Showing posts with label ನಿಜವಿರಬೇಕು ಸಜ್ಜನರಿಗೆ ಒಂದು tande muddumohana vittala. Show all posts
Showing posts with label ನಿಜವಿರಬೇಕು ಸಜ್ಜನರಿಗೆ ಒಂದು tande muddumohana vittala. Show all posts

Friday, 27 December 2019

ನಿಜವಿರಬೇಕು ಸಜ್ಜನರಿಗೆ ಒಂದು ankita tande muddumohana vittala

by ತಂದೆ ಮುದ್ದುಮೋಹನ ವಿಠಲರು
ನಿಜವಿರಬೇಕು ಸಜ್ಜನರಿಗೆ ಒಂದು ಪ

ಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪ

ಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿಚರಿತೆಯ ಮುದದಿ ಕೇಳುವಂಥ1

ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ 2

ಮಾತಾಪಿತರು ಸುತ ಭ್ರಾತರಿಷ್ಟಾಬಂಧುವ್ರಾತರೆಲ್ಲರು ಹರಿಗೆ ದೂತರೆಂದುಮಾತುಳಾಂತಕತಂದೆಮುದ್ದುಮೋಹನವಿಠಲಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3
*******