..
ನರಸಖ ನಾರಾಯಣಕೆರೆಪುರ ವಾಸ
ಕರದಿ ಪಿಡಿದು ಎನ್ನ ಕರಿ ಕಮಲೇಶ ಪ
ಗರುಡಾರೂಢನು ಗಜವರದ ವೈಕುಂಠ
ಕೊಡುವ ಪಾಲಿಸಿ ಪಾಂಡವರ ಮನೆ ಭಂಟ1
ಪಕ್ಷಿವಾಹನ ರಾಕ್ಷಸಾರಿ ರಾವಣನ
ಶಿಕ್ಷಿಸಿ ವಿಭೀಷಣನ ರಕ್ಷಿಸಿದ ರಾಮ 2
ವಿನತೆಸುತನ ಏರಿ ಘನತರುತ್ಸವದಿ
ಸವರಿದಿ ಸುರವಂದ್ಯ ಸುಜನಕ್ಕಾನಂದ 3
ಹಕ್ಕಿಯ ಪಕ್ಕದಲ್ಲ್ಯರ್ಕಕೋಟಿತೇಜ ಜಾ-
ನಕ್ಕಿ ಸಹಿತಯೋಧ್ಯನಾಳುವ ರಾಮ 4
ನಗಧರ ಖಗನ್ಹೆಗಲೇರಿ ಉಲ್ಲಾಸ
ನಗುವ ಭೀಮೇಶ ಕೃಷ್ಣÀ ಬರುವ ಜಗದೀಶ5
***