Showing posts with label ಬಂದರು ಹರಿಯ ವಾಲಗಕೆ ಭಕ್ತ ವೃಂದ ಸಹಿತ ಸುರ vijaya vittala. Show all posts
Showing posts with label ಬಂದರು ಹರಿಯ ವಾಲಗಕೆ ಭಕ್ತ ವೃಂದ ಸಹಿತ ಸುರ vijaya vittala. Show all posts

Thursday, 17 October 2019

ಬಂದರು ಹರಿಯ ವಾಲಗಕೆ ಭಕ್ತ ವೃಂದ ಸಹಿತ ಸುರ ankita vijaya vittala

ವಿಜಯದಾಸ
ಬಂದರು ಹರಿಯ ವಾಲಗಕೆ ಭಕ್ತ |
ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು ಪ

ನಾಗಾರಿ ಸುತ ಬಂದ |
ನಾಗಾರಿ ಬಂದಾ |
ನಾಗಾನ ಧನು ಬಂದ ನಾಗಪುಂಗವ ಬಂದ |
ಗಮನ ಬಂದ | ನಾಗ ಬಂದಾ || 1

ನಾಗಶಯ ಮುಖವಾದ ನಾಗವಾಹನ ಮಿತ್ರ |
ನಾಗ ಚರ್ಮಾಂಬರ ಸಖನು ಬಂದಾ |
ನಾಗಾರಿ ಸುತೆಯಳನಾಳಿದವನು ಬಂದಾ |
ನಾಗಾರಿ ಬಾಂಧವ ಬಂದಾ || 2

ನಾಗದ್ವೇಷಿಕನು ನಾಗಾನಾದನನುಜ |
ನಾಗಕೇತನನ ಕೊಂದಗ್ರಜನು ಬಂದಾ |
ಸಿರಿ ವಿಜಯವಿಠ್ಠಲರೇಯ |
ನಾಗವಾಹನನಾಗಿ ಬರುವ ಸಂಭ್ರಮದೊಳು ||3
********