Showing posts with label ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ vyasa vittala SMARISI BADUKIRO DIVYA CHARANAKERIGIRO. Show all posts
Showing posts with label ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ vyasa vittala SMARISI BADUKIRO DIVYA CHARANAKERIGIRO. Show all posts

Tuesday, 31 December 2019

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ankita vyasa vittala SMARISI BADUKIRO DIVYA CHARANAKERIGIRO



ಶ್ರೀವ್ಯಾಸವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ವಿರಚಿತ 
ವಿಜಯದಾಸರ ಕವಚ
ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ೭ ||

ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || ೯ ||

ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ
ಶಾಂತ ಗುರುಗಳ ಪಾದವಂತು ನಂಬಿರೋ || ೧೦ ||

ಖೇದವಾಗದೊ ನಿಮಗೆ ಮೋದವಾಹುದೊ
ಆದಿದೇವನ ಸುಪ್ರಸಾದವಾಹುದೊ || ೧೧ ||

ತಾಪ ತಡೆವನೊ ಬಂದ ಪಾಪ ಕಡಿವನೊ
ಶ್ರೀಪತಿಯಪಾದ ಸಮೀಪವಿಡುವನೋ || ೧೨ ||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ ||

ವೇದ ಓದಲು ಬರಿದೆ ವಾದಮಾಡಲು
ಹಾದಿಯಾಗದೊ ಬುಧರ ಪಾದ ನಂಬದೆ || ೧೪ ||

ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು
ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ ||

ದಾನ ಮಾಡಲು ದಿವ್ಯಗಾನಪಾಡಲು
ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ ||

ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||

ಪೂಜೆ ಮಾಡಲು ಕಂಡ ಗೋಜುಬೀಳಲು
ಬೀಜಮಾತಿನ ಫಲಸಹಜ ದೊರೆಯದು || ೧೮ ||

ಸುರಸು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ ||

ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ ||

ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ
ಆದಿದೇವನ ಸುಪ್ರಸಾದವಾಹುದೊ || ೨೧ ||

ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ || ೨೨ ||

ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ ||

ಮಂದಮತಿಗಳು ಇವರ ಚೆಂದವರಿಯದೆ
ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ ||

ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದವಚನವ ನಿಜಕೆ ತಂದು ಕೊಡುವನೊ || ೨೫ ||

ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||

ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ ||

|| ಇತಿ ಶ್ರೀವ್ಯಾಸವಿಠ (ಕಲ್ಲೂರು ಸುಬ್ಬಣ್ಣಾಚಾರ್ಯ) ವಿರಚಿತ ವಿಜಯದಾಸರ ಕವಚ ಸಾಮಾಪ್ತವಾಯಿತು ||
***


pallavi

smarisi badukiro divya caraNakeragiro durita toredu poreva vijaya gurugalembarA

caraNam 1

dAsarAyana dayava sUsi paDedanA dOSarahitanA santOSabharitanA

caraNam 2

jAnAvantana balu nidhAni shAntana mAnyavantana bahuvadAnyadAtana

caraNam 3

hariya bhajisuva narahariya yajisuva durita tyajisuva janake haruSa surisuva

caraNam 4

mOdabharitana panchabhEdavaritana sAdhucaritana manOviSAda maretana

caraNam 5

ivara nambida janakE bhavavidembudu havanavAgadO nammavara matavidu

caraNam 6

pApakOTiya rAshi lEpavAgadu tApa kalEvanu balu dayApayOnidhi

caraNam 7

pavanarUpadi hariya stavana mADida bhuvana bEDida mAdhavana nODida

caraNam 8

ragganEndana bhavavu higgitEndana maggalAggana antaraggavaritana

caraNam 9

kAshinagaradallidda vyAsadEvana dayava sUsi paDEdana ullAsatanadali

caraNam 10

cintEbEDirO nishcintarAgirO shAntagurugala pAdondu nambirO

caraNam 11

khEdavAgadO nimage modavAhudo Adidevana suprasAdavAhudO
1
caraNam 2

tApa taDevanu banda pApa kaDivanu shrIpatIya padasamIpaviDuvanu
1
caraNam 3

veda Odalu baride vAda mADalu hAdi doreyadu budhara pAda nanbade
1
caraNam 4

gagge mindare malavu hingitallade ranganoliyanu bhaktara sanga dorakade
1
caraNam 5

