Showing posts with label ವಾದಿರಾಜ ಧೀರಾ ಯತಿವರ ವಾದದಿ ankita vijaya vittala VADIRAJA DHEERA YATIVARA VAADADI VADIRAJA TEERTHA STUTIH. Show all posts
Showing posts with label ವಾದಿರಾಜ ಧೀರಾ ಯತಿವರ ವಾದದಿ ankita vijaya vittala VADIRAJA DHEERA YATIVARA VAADADI VADIRAJA TEERTHA STUTIH. Show all posts

Thursday 9 December 2021

ವಾದಿರಾಜ ಧೀರಾ ಯತಿವರ ವಾದದಿ ankita vijaya vittala VADIRAJA DHEERA YATIVARA VAADADI VADIRAJA TEERTHA STUTIH



ವಿಜಯದಾಸ
ವಾದಿರಾಜ ಧೀರ ಯತಿವರ ವಾದದಿ ಬಹು ಶೂರ
ಮೋದತೀರ್ಥರ ಮತವ ಪೊಂದಿದ
ಸಾಧುಗಳನು ಉದ್ಧಾರ ಮಾಡುವ ಪ

ರಂಗ ಮಂಗಳಾಪಾಂಗ ತುಂಗ ವಿಕ್ರಮ ಹರಿಯಾ
ಶೃಂಗೇರಿ ಮಠದ ಧ್ವಜ ಹಾರಿಸಿದ 1

ಒಡೆಯ ಹಯವಕ್ತ್ರನಿಗೆ ಕಡಲೆ ಹೂರಣವಿತ್ತ
ಕಡಲಶಯನ ಪದಬಿಡದೆ ಆರಾಧಿಸುವ 2

ಅಜಪದಕರ್ಹ ಋಜುಗಣಪತಿ ಜೀವೋತ್ತಮ
ವಿಜಯವಿಠ್ಠಲದಾಸ ಸುಜನಮಂದಹಾಸ 3
***


Vadiraja dhira yativara vadadi bahu sura
Modatirthara matava pondida
Sadhugalanu uddhara maduva||pa||

Ranga mangalapanga tunga vikrama hariya
Srungeri mathada dhvaja harisida ||1||

Odeya hayavaktranige kadale huranavitta
Kadalasayana padabidade aradhisuva ||2||

Ajapadakarha rujuganapati jivottama
Vijayaviththaladasa sujanamandahasa ||3||
***

ಶ್ರೀ ವಿಜಯ ವಿಠಲ ಕೃತ ಶ್ರೀ ವಾದಿರಾಜರ ಸ್ತೋತ್ರ.

ವಾದಿರಾಜ ಧೀರಾ ಯತಿವರ /
ವಾದದಿ ಬಹು ಶೂರ//

ಮೋದ ತೀರ್ಥರ ಮತವ ಪೊಂದಿದ /
ಸಾಧುಗಳನು ಉಧ್ಧಾರ ಮಾಡುವ//ಪ//.

ರಂಗ ಮಂಗಳಪಾಂಗ ತುಂಗ ವಿಕ್ರಮ ಹರಿಯಾ /.
ಶ್ರಿಂಗೇರಿ ಮಠದ ಧ್ವಜ ಕೇತನವ ಹಾರಿಸಿದ //೧//.

ಒಡೆಯ ಹರಿವಕ್ತ್ರನಿಗೆ ಕಡಲೆ ಹೂರಣ ವಿತ್ತ / 

ಕಡಲ ಶಯನನ ಪಾದ ಆರಾಧಿಸುವ //೨//

ವಾದಿಗಜ ಪಂಚಾನನನೆನಿಸಿ / 

ಮೇಧಿನಿಯೊಳಗೆ ಮೆರೆದೆ/
ಮಾಧವನ ಪ್ರಿಯದಾಸ / 
ಸದಾನಂದ ದೊಳಿರುವ//
ಅಜ ಪದಕೆ ಅರ್ಹ / 
ಋಜು ಗಣಪತಿ ಜೀವೋತ್ತಮ/
ವಿಜಯವಿಠಲದಾಸ 
ಸುಜನ ಮಂದಹಾಸ//೩///
******