Showing posts with label ದೇವೀ ಕಮಲಾಕ್ಷೀ ಭಜೇಹಂ ಸದಾತ್ವಂ ಅಂಬಾ narasimhavittala. Show all posts
Showing posts with label ದೇವೀ ಕಮಲಾಕ್ಷೀ ಭಜೇಹಂ ಸದಾತ್ವಂ ಅಂಬಾ narasimhavittala. Show all posts

Tuesday, 3 August 2021

ದೇವೀ ಕಮಲಾಕ್ಷೀ ಭಜೇಹಂ ಸದಾತ್ವಂ ಅಂಬಾ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ದೇವೀ ಕಮಲಾಕ್ಷೀ ಭಜೇಹಂ ಸದಾತ್ವಂ ಅಂಬಾ ಪ


ಸಲ್ಲಲಿತಾಂಗೇ | ಸುಂದರವದನೆ | ಮಲ್ಲಿಮರ್ದನ

ಹೃದಯ ಸದನೇ

ಮಲ್ಲಿಕಾದಿ ಪುಷ್ಪವದನೇ | ಫುಲ್ಲಲೋಚನೇ | ಸುನಯನೇ |

ಬಲ್ಲಿದ ಭಕ್ತಿ ಸಮುದಾಯನೇ | ಕೊಲ್ಲಾಪುರ, ಅವಧಾರಣೇ

ಆಹ್ಲಾದಕರಸುವದನೇ, ಕೊಲ್ಲಾಪುರವಾಸಿನೇ | ಶ್ರೀ ಲಕ್ಷ್ಮಿದೇವಿ 1


ಮೋಕ್ಷದಾಯಿಕೇ | ಮಂದಗಮನೇ | ಅಕ್ಷಯ

ಫಲ ಪ್ರದಾಯಿನೇ

ರಕ್ಷಿಸೇ ಹಂಸಗಮನೇ | ಅಕ್ಷಯ ಫಲ ಪ್ರದಾಯಿನೇ |

ಪಕ್ಷಿವಾಹನ ವಕ್ಷವಾಸಿನೇ | ಲಕ್ಷಕೋಟಿ ನಿಭಾನನೇ,

ರಕ್ಷಮಾಂ ಲಕ್ಷ್ಮಿದೇವಿ 2


ನರಸಿಂಹ ವಿಠಲ ಪ್ರೀಯೇ ನಾರೀಮಣೀ ಹೃದಯ ಸೇವೆ

ಹಾರ ದೇಹಾಲಂಕಾರಿಯೇ | ಮಾರಜನನಿ | ಜಯ

ಚಾರುಚಂದ್ರ ಸಹೋದರಿಯೇ | ಕರವೀರ

ಪುರವಾಸಿನೇ ಲಕ್ಷ್ಮೀದೇವಿಯೇ 3

***