lekkavilladA deshatukki bandarU duhkhavallade lesha bhakti dorekadu
1
caraNam 6

dAna mADalu divyagAna pADalu jAna doreyado ivaradhInavAgade
1
caraNam 7

niSThe yAtake kaNDa kaSThavyAtake diTTa gurugala pAda muTTI bhajisiro
1
caraNam 8

pUje mADalu kaNDa goju bIlalu bIja mAtina phala sahaja dorakadu
1
caraNam 9

suraru ellaru ivara karava piDivaro taralarandadi hinde tirugutipparo
20: grahagalellavU ivarge sahAya mADuta ahorAtrili sukhava koDuvavu
21: vyAdhi bArado dEhabAdhe taTTado Adidevana suprasAdavAhudo
2
caraNam 2

patitapAmara mandamatiyu nA balu tutisalApane ivara atishayangala
2
caraNam 3

karuNadindaliymma porevanallade duritakoTiya bega tariva dayadali
2
caraNam 4

mandamatigalu ivara candavariyade nindisuvaro bhavada bhanda tappado
2
caraNam 5

indirApati ivara munde kuNivano anda vachanava nijake tandu torpanu
2
caraNam 6

udayakAladi I padava paThisalu madaDanAdaru jAna udayavAhudo
2
caraNam 7

saTeyidellavo vyAsaviThala ballano paThisabahididu keli kuTilarahitaru
***



ವಿಜಯ ಕವಚ
ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ ||ಪ||
ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ ||೧||
ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ ||೨||
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ ||೩||
ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ ||೪||
ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು ||೫||
ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ ||೬||
ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ ||೭||
ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ ||೮||
ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ ||೯||
ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ ||೧೦||
ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ ||೧೧||
ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ ||೧೨||
ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ||೧೩||
ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ ||೧೪||
ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ ||೧೫||
ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ ||೧೬||
ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ||೧೭||
ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ ||೧೮||
ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು ||೧೯||
ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ ||೨೦||
ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ ||೨೧||
ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ ||೨೨||
ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ ||೨೩||
ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ ||೨೪||
ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು ||೨೫||
ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ ||೨೬||
ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು ||೨೭||
||ಶ್ರೀಕೃಷ್ಣಾರ್ಪಣಮಸ್ತು||
***********

ರಾಗ : ಸಾರಂಗ ತಾಳ : ಆದಿ
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ ।
ದುರಿತ ತರಿದು ಪೊರೆವ ವಿಜಯಗುರುಳೆಂಬರ ।। ಪಲ್ಲವಿ ।।
ದಿವ್ಯ ಚರಣ = ದಿವ್ಯ ಪಾದ.
ಹಿನ್ನೆಲೆ :
ಶ್ರೀ ಹರಿಯ ಸರ್ವೋತ್ತಮತ್ವವನ್ನು ಪ್ರಕಟಿಸಲು ವೈಕುಂಠಕ್ಕೆ ಹೋದಾಗ ಶ್ರೀ ಭೃಗು ಮಹರ್ಷಿಗಳು ಶ್ರೀ ಹರಿಯ ವಕ್ಷಕ್ಕೆ ಒದ್ದಾಗ - ಎಚ್ಚೆತ್ತನಂತೆ ನಟಿಸುತ್ತಾ ಶ್ರೀ ಹರಿಯು...
ಆಹ ತೇ ಸ್ವಾಗತಂ ಬ್ರಹ್ಮನ್ನಿಷೀದಾತ
್ರಾಸನೇ ಕ್ಷಣಂ ।
ಅಜಾನತಾಮಾಗಸಂ ನಃ ಕ್ಷ೦ತುಮರ್ಹಸಿ ಮಾನದ ।।
ಪುನೀಹಿ ಸಹಲೋಕಂ ಮಾಂ ಲೋಕಪಾಲಾಶ್ಚಮದ್ಗತಮ್ ।
ಪಾದೋದಕೇನ ಭವತಸ್ತಿರ್ಥಾನಾ೦ ತೀರ್ಥಕಾರಿಣಾ ।।
ದಾಸರಾಯನ ದಯವ ಸೂಸಿ ಪಡೆದನಾ ।
ದೋಷರಹಿತನ ಸಂತೋಷಭರಿತನಾ ||1||
" ದೋಷ ರಹಿತನಾ "
ಶ್ರೀ ಹರಿಗೆ ಪಾದ ಪ್ರಹಾರ ಮಾಡಿದ ದೋಷದಿಂದ ದ್ವಾಪರ ಯುಗದಲ್ಲಿ ವ್ಯಾಧನಾಗಿ ಜನ್ಮ ತಾಳಿದರಲ್ಲದೇ, ಕಂಸನಲ್ಲಿ ಆವಿಷ್ಟರಾಗಿದ್ದು ಕಂಸನ ವಧೆಯ ನಂತರ ಶ್ರೀ ಕೃಷ್ಣನಲ್ಲಿ ಪ್ರವೇಶಿಸಿ ದೋಷ ಮುಕ್ತರಾಗಿದ್ದಾರೆ. ( ಕಂಸಾವಿಷ್ಟ: ಸ್ವಯಂ ಭೃಗು: )
ಜ್ಞಾನವಂತನ ಬಲು ನಿದಾನಿ ಶಂತನಾ ।
ಮಾನ್ಯವಂತನ ಬಹುವದನ್ಯದಾಂತನಾ ||2||
" ಜ್ಞಾನವಂತನಾ "
ಶ್ರೀ ವೇದವ್ಯಾಸರು ಸಾಕ್ಷಾತ್ ಶ್ರೀ ಭೃಗು ಮಹರ್ಷಿಗಳೇ ಮೊದಲಾದವರಿಗೆ ನಿರ್ಮಲವೂ, ಮಂಗಳಕರವೂ ಆದ ಜ್ಞಾನವನ್ನು ನೀಡಿ ಕರ್ಮಯೋಗಕ್ಕೆ ಪ್ರವರ್ತಕರನ್ನಾಗಿ ಮಾಡಿದ್ದಾರೆ. ( ಭೃಗ್ವಾದೀನ್ ಕರ್ಮಯೋಗಸ್ಯ ಜ್ಞಾನ೦ ದತ್ವಾsಮಲಂ ಶುಭಮ್ )
" ಬಲು ನಿದಾನಿ "
ನಿದಾನಂ ಕಾರಣೇವತ್ಸದಾಮಾದಿ ಕಾರಣೇ ಕ್ಷಯೇ ।
ನಿದಾನಂ ಕಾರಣೇ ರೋಗ ನಿರ್ಣಯೇ ವತ್ಸದಾಮನಿ ।।
1. ಶ್ರೀ ನಾರದಾಂಶ ಪುರಂದರದಾಸರ ನಂತರ " ಹರಿದಾಸ ಪಂಥ " ದ ಚಲನೆಗೆ ಇವರೇ ಕಾರಣರು.
2. ಶ್ರೀ ಸಹ್ಲಾದಾಂಶ ಜಗನ್ನಾಥದಾಸರಿಗೆ ಬಂದಿದ್ದ ಉದರ ವ್ಯಾಧಿಯನ್ನು ಶ್ರೀ ವಿಘ್ನೇಶ್ವರ ಅಂಶ ಸಂಭೂತರಾದ ಗೋಪಾಲದಾಸರನ್ನು ಮಾಧ್ಯಮವನ್ನಾಗಿ ಇಟ್ಟುಕೊಂಡು ವಾಸಿ ಮಾಡಿದ್ದಾರೆ.
3. ಛಾಗೀ ಕೇಶವರಾಯನಿಗೆ ಬಂದಿದ್ದ ವ್ಯಾಧಿಯನ್ನು ಪರಿಹರಿಸಿ ಆಯುರ್ದಾನ ಮಾಡಿ ಅಪಮೃತ್ಯು ಪರಿಹಾರ ಮಾಡಿದ್ದಾರೆ.
ಶಾಂತನ = ಅರಿಷಡ್ವರ್ಗಗಳ ನಿಗ್ರಹ ಉಳ್ಳವರು
ಮಾನ್ಯವಂತನಾ = ಪರಮ ಪೂಜ್ಯರು
ಬಹುವದಾನ್ಯ = ದಾನ ಧರ್ಮಗಳು ಮಾಡುವಲ್ಲಿ ಔದಾರ್ಯ
ದಾಂತನಾ = ಭಕ್ತರ ಕಾಮನೆಗಳನ್ನು ವಿಶೇಷ ದಾನ ಮಾಡುವ ಸ್ವಭಾವ ಉಳ್ಳವರು ( ದಾಂತಿಸ್ತು ದಮಥೋದಮಃ - ಅವದಾನಂ ಕರ್ಮವೃತ್ತಂ ಕಾಮ್ಯದಾನಂ ಪ್ರವಾರಣಮ್ )
ಹರಿಯ ಭಜಿಸುವ ನರಹರಿಯ ಯಜಿಸುವ ।
ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||3||
" ಹರಿಯ ಭಜಿಸುವ "
ಶ್ರೀ ಹರಿ ವಾಯುಗಳನ್ನು ಕ್ರಮವಾಗಿ ಸರ್ವೋತ್ತಮತ್ವೇನ - ಜೀವೋತ್ತಮತ್ವೇನ ಸೇವಿಸುವ - ತಪಸ್ಸನ್ನು ಮಾಡಿರುವ!
" ದುರಿತ ತ್ಯಜಿಸುವಾ "
ತಾವು ಸ್ವತಃ ಪಾಪಗಳಿಂದ ದೂರವಿದ್ದವರಾಗಿ ಭಕ್ತರ ಪಾಪಗಳು ತಾವಾಗಿಯೇ ಬಿಟ್ಟು ಹೋಗುವಂತೆ ಅನುಗ್ರಹಿಸುವ..
" ಜನಕೆ ಹರುಷ ಸುರಿಸುವಾ "
ತಮ್ಮ ಪಾದಾಶ್ರಿತರಾದವರನ್ನು ಸದಾ - ಸರ್ವ ದೇಶ ಕಾಲಗಳಲ್ಲಿಯೂ ಪೂರ್ಣ ಸುಖದಿಂದ ಇರುವಂತೆ ಮಾಡುವ ಕರುಣಾ ಸ್ವಭಾವದವರು.
ಮೋದ ಭರಿತನಾ ಪಂಚಭೇದವರಿತನಾ ।
ಸಾಧು ಚರಿತನಾ ಮನ ವಿಷಾದ ಮರೆತನಾ ||4||
ಮೋದ ಭರಿತನಾ = ಸರ್ವವನ್ನೂ ಶ್ರೀ ಹರಿಗೆ ಅರ್ಪಿಸಿ ಆನಂದ ಪಡುವವರು
" ಪಂಚ ಭೇದವರಿತನಾ "
1. ಜೀವ ಜೀವರ ಭೇದ
2. ಜಡ ಜಡಗಳ ಭೇದ
3. ಜೀವ ಜಡಗಳ ಭೇದ
4. ಜೀವ ಈಶ ಭೇದ
5. ಜಡ ಈಶ ಭೇದ
ಈ ಐದು ಭೇದಗಳನ್ನೂ ತಿಳಿದವರೂ ಮತ್ತು ತಿಳಿಸುವವರು.
ಸಾಧು ಚರಿತನಾ = ಸ್ವಭಾವದಿಂದಲೇ ಸ್ವತಃ ಸತ್ಪುರುಷರಾಗಿದ್ದು ಸತ್ಯಸಂಧರಾಗಿ, ಆರ್ತರಾದ ಸುಜನರಲ್ಲಿ ಕನಿಕರ ಉಳ್ಳವರಾಗಿ ರಕ್ಷಿಸುತ್ತಿದ್ದಾರೆ.
ಮನ ವಿಷಾದ ಮರೆತಾನಾ = ಮನಃ ಕ್ಲೇಶವನ್ನೂ, ನಿರಾಶೆಯನ್ನೂ ದೂರ ಮಾಡುವವರು.
ಇವರ ನಂಬಿದಾ ಜನಕೆ ಭವವಿದೆ೦ಬುದೂ ।
ಹವಣವಾಗದೋ ನಮ್ಮವರ ಮತವಿದೂ ||5||
ಹವಣವಾಗು = ಹಿತವಾಗು
ಪಾಪ ಕೋಟಿಯ ರಾಶಿ ಲೇಪವಾಗದೋ ।
ತಾಪ ಕಳೆವನೋ ಬಲು ದಯಾಪಯೋನಿಧಿ ||6||
ಸಂಖ್ಯೆಯಿಲ್ಲದ ಪಾಪಗಳೂ, ನಂಬಿದ ಭಕ್ತರಿಗೆ ಬಾಧ ಕೊಡದಂತೆ ಮಾಡುವರು. ತಾಪತ್ರಯಗಳಿಂದ ಆಗುವ ನೋವನ್ನೂ ಕೊಡದವರು.
ಕವನ ರೂಪದಿ ಹರಿಯ ಸ್ತವನ ಮಾಡಿದಾ ।
ಭುವನ ಬೇಡಿದ ಮಾಧವನ ನೋಡಿದಾ ||7||
ಕವನ = ಪದ್ಯ
ಸ್ತವನ = ಸ್ತುತಿ
ಭುವನ = ಭೂಮಿ
ಮಾಧವ = ಶ್ರೀ ಮಹಾಲಕ್ಷ್ಮೀ ಪತಿಯಾದ ಶ್ರೀ ಹರಿ.
1. ಬಲಿಯನ್ನು ಭೂಮಿದಾನ ಪಡೆದ ಶ್ರೀ ವಾಮನ ರೂಪಿ ಶ್ರೀ ಹರಿ
2. ವೇಕಂಟಾಚಲದಲ್ಲಿ ಶ್ರೀ ವರಾಹನನ್ನು ಭೂಮಿ ದಾನ ಬೇಡಿದ ಶ್ರೀಶ್ರೀನಿವಾಸ.
ರಂಗನೆಂದನ ಭವವು ಹಿಂಗಿತೆಂದನಾ ।
ಮಂಗಳಾಂಗನ ಅಂತರಂಗವರಿತನಾ ||8||
ರಂಗ = ಭಕ್ತರಲ್ಲಿ ನಿಂತು ಧ್ಯಾನ ಮಾಡಿಸುವವನು
ಮಂಗಳಾಂಗನಾ = ಮಂಗಳ ಸ್ವರೂಪಗಳಾದ ಜ್ಞಾನಾನಂದಗಳೇ ಶರೀರವಾಗಿ ಉಳ್ಳ ಶ್ರೀ ಹರಿ ಹಾಗೂ ಶ್ರೀ ವಾಯುದೇವರ
ಅಂತರಂಗ = ಮನಸ್ಸು
ಕಾಶಿ ನಗರದಲ್ಲಿದ್ದ ವ್ಯಾಸದೇವನಾ ದಯವ ।
ಸೂಸಿ ಪಡೆದನಾ ಉಲ್ಲಾಸತನದಲಿ ||9||
ಯೋಸೌ ಸರ್ವಗತೋ ವಿಷ್ಣು: ಚಿತ್ಸ್ವರೂಪೋನಿರಂಜನಃ ।
ಸ ಏವ ದ್ರವ ರೂಪೇಣ ಗಂಗಾಂಭೋನಾತ್ರ ಸಂಶಯಃ ।।
ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ ।
ಶಾಂತ ಗುರುಗಳಾ ಪಾದವಾಂತು ನಂಬಿರೋ ||10||
ಚಿಂತೆ = ಇಷ್ಟವಾದುದು ದೊರೆಯದೆ
ಆಂತು = ಏನೇ ಆಡ್ಡಿ ಆತಂಕಗಳು ಬಂದಾಗ್ಯೂ
ಖೇದವಾಗದೋ ನಿಮಗೆ ಮೋದವಾಹುದೋ ।
ಸಾಧು ಗುರುಗಳ ದಿವ್ಯ ಪಾದ ನಂಬಿರೋ ||11||
ಶ್ರೀ ವಿಜಯರಾಯರ ದಿವ್ಯವಾದ ಪಾದಗಳನ್ನು ನಂಬಿದವರಿಗೆ ಮಾತ್ರ ಅವರ ಅನುಗ್ರಹಹವಾಗಿ ಸಾಧನಾ ಮಾರ್ಗದಲ್ಲಿ ದುಃಖ ದುಮ್ಮಾನಗಳೂ, ಕಷ್ಟಗಳೂ ದೂರಾಗಿ ಆನಂದವಾಗುವುದು.
ತಾಪ ತಡೆವನೋ ಬಂದ ಪಾಪ ಕಡಿವನೋ ।
ಶ್ರೀಪತಿಯ ಪಾದ ಸಮೀಪವಿಡುವನೋ ||12||
" ತಾಪ ತಡೆವನೋ "
ಆಧ್ಯಾತ್ಮಿಕ ( ದೇಹ ),
ಆದಿ ಭೌತಿಕ ( ಪಂಚ ಭೂತಗಳು )
ಆದಿ ದೈವಿಕ ( ಶನಿ - ರಾಹು - ಕೇತು ಮೊದಲಾದ ಗ್ರಹಗಳು ) ಎಂಬ ಮೂರು ವಿಧ ದುಃಖಗಳನ್ನೂ;
" ಬಂದ ಪಾಪ ಕಡೆವನೋ "
ಕಾಯಿಕ ( ಪ್ರಾಣಿಹಿಂಸೆ, ಕಳ್ಳತನ, ವ್ಯಭಿಚಾರ )
ವಾಚಿಕ ( ಕ್ರೂರ ಮಾತು, ಚಾಡಿ, ಸುಳ್ಳು, ಪರನಿಂದೆ )
ಮಾನಸಿಕ ( ವಂಚನೆ, ದ್ವೇಷ, ಪರವಸ್ತು ಅಪಹರಿಸುವ ಯೋಚನೆ ) ಮೊದಲಾದ ಪಾಪಗಳೂ ದೂರ ಮಾಡಿ ಶ್ರೀಪತಿಯಾದ ಶ್ರೀ ಹರಿಯ ಪಾದ ಚಿಂತನೆಯಲ್ಲಿಯೇ ಇರುವಂತೆ ಅನುಗ್ರಹ ಮಾಡುವರು.
ವೇದ ಓದಲು ಬರಿದೆ ವಾದ ಮಾಡಲೂ ।
ಹಾದಿಯಾಗದೋ ಬುಧರ ಪಾದ ನಂಬದೇ ||13||
ಶ್ರೀ ವಿಜಯರಾಯರು ತಮ್ಮ ದರ್ಶನ ಮಾತ್ರದಿಂದಲೇ ಭಕ್ತರನ್ನು ಪವಿತ್ರಗೊಳಿಸಿ ತತ್ ಕ್ಷಣವೇ ಶ್ರೀ ಹರಿಯ ಒಲಿಮೆ ಆಗುವಂತೆ ಅನುಗ್ರಹಿಸುವರು. ಈ ವಿಚಾರವನ್ನು ಶ್ರೀ ಜಗನ್ನಾಥದಾಸರು...
ಕೆಂಡ ಕಾಣದೆ ಮುಟ್ಟಿದರು । ಸರಿ ।
ಕಂಡು ಮುಟ್ಟಲು ದಹಿಸದಿಪ್ಪುದೆ ।
ಪುಂಡರೀಕ ದಳಾಯತಾಕ್ಷನ ವಿಮಲ ಪದಪದ್ಮ ।।
ಬಂಡುಣಿಗಳೆಂದೆನಿಪ ಭಕ್ತರ ।
ಹಿಂಡು ನೋಡಿದ ಮಾತ್ರದಲಿ । ತನು ।
ದಿಂಡುಗೆಡಹಿದ ನರನ ಪಾವನಮಾಳ್ಪರಾಕ್ಷಣದಿ ।। ಹ ಸಾ 13/12।।
ಗಂಗೆ ಮಿಂದರೆ ಮಲವು ಹಿಂಗಿತಲ್ಲದೇ ।
ರಂಗನೋಲಿಯನೋ ಭಕ್ತರ ಸಂಗ ದೊರೆಯದೇ ||14||
ಗುರುಗಳ ಅಂತರ್ಯಾಮಿಯಾದ ಹರಿಯೇ ತಾನಾಗಿ ಕರುಣೆಯಿಂದ ಅನುಗ್ರಹಿಸಬೇಕು. ಕೇವಲ ಸಾಧಕನಲ್ಲಿನ ವೇದ - ವೇದಾರ್ಥ ಜ್ಞಾನ; ವಾದ ಕೌಶಲ ಮೊದಲಾದವು ಮುಕ್ತಿಗೆ ಕಾರಣವಾಗಲಾರವು.
ಶ್ರೀ ವಿಜಯ ಗುರುಗಳಂಥಾ ಜ್ಞಾನಿಗಳ ಪಾದ ನಂಬದೇ - ಮುಕ್ತಿಗೆ ದಾರಿ ಎಲ್ಲಿದೆ? ಇಲ್ಲವೇ ಇಲ್ಲ ಎಂದು ತಾತ್ಪರ್ಯ!!
ಲೆಕ್ಕವಿಲ್ಲದೇ ದೇಶ ತುಕ್ಕಿ ಬಂದರೂ ।
ದುಃಖವಲ್ಲದೇ ಲೇಶ ಭಕುತಿ ದೊರಕದೋ ||15||
ಸುಮಧ್ವ ವಿಜಯ -( 1/5 )
ಮುಕುಂದ ಭಕ್ತೈ ಗುರು ಭಕ್ತಿ ಜಾಯೈ ।
ಧಾತ್ರಿಯೊಳಗುಳ್ಳಖಿಳ ತೀರ್ಥ ।
ಕ್ಷೇತ್ರ ಚರಿಸಿದರೇನು ಪಾತ್ರಾ ।
ಪಾತ್ರವರಿತನ್ನಾದಿ ದಾನವ ಮಾಡಿ ಫಲವೇನು ।।
ಗಾತ್ರ ನಿರ್ಮಲನಾಗಿ ಮಂತ್ರ ।
ಸ್ತೋತ್ರ ಪಠಿಸಿದರೇನು ಹರಿ । ಸ ।
ರ್ವತ್ರಗತೆನೆಂದರಿಯದಲೆ ತಾ ಕರ್ತೃಯೆಂಬುವನು ।। ಹ ಸಾ 10/14।।
ದಾನ ಮಾಡಲು ದಿವ್ಯ ಗಾನ ಪಾಡಲು।
ಜ್ಞಾನ ದೊರೆಯದೋ ಇವರಧೀನವಾಗದೇ ||16||
ಶ್ರೀ ವಿಜಯರಾಯರನ್ನು ತ್ರಿಕರಣ ಶುದ್ಧಿಯಿಂದ ನಂಬಿದರೆ ಸಾಕು ಅಂಥವರು ನಿಶ್ಚಯವಾಗಿ ಜ್ಞಾನವಂತರಾಗುವರು.
ನಿಷ್ಠೆಯಾತಕೆ ಕಂಡ ಕಷ್ಠವ್ಯಾತಕೆ ।
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ||17||
ನಿಷ್ಠೆ = ಶ್ರದ್ಧೆ
ಕಂಡ ಕಷ್ಟ = ನಾನಾ ವಿಧವಾದ ದೇಹ ಶೋಷಣೆ
ದಿಟ್ಟ = ಚಿತ್ತ ವಿಕಾರಕ್ಕೆ ಕಾರಣವಿದ್ದರೂ ಮನಸ್ಸು ಸ್ಥಿರವಾಗಿರುವ
ಗುರುಗಳ = ಶ್ರೀ ವಿಜಯರಾಯರ
ಪಾದ = ಪಾದಗಳನ್ನು
ಮುಟ್ಟಿ ಭಜಿಸಿರೋ = ಮನ ಮುಟ್ಟಿ ಭಜಿಸಿದರೆ ಎಲ್ಲಾ ಕಷ್ಟಗಳೂ ದೂರವಾಗಿ ಸಂತೋಷ ಉಂಟಾಗುವದು.
ಪೂಜೆ ಮಾಡಲು ಕಂಡ ಗೋಜು ಬೀಳಲೂ ।
ಬಿಜ ಮಾತಿನಾ ಫಲ ಸಹಜ ದೊರೆಯದೋ ||18||
ಗೋಜು = ತೊಂದರೆ
ಬೀಜ = ತತ್ತ್ವ ರಹಸ್ಯಗಳು
ಸಹಜ = ಸರಳವಾಗಿ
ಸುರರು ಎಲ್ಲರೂ ಇವರ ಕರವ ಪಿಡಿವರೋ ।
ತರಳರಂದದಿ ಹಿಂದೆ ತಿರುಗುತಿಪ್ಪರೋ ||19||
ಶ್ರೀ ವಿಜಯರಾಯರಿಗಿಂತ ಸ್ವರೂಪದಲ್ಲಿ ಅವರರಾದ ದೇವತೆಗಳು ತಮ್ಮನ್ನು ಸಾಧನಾ ಮಾರ್ಗದಲ್ಲಿ ಮುನ್ನಡೆಸಲು ಅವರ ಕೈಯನ್ನು ಹಿಡಿದು ಅವರ ಜೊತೆಗೂಡಿ ನಡೆಯುತ್ತಾರೆ.
" ತಂದೆಯ ಹಿಂದೆ ಬಾಲಕನು ತಿರುಗುವಂತೆ " ಶ್ರೀ ವಿಜಯರಾಯರನ್ನು ಎಲ್ಲೆಡೆ - ಯಾವಾಗಲೂ ಹಿಂಬಾಲಿಸುತ್ತಾರೆ.
ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತಾ ।
ಅಹೊರತ್ರಿಲೀ ಸುಖದ ನಿವಹ ಕೊಡುವುವೋ ||20||
ಶ್ರೀ ವಿಜಯರಾಯರ ಪಾದ ನಂಬಿದ ಭಕ್ತರಿಗೆ ಯಾವ ಗ್ರಹಗಳಿಂದಲೂ ತೊಂದರೆ ಇಲ್ಲದೆ ಸುಖವನ್ನೇ ಕೊಡುತ್ತವೆ.
ಶ್ರೀದನಂಘ್ರಿ ಸರೋಜಯುಗಳೇ ।
ಕಾದಶಸ್ಥಾನಾತ್ಮದೊಳಗಿ ।
ಟ್ಟಾದರದಿ ಸಂತುತಿಸುವವರಿಗೆ ಈ ನವಗ್ರಹವು ।।
ಆದಿತೇಯರು ಸಂತತಾದಿ ।
ವ್ಯಾಧಿಗಳ ಪರಿಹರಿಸುತವರನು ।
ಕಾದು ಕೊಂಡಿಹರೆಲ್ಲರೊಂದ
ಾಗೀಶನಾಜ್ಞಯಲಿ ।। ಹ ಸಾ 10/2 ।।
ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ।
ಆದಿದೇವನಾ ಸುಪ್ರಸಾದವಾಹುದೋ ||21||
ವ್ಯಾಧಿ = ರೋಗ
ಬಾಧೆ = ದುಃಖ
ಪತಿತಪಾಮರಾ ಮಂದಮತಿಗ ನಾ ಬಲೂ ।
ತುತಿಸಲಾಪೆನೇ ಇವರ ಅತಿಶಯಂಗಳಾ ