by ಪ್ರಸನ್ನವೆಂಕಟದಾಸರು
ಚಿಂತೆಗೆಣಿಕೆ ಇಲ್ಲದಂತಾಗಿ ಎನ್ನಂತರಂಗದ ಕ್ಲೇಶಕೆಂತೌಷಧ ರಂಗ ಪ.
ಒಂದು ದೊರೆತರೆ ಇನ್ನೊಂದಾಗಲುಬೇಕುಮಂದಿರವಿರಲು ಮೇಲಟ್ಟ ಬೇಕುಮಂದಮತಿಸತಿಇನ್ನೊಬ್ಬ ಸುಗುಣಿ ಬೇಕುಎಂದೆಂದು ಬೇಕೆಂಬ ನುಡಿಗುಂದದು ರಂಗ 1
ಅವಭೋಗಿ ಅವಗಿಂತ ಮೀರ್ವೆನೆಂಬುವ ಹವಣುಅವನ ವಿದ್ಯಕೆ ಹೆಚ್ಚಲೆಂಬ ಹವಣುತವಕದಿ ಸಂಪದ ಮೇಳವಿಸುವ ಹವಣುಅವಿರಳ ಹವಣಕೆ ಕಡೆಗಾಣೆ ರಂಗ 2
ರೂಢಿಲಿ ಸಿರಿವಂತರ ಮುಂದೆಖೋಡಿಮಾತಾಡಿ ಗುದ್ದಿಸಿಕೊಂಡ ನರನಂತೆನೋಡ ಪ್ರಸನ್ವೆಂಕಟೇಶಅಲ್ಲದಕೃತ್ಯಮಾಡಿ ಕ್ಲೇಶವನುಂಡೆ ನಿನ್ನ ಬೇಡದೆ ರಂಗ 3
********