ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಇದೇ ವಸ್ತು ಸನಾತನ ಒಂದೆ ಆದಿ ಅನಾದಿಯಾಧಾರಿದರಿಂದೆ P ವೇದವಂದಿತ ವಸ್ತುವಿಮಲಾ ಸಾಧುಜನರ ಸಾಧನೆಗನುಕೂಲಾ 1
ಜ್ಞಾನವಿಜ್ಞಾನದ ನಿಜಸಾರಾ ಅನುಭವಕನುಭವಾಗುವ ಸುಆಗರಾ 2
ಸಗುಣ ನಿರ್ಗುಣಕಿದೆ ಮೂಲ ಭಕ್ತಜನರು ಮಾಡುವುದು ಪ್ರತಿಪಾಲಾ 3
ದೇವಾದಿಗಳು ಮಾಡುವರಿದೇ ಧ್ಯಾನಾ ಭವಹರ ಗುರುಮೂರುತಿ ನಿಧಾನಾ 4
ಇಹಪರ ಸುಖದೋರುದಿದೆ ನೀಟ ಮಹಿಪತಿಸ್ವಾಮಿ ಶ್ರೀಗುರು ಮಣಿಮುಗುಟ5
***