ರಾಗ : ನವರೋಜು ತಾಳ : ಮಿಶ್ರಛಾಪು
ಬರುವೆಯೋ ರಂಗಯ್ಯ ಮನೆಗೆ
ಬಾರೋ ಹೋಗುವ ।।ಪ॥
ಬುಗರಿ ಚಂಡುಗಳ ಕೊಡುವೆನು ಬಂದರೆ
ಬಗೆ ಬಗೆ ಆಟವ ಕಲಿಸಿ ಒಲಿಸುವೆನು ।।೧।।
ರಸ ರಸಾಯನಗಳುಣ್ಣಿಸುವೆ ಬಂದರೆ
ಮುಸುಕಿನೊಳಗೆ ಬಚ್ಚಿಟ್ಟುಕೊಂಬುವೆನು ।।೨।।
ಶ್ರೀದವಿಠ್ಠಲ ಬಂದರೆ ನಿನಗೆ
ಸಾದರದಲಿ ಸವಿಮಾತನ್ಹೇಳುವೆನು ।।೩।।
*********