..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ ಪ
ಕಾವ ಕೊಲ್ಲುವ ತಾನೆ ಒಬ್ಬನೆ ಕೊನೆಗೆ ನಿಲ್ಲುವೆನೆಂದು ಅ.ಪ
ಸತಿಸುತ ವಿಯೋಗದಿಂದ ಖತಿಗೊಂಡು ಭ್ರಂಶನಾಗಿ
ಮತಿಗೇನು ತೋರದೆ ಮಿತ ವ್ಯಾಪಾರದೊಳಿರಲು 1
ಪುರಾಣ ಕೇಳಿದಾಗ ನರಕ ಭಯವು ಮನಕೆ ತೋರಿ
ದುರಿತ ದೂರ ಕಾಯೊ ಎಂದು ದೂರ
ಬರಲು ಮರದು ಪೋಗಲು 2
ಸಿರಿಯು ಬೇಕೆಂದು ನರರ ಪೂಜೆ ಮಾಡಿ ಧನವ ಕೂಡಿಸಿ
ಪರಮ ಗೋಪ್ಯದಿಂದ ಇಡೆ ಸರ್ವ ಸ್ವತ್ತು
ಪೋಗಲಾಗ ಹರಿಯ ನೆನೆಯೊ 3
ತಾರೊಡಲ ಆರಿಸಲು ಪರರ ಮನೆಗೆ ಪೋಗಿ
ತಿರುಗಿ ಬೇಡಲು
ನೀರಿನ ಲಾಭವಿಲ್ಲದೆ ನರಹರಿಗೆ ಮೊರೆಯಿಡಲು 4
ಅನುಕೂಲವೆಲ್ಲ ಇರಲು ಅನಿಮಿತ್ತದಿಂದ ಭಜಿಸು
ಅನಿಮಿಷರೊಡೆಯ ವಿಜಯ ರಾಮಚಂದ್ರವಿಠಲನ್ನ 5
***