by ಪ್ರಸನ್ನವೆಂಕಟದಾಸರು
ರಾಗ : ಕಾಂಬೋಧಿ ತಾಳ : ಝಂಪೆತಾಳ
ಪ್ರಹ್ಲಾದವರದ ಭಯ ಗಜಕೆ ಸಿಂಹ ಪರಮ
ಆಹ್ಲಾದ ಪದವಿತ್ತು ಪೊರೆಯೋ ನರಸಿಂಹ ।ಪ।
ಹಿಂದೆ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದ
ನೊಂದವನ ಬಾಧೆಯಲಿ ಮರುಗಿ ಸೊರಗಿ
ಇಂದಿರೇಶ ಸಲಹೆನಲು ಗಾಢಸ್ತಂಭದಲೊದಗಿ
ಬಂದವನುದರ ಬಗೆದೆ ರುದಿರವನು ಸವಿದೆ ॥೧॥
ಅಸುರ ಕೆಡಲದಕಂಡು ಅತಿಹರುಷದಿಂದ
ತ್ರಿದಶಶಂಬರದಿ ಪೂಮಳೆಗರೆಯಲು
ಶಿಶುವೇಕ ಮಾನಸದಿ ಮೊರೆಹೊಕ್ಕು ಪೊಗಳುತಿರೆ
ಬಿಸಜಾಕ್ಷನ ಕರುಣದಿಂದ ಸಲಹಿದೆಯಾಗಿ ॥೨॥
ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯ
ನಳಿನಾಕ್ಷ ನಿಮ್ಮ ಗುರುತವ ಕಾಣದೆ
ಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದಪಿಡಿದೆ
ಗೆಲಿಸು ಭವದುರಿತ ಪ್ರಸನ್ವೆಂಕಟ ನೃಸಿಂಹ ॥೩॥
***
ರಾಗ : ಕಾಂಬೋಧಿ ತಾಳ : ಝಂಪೆತಾಳ
ಪ್ರಹ್ಲಾದವರದ ಭಯ ಗಜಕೆ ಸಿಂಹ ಪರಮ
ಆಹ್ಲಾದ ಪದವಿತ್ತು ಪೊರೆಯೋ ನರಸಿಂಹ ।ಪ।
ಹಿಂದೆ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದ
ನೊಂದವನ ಬಾಧೆಯಲಿ ಮರುಗಿ ಸೊರಗಿ
ಇಂದಿರೇಶ ಸಲಹೆನಲು ಗಾಢಸ್ತಂಭದಲೊದಗಿ
ಬಂದವನುದರ ಬಗೆದೆ ರುದಿರವನು ಸವಿದೆ ॥೧॥
ಅಸುರ ಕೆಡಲದಕಂಡು ಅತಿಹರುಷದಿಂದ
ತ್ರಿದಶಶಂಬರದಿ ಪೂಮಳೆಗರೆಯಲು
ಶಿಶುವೇಕ ಮಾನಸದಿ ಮೊರೆಹೊಕ್ಕು ಪೊಗಳುತಿರೆ
ಬಿಸಜಾಕ್ಷನ ಕರುಣದಿಂದ ಸಲಹಿದೆಯಾಗಿ ॥೨॥
ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯ
ನಳಿನಾಕ್ಷ ನಿಮ್ಮ ಗುರುತವ ಕಾಣದೆ
ಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದಪಿಡಿದೆ
ಗೆಲಿಸು ಭವದುರಿತ ಪ್ರಸನ್ವೆಂಕಟ ನೃಸಿಂಹ ॥೩॥
***
ಪ್ರಹ್ಲಾದ ವರದ ಭಯಗಜಕೆ ಸಿಂಹ ಪರಮ
ಆಹ್ಲಾದಪದವಿತ್ತು ಪೊರೆಯೋ ನರಸಿಂಹ ।| pa |।
ಹಿಂದೆ ಹಿರಣ್ಯ ಕನುದರದಲಿ ಜನಿಸಿ ಪ್ರಹ್ಲಾದ
ನೊಂದವನ ಬಾಧೆಯಲಿ ಮರುಗಿ ಕೊರಗಿ
ಇಂದಿರೇಶ ಸಲಹೆನಲು ಗಾಢ ಸ್ತಂಭದ ಲೊದಗಿ
ಬಂದವ ನುದರ ಬಗೆದೆ ರುಧಿರವನು ಸವಿದೆ ॥ 1 ॥
ಅಸುರ ಕೆಡೆಲದ ಕಂಡು ಅತಿ ಹರುಷದಿಂದ
ತ್ರಿದಶ ಶಂಬರದಿ ಪೂಮಳೆ ಗರೆಯಲು
ಶಿಶುವೇಕ ಮಾನಸದಿ ಮೊರೆ ಹೊಕ್ಕು ಪೊಗಳುತಿರೆ
ಬಿಸಜಾಕ್ಷನ ಕರುಣದಿಂ ದವನ ಸಲಹಿದೆಯಾಗಿ ॥ 2 ॥
ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯ
ನಳಿನಾಕ್ಷ ನಿಮ್ಮ ಗುರುತವ ಕಾಣದೆ
ಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದ ಪಿಡಿದೆ
ಗೆಲಿಸು ಭವ ದುರಿತವ ಪ್ರಸನ್ವೆಂಕಟ ನೃಸಿಂಹ ॥ 3 ॥
