Showing posts with label ಶಾರದೇಂದು ಮುಖಿ ನೀರಜ ನಯನನೆ vidyaratnakara teertha. Show all posts
Showing posts with label ಶಾರದೇಂದು ಮುಖಿ ನೀರಜ ನಯನನೆ vidyaratnakara teertha. Show all posts

Saturday, 1 May 2021

ಶಾರದೇಂದು ಮುಖಿ ನೀರಜ ನಯನನೆ vidyaratnakara teertha

ಶಾರದೇಂದು ಮುಖಿ -

ನೀರಜ ನಯನನೆ ।

ಬಾರೆಲೆ ಬಾಗಿಲ -

ತೆಗೆಯಲೇ ಭಾಮೆ ।। ಪಲ್ಲವಿ ।।


ಯಾರಯ್ಯಾ ಬಾಗಿಲ -

ಹೊರಗೆ ನಿಂತಿರುವನು ।

ಜಾರ ಪುರುಷನಂತೆ -

ತೋರುವೆ ನೀನು ।। ಚರಣ ।।


ಜಾರನಾದರೆ ನಿನಗೆ -

ಜಾರನಲ್ಲವೇ । ಮೀನಾ ।

ಕಾರ ಧರಿಸಿರುವ -

ಹರಿಯಾಲೆ ಭಾಮೆ ।। ಚರಣ ।।


ಮೀನನಾದರೆ ಬಲು -

ಮೌನದಲ್ಲಿರದಂತೆ ।

ಮಾನವರಂತೆ ಮಾತು -

ಯಾವುದೋ ನಿನಗೆ ।। ಚರಣ ।।

ಮಂದರ ಗಿರಿಯ ಬೆ-

ನ್ನಿಂದ ಧರಿಸಿದ ।

ಅಂದ ಕೂರ್ಮ-

ನಲ್ಲವೇನೆ ಭಾಮೆ ।। ಚರಣ ।।


ಕೂರ್ಮ ನೀನಾದರೆ -

ಕೂಪದೊಳಿರುವದೇ ।

ಧರ್ಮವೆಂಬುದನು -

ಮರೆತೆಯಾ ನೀನು ।। ಚರಣ ।।

***