Friday 27 December 2019

ಬರುವೆಯೋ ರಂಗಯ್ಯ ಮನೆಗೆ ankita shreeda vittala

ರಾಗ :  ನವರೋಜು   ತಾಳ : ಮಿಶ್ರಛಾಪು 

ಬರುವೆಯೋ ರಂಗಯ್ಯ ಮನೆಗೆ 
ಬಾರೋ ಹೋಗುವ                             ।।ಪ॥ 

ಬುಗರಿ ಚಂಡುಗಳ ಕೊಡುವೆನು ಬಂದರೆ
ಬಗೆ ಬಗೆ ಆಟವ ಕಲಿಸಿ ಒಲಿಸುವೆನು        ।।೧।।

ರಸ ರಸಾಯನಗಳುಣ್ಣಿಸುವೆ ಬಂದರೆ 
ಮುಸುಕಿನೊಳಗೆ ಬಚ್ಚಿಟ್ಟುಕೊಂಬುವೆನು    ।।೨।।

ಶ್ರೀದವಿಠ್ಠಲ ಬಂದರೆ ನಿನಗೆ 
ಸಾದರದಲಿ ಸವಿಮಾತನ್ಹೇಳುವೆನು          ।।೩।।
*********

No comments:

Post a Comment