***
prahlāda varada bhayagajake sinha parama āhlādapadavittu poreyō narasinha।| pa |।
hinde hiraṇya kanudaradali janisi prahlāda nondavana bādheyali marugi koragi indirēśa salahenalu gāḍha stambhada lodagi bandava nudara bagede rudhiravanu savide॥ 1॥
asura keḍelada kaṇḍu ati haruṣadinda tridaśa śambaradi pūmaḷe gareyalu śiśuvēka mānasadi more hokku pogaḷutire bisajākṣana karuṇadiṁ davana salahideyāgi॥ 2॥
halavu yōnigaḷalli tirugi baḷalidenayya naḷinākṣa nim’ma gurutava kāṇade iḷeyalli dvijanāgi puṭṭi tava pada piḍide gelisu bhava duritava prasanveṅkaṭa nr̥sinha॥ 3॥
Plain English
prahlada varada bhayagajake sinha parama ahladapadavittu poreyo narasinha।| pa |।
hinde hiranya kanudaradali janisi prahlada nondavana badheyali marugi koragi indiresa salahenalu gadha stambhada lodagi bandava nudara bagede rudhiravanu savide॥ 1॥
asura kedelada kandu ati harusadinda tridasa sambaradi pumale gareyalu sisuveka manasadi more hokku pogalutire bisajaksana karunadim davana salahideyagi॥ 2॥
halavu yonigalalli tirugi balalidenayya nalinaksa nim’ma gurutava kanade ileyalli dvijanagi putti tava pada pidide gelisu bhava duritava prasanvenkata nrsinha॥ 3॥
***
ಪ್ರಹ್ಲಾದ ವರದ ಭಯಗಜಕೆ ಸಿಂಹಪರಮಆಹ್ಲಾದಪದವಿತ್ತು ಪೊರೆಯೊ ನರಸಿಂಹ ಪ.
ಹಿಂದೆ ಹಿರಣ್ಯಕನುದರದಲಿ ಜನಿಸಿ ಪ್ರಹ್ಲಾದನೊಂದವನ ಬಾಧೆಯಲಿ ಮರಳಿ ಮರಳಿಇಂದಿರೇಶ ಸಲಹೆನಲು ಗಡಾ ಸ್ತಂಭದಲೊದಗಿಬಂದವನುರವ ಬಗಿದು ರುಧಿರವನು ಸವಿದೆ 1
ಅಸುರ ಕೆಡೆದದ ಕಂಡು ಅತಿ ಹರುಷದಿಂದ ತ್ರಿದಶರಂಬರದಿ ಪೂಮಳೆಗರೆಯಲುಶಿಶುವೇಕ ಮಾನಸದಿ ಮರೆಹೊಕ್ಕು ಪೊಗಳುತಿರೆಬಿಸಜಾಕ್ಷ ಕರುಣದಿಂದವನ ಸಲಹಿದೆಯಾಗಿ 2
ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯನಳಿನಾಕ್ಷ ನಿಮ್ಮ ಗುರುತವ ಕಾಣದೆಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದವಿಡಿದೆಗೆಲಿಸು ಭವದುರಿತವ ಪ್ರಸನ್ವೆಂಕಟ ನೃಸಿಂಹ 3
*********