Showing posts with label ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ ಮನವೆಂಬೊ purandara vittala SRINIVASA ENNA BITTU NEENAGALADE SRINIVASA MANAVEMBO. Show all posts
Showing posts with label ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ ಮನವೆಂಬೊ purandara vittala SRINIVASA ENNA BITTU NEENAGALADE SRINIVASA MANAVEMBO. Show all posts

Saturday, 11 December 2021

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ ಮನವೆಂಬೊ purandara vittala SRINIVASA ENNA BITTU NEENAGALADE SRINIVASA MANAVEMBO


ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ ||

ಮನವೆಂಬೊ ಮಂಟಪ
ತನುವೆಂಬೊ ಹಾಸುಮಂಚ
ಜ್ಞಾನವೆಂಬೊ ದಿವ್ಯ ದೀಪದ ಬೆಳಕಿಲಿ
ಸನಕಾದಿವಂದ್ಯ ನೀ ಬೇಗ ಬಾರೋ ||

ಪಂಚದೈವರು ಯಾವಾಗಲು ಎನ್ನ
ಹೊಂಚು ಹಾಕಿ ನೋಡುತಾರೆ
ಕೊಂಚಗಾರರು ಆರು ಮಂದಿ ಅವರ್-
ಹಿಂಚುಮುಂಚಿಲ್ಲದೆ ಎಳೆಯುತಾರೆ ||

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಇನ್ನಾದರು ಎನ್ನ ಕೈ ಪಿಡಿಯೊ
ಘನ್ನಮಹಿಮ ಶ್ರೀಪುರಂದರವಿಠಲ
ಮನ್ನಿಸಿ ಎನ್ನನು ಕಾಯಬೇಕೋ ||
***


pallavi

shrInivAsa enna biTTu nInagalade

caraNam 1

manavembo maNTapatanuvembo hAsumanca jnAnavembo
divya dIpada beLagili sanakAdi vandya nI bEga bArO

caraNam 2

panca daivaru yAvAgalu enna honcu hAgi nODudAro
knocagAraru Aru mandi avar hincumuncillade eLeyudAre

caraNam 3

munna mADida duSkarmadi baLalide innAdaru enna kai piDiyo
ghanna mahima shrI purandara viTTala mannisi ennanu kAyabEkO
****

ರಾಗ ಶ್ರೀರಂಜನಿ ರೂಪಕತಾಳ

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ || ಪ ||

ಮನವೆಂಬೊ ಮಂಟಪ

ತನುವೆಂಬೊ ಹಾಸು ಮಂಚ

ಜ್ಞಾನವೆಂಬೊ ದಿವ್ಯ ದೀಪದ ಬೆಳಗಿಲಿ

ಸನಕಾದಿ ವಂದ್ಯ ನೀ ಬೇಗ ಬಾರೋ || 1 ||

ಪಂಚದೈವರು ಯಾವಾಗಲು ಎನ್ನ

ಹೊಂಚು ಹಾಕಿ ನೋಡುತಾರೆ

ಕೊಂಚಗಾರರು ಆರು ಮಂದಿ ಅವರ-

ಹಿಂಚುಮುಂಚಿಲ್ಲದೆ ಎಳೆಯುತಾರೆ || 2 ||

ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ

ಇನ್ನಾದರು ಎನ್ನ ಕೈ ಪಿಡಿಯೊ

ಘನ್ನಮಹಿಮ ಶ್ರೀ ಪುರಂದರ ವಿಠಲ

ಮನ್ನಿಸಿ ಎನ್ನನು ಕಾಯಬೇಕೋ || 3 ||
***

Śrīnivāsa enna biṭṭu nīnagalade || pa ||

manavembo maṇṭapa

tanuvembo hāsu man̄ca

jñānavembo divya dīpada beḷagili

sanakādi vandya nī bēga bārō || 1 ||

pan̄cadaivaru yāvāgalu enna

hon̄cu hāki nōḍutāre

kon̄cagāraru āru mandi avara-

hin̄cumun̄cillade eḷeyutāre || 2 ||

munna māḍida duṣkarmadi baḷalide

innādaru enna kai piḍiyo

ghannamahima śrī purandara viṭhala

mannisi ennanu kāyabēkō || 3 ||
***