Showing posts with label ಸುಂದರ ಮೂರುತಿ ಹರಿಯೆ ಬಾರೆಂದು ಕಶ್ಯಪ kamalanabha vittala. Show all posts
Showing posts with label ಸುಂದರ ಮೂರುತಿ ಹರಿಯೆ ಬಾರೆಂದು ಕಶ್ಯಪ kamalanabha vittala. Show all posts

Thursday, 5 August 2021

ಸುಂದರ ಮೂರುತಿ ಹರಿಯೆ ಬಾರೆಂದು ಕಶ್ಯಪ ankita kamalanabha vittala

 ..

kruti by Nidaguruki Jeevubai


ಸುಂದರ ಮೂರುತಿ ಹರಿಯೆ ಬಾ-

ರೆಂದು ಕಶ್ಯಪ ಋಷಿ ಅದಿತಿಯರು

ಮಂದಹಾಸದಿ ನಮ್ಮ ಮಂದಿರಕೀಗ ಗೋ-

ವಿಂದ ಬಾ ಶ್ರೀಮುಕುಂದ ಬಾ ಯಾದವ

ವೃಂದ ಬಾ ಬಲುಮುದದಿಂದ ಬಾ ಬಾ-

ರೆಂದು ಕರದಾರು ಶೋಭಾನೆ 1


ಅಚ್ಚುತಾನಂತ ಶ್ರೀಹರಿ ನೀನು

ಸಚ್ಚಿದಾನಂತಾತ್ಮನೆ ನೀನು

ಮಿತ್ರೆ ಲಕುಮಿ ಒಡಗೂಡುತ ಬಾರೆಂದು

ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು

ಕೀರ್ತಿಪರು ಅನಸೂಯಾತ್ರಿಯರು

ಬಾರೆಂದು ಕರೆದಾರು ಶೋಭಾನೆ 2


ಭಾಗವತರ ಪ್ರಿಯ ಬಾರೆಂದು

ಭಾರದ್ವಾಜರು ಭಕ್ತಿಯಲಿ

ಬಾರಿಬಾರಿಗೆ ಸ್ತುತಿಗೈವರು ಸತಿ ಸುಶೀಲೆ-

ಯರು ಸುಂದರ ನಾರಿಯರು

ಕರೆವರು ಕಂಸಾರಿ

ಬಾರೆಂದು ಕರದಾರು ಶೋಭಾನೆ 3

ಹಸ್ತಿವರದ ಹರಿ ಬಾರೆಂದು

ವಿಶ್ವಾಮಿತ್ರರು ಹರುಷದಲಿ

ಪತ್ನಿ ಕುಮುದ್ವತಿ ಸತಿ ಸಹಿತದಿ ಕರೆವರು

ಭಕ್ತಿಯಲಿ ಪರಮಾಸಕ್ತಿಯಲಿ

ಹರಿಯನು ಸ್ತೋತ್ರದಲಿ

ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4

ಕೌಶಿಕ ಯಜ್ಞಪಾಲನೆ ಬಾ

ಕಂಸನ ಸಭೆಯಲಿ ಸೆಳೆದನೆ ಬಾ

ಹಂಸವಾಹನಪಿತ ಬಾರೆಂದು ಕರೆವರು

ಗೌತಮರು ಪತ್ನಿ ಅಹಲ್ಯೆಯರು

ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ

ಬಾರೆಂದು ಕರದಾರು ಶೋಭಾನೆ 5


ಜಗದುದರನೆ ಶ್ರೀ ಹರಿಯೆ ಬಾ

ನಿಗಮತಂದು ಸುತಗಿತ್ತನೆ ಬಾ

ಝಗಿಝಗಿಸುವ ಆಭರಣಗಳ್ಹೊಳೆಯುತ

ಬಾರೆಂದು ಜಯ ಜಯವೆನ್ನುವರು

ಋಷಿ ಜಗದಗ್ನಿಯರು ರೇಣುಕ ಸಹಿತ

ಶ್ರೀಶನ ಕರದಾರು ಶೋಭಾನೆ 6

ಮಂಗಳ ಮದನ ಗೋಪಾಲನಿಗೆ

ಮಂಗಳ ಯದುಕುಲ ತಿಲಕನಿಗೆ

ಮಂಗಳ ಕಮಲಾನಾಭ ವಿಠ್ಠಲನಿಗೆ

ಮಂಗಳವು ವಶಿಷ್ಠರು ಪಾಡುವರು ಸತಿ ಅ-

ರುಂಧತಿಯರು ಜಯ ಜಯ

ಮಂಗಳವೆಂದು ಕರದಾರು ಶೋಭಾನೆ7


ಶೋಭನವೆನ್ನಿರೆ ಶ್ರೀಹರಿಗೆ

ಶೋಭನವೆನ್ನಿರೆ ಮಾಧವಗೆ

ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ

ಸಿರಿಯರಸಗೆ ದಿವ್ಯ ಶೋಭಾನೆ

ಪರಮಪುರುಷನಿಗೆ ಶೋಭಾನೆ

ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8

***