Showing posts with label ಸತ್ಯಪ್ರಮೋದ ತೀರ್ಥರ shyamasundara satyapramoda teertha stutih. Show all posts
Showing posts with label ಸತ್ಯಪ್ರಮೋದ ತೀರ್ಥರ shyamasundara satyapramoda teertha stutih. Show all posts

Friday, 27 December 2019

ಸತ್ಯಪ್ರಮೋದ ತೀರ್ಥರ ankita shyamasundara satyapramoda teertha stutih

ಶ್ರೀಹರಿವಾಯು

ಸತ್ಯಪ್ರಮೋದ ತೀರ್ಥರ ಪಾದ |
ಪದುಮವ ನಿತ್ಯದಿ  ಭಜಿಸುವರಾ |
ಸತ್ಯಲೋಕೇಶನ ಪೆತ್ತ ಪರಮಾತ್ಮನು ನಿತ್ಯದಿ ಕರಪಿಡಿವ ತಿಳಿ ಮಾನವಾ ||


ರವಿಸನ್ನಿಭಾಂಗರು | ಭವದಿ ದಿವಿಜೇಂದ್ರರು |
ಕವಿಗಣ ಸನ್ನುತರು | ಭವದೂರರು |
ಭುವನದೋಳ್ ದೃಢಚಿತ್ತದವರಾಗಿ | ತಪದಲ್ಲಿ ಧ್ರುವನಂತೆ ತೋರುವರು ಸುಧೀರರು ||

ಭುಜಗಾಧಿ ಪತಿಯಂತೆ ಯೋಗ ಸುಸಾಧಕರು
ಭುಜಗಾರಿಯಂದದಿ ದ್ವಿಜನಾಥರು | ಭುಜಗ ಭೂಷಣನಂತೆ
ನಿಜವೈಷ್ಣವೋತ್ತಮರು
ವಿಜಯಾನಂದದಿ | ದಿಗ್ವಿಜಯ ಶಾಲಿಗಳಿವರು ||

ಸೋಮನಂದದಿ ಸುಸಾಧಕರೆನಿಸುತ |
ನೇಮಪೂರ್ವಕವಾಗಿ | ನಿರುತದಲ್ಲಿ
ಶಾಮಸುಂದರ ಸೀತಾರಾಮನರ್ಚಿಸುತಲಿ |
ಭೂಮಿಯೋಳು ಮೆರೆವರೊ ಮಹಾತ್ಮರೋ ||
********