಾಮ
***

pallavi

AvAga nene manave bhavada bhageya tappisi kAvaDidu krSNa nAma

anupallavi

dEvAdi dEvaneyendu kari moreyiDalu tAvolida divya nAma

caraNam 1

draupadI dEviyabhimAnavane rakSisitu shrIpatiya divya nAma
Apattu pariharisi aDavi shishuvane kAidu gOpAlakrSNana nAma

caraNam 2

guru bhISma karNa ashvattAma jayadradhara paribhavaigaida nAma
guru sainyasharadhiyoLu pANDavara dATisitu siri krSNa divya nAma

caraNam 3

kOpa vaniteyaru kuTTutta bIsutta tA pogaLutippa nAma
tApasanu sAndIpa mukakunda sEnaranu kApADidhariya nAma

caraNam 4

sukhavAda kAladali I nAmagAyanavu akaLanka krSNa nAma
nikhiLa dukkhada kAladalI gAyanavu divya sukrtavaha krSNa nAma

caraNam 5

sakala bhakutarigIva sadgatiya karedu shrI lakumipati divya nAma
sukhavanadhi aravindanAbha purandara viTTala bakavairi kolida nAma
***

ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು |ಕಾವುದಿದು ಕೃಷ್ಣನಾಮ ಪ.

ಭಾವಿಸಲು ಯಮದೂತ ಮದಕರಿಗೆ ಕೇಸರಿಯು |ಶ್ರೀಕೃಷ್ಣ ದಿವ್ಯನಾಮ ಅಪವರವೇದ - ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ |ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆ ಎರೆದ ಶ್ರೀ ಕೃಷ್ಣನಾಮ ||ಗುರುದ್ರೋಣ - ಭೀಷ್ಮ - ಅಶ್ವತ್ಥಾಮ - ಜಯದ್ರಥನ ಜಯಿಸಿತೈ ಕೃಷ್ಣನಾಮ |ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀ ಕೃಷ್ಣ ದಿವ್ಯನಾಮ 1

ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ |ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ||ಗೋಪವನಿತೆಯರೆಲ್ಲ ಕುಟ್ಟುತಲಿ - ಬೀಸುತಲಿ ಪಾಡುವುದು ಕೃಷ್ಣನಾಮ |ತಾಪಸನು ಸಾಂದೀಪ ಮುಚುಕುಂದರಿಗೆ ಮನೋ - ರಥವು ಶ್ರೀಕೃಷ್ಣನಾಮ 2

ಸುಖದ ಅವಸಾನದಲಿ ಈ ನಾಮ ಗಾಯನವು ಶ್ರೀಕೃಷ್ಣದಿವ್ಯನಾಮ |ದುಃಖಾವಸಾನದಲಿ ಈ ನಾಮವೇ ಜಪವು ಶ್ರೀ ಕೃಷ್ಣದಿವ್ಯನಾಮ ||ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀ ಕೃಷ್ಣದಿವ್ಯನಾಮ ||ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ 3
*******

ಆವಾಗ ನೆನೆ ಮನವೆ ಭವದ ಬಗೆಯ ತಪ್ಪಿಸಿ purandara vittala

ರಾಗ ಮೋಹನಕಾಂಭೋಜ ಛಾಪು ತಾಳ

ಆವಾಗ ನೆನೆ ಮನವೆ
ಭವದ ಬಗೆಯ ತಪ್ಪಿಸಿ
ಕಾವಡಿದು ಕೃಷ್ಣ ನಾಮ ||ಪ||

ದೇವಾದಿ ದೇವನೆಯೆಂದು ಕರಿಮೊರೆಯಿಡಲು ತಾನೊಲಿದ ದಿವ್ಯ ನಾಮ
ದ್ರೌಪದೀದೇವಿಯಭಿಮಾನವನೆ ರಕ್ಷಿಸಿತು ಶ್ರೀಪತಿಯ ದಿವ್ಯ ನಾಮ
ಆಪತ್ತು ಪರಿಹರಿಸಿ ಅಡವಿ ಶಿಶುವನೆ ಕಾಯ್ತು ಗೋಪಾಲಕೃಷ್ಣ ನಾಮ

ಗುರು ಭೀಷ್ಮ ಕರ್ಣ ಅಶ್ವತ್ಥಾಮ ಜಯದ್ರಥರ ಪರಿಭವೈಗೈದ ನಾಮ
ಕುರುಸೈನ್ಯಶರಧಿಯೊಳು ಪಾಂಡವರ ದಾಟಿಸಿತು ಸಿರಿ ಕೃಷ್ಣ ದಿವ್ಯ ನಾಮ

ಗೋಪವನಿತೆಯರು ಕುಟ್ಟುತ್ತ ಬೀಸುತ್ತ ತಾ ಪೊಗಳುತಿಪ್ಪ ನಾಮ
ತಾಪಸನು ಸಾಂದೀಪ ಮುಚಕುಂದಸೇನರನು ಕಾಪಾಡಿದ್ಹರಿಯ ನಾಮ

ಸುಖವಾದ ಕಾಲದಲಿ ಈ ನಾಮಗಾಯನವು ಅಕಳಂಕ ಕೃಷ್ಣ ನಾಮ
ನಿಖಿಳ ದುಃಖದ ಕಾಲದಲೀ ಗಾಯನವು ದಿವ್ಯ ಸುಕೃತವಹ ಕೃಷ್ಣ ನಾಮ

ಸಕಲ ಭಕುತರಿಗೀವ ಸದ್ಗತಿಯ ಕರೆದು ಶ್ರೀ ಲಕುಮೀಪತಿ ದಿವ್ಯ ನಾಮ
ಸುಖವನಧಿ ಅರವಿಂದನಾಭ ಪುರಂದರ ವಿಠಲ ಬಕವೈರಿಗೊಲಿದ ನಾಮ
********