Showing posts with label ಘಿಲಕು ಅಂದಾವಮ್ಮಗೆಜ್ಜೆ ಗಿಲಕು ಅಂದಾವೆ ಕಲಕು ಮಾಡಿ ramesha. Show all posts
Showing posts with label ಘಿಲಕು ಅಂದಾವಮ್ಮಗೆಜ್ಜೆ ಗಿಲಕು ಅಂದಾವೆ ಕಲಕು ಮಾಡಿ ramesha. Show all posts

Wednesday, 4 August 2021

ಘಿಲಕು ಅಂದಾವಮ್ಮಗೆಜ್ಜೆ ಗಿಲಕು ಅಂದಾವೆ ಕಲಕು ಮಾಡಿ ankita ramesha

 ..

ಘಿಲಕು ಅಂದಾವಮ್ಮಗೆಜ್ಜೆ ಗಿಲಕು ಅಂದಾವೆ ಕಲಕು ಮಾಡಿ ದೈತ್ಯರನ್ನನೆಲಕ ಒತ್ತಿದ ಪಾದವಮ್ಮ ಪ.


ಸಿಟ್ಟಿಲೆ ದೈತ್ಯರ ಶಿರವ ಕುಟ್ಟಿಸವರಿದ ಪಾದವೆಂದು ಅಷ್ಟ ಸೌಭಾಗ್ಯ ಸುರರಿಗಿಟ್ಟ ಪಾದವೆಂದು1

ಅಂಗಾಲಿಲೆ ಬಲಿರಾಯಗೆ ಹಿಂಗದ ಸುಖವಿತ್ತ ಪಾದಗಂಗಾದೇವಿ ಪಡೆದ ಶ್ರೀರಂಗನÀ ಪಾದವೆಂದು2

ಭಂಡಿಲಿದ್ದ ಸುರನ ಶಿರವ ತುಂಡರಿಸಿದ ಪಾದವೆಂದು ಕೊಂಡಾಡಿ ಅಕ್ರೂರ ತಿಳಿದುಕೊಂಡÀ ಪಾದವೆಂದು3

ಮರಣ ತಪ್ಪಿಸಿ ಪಾರ್ಥನಿಗೆಕರ್ಣನ ನಾಚಿಸಿದ ಪಾದ ತರುಳೆರ ಕುಚಕಿತ್ತ ಆ ಅರುಣನ ಪಾದವೆಂದು 4

ಮಣಿಗಣ ಭೂಷಣ ಸರ್ಪನ ಫಣಿಯಲ್ಲಿ ಕುಣಿದಿದ್ದ ಪಾದ ಗುಣಪೂರ್ಣ ರಾಮೇಶ ನಮ್ಮ ತಪ್ಪೆಣಿಸದ ಪಾದವೆಂದು5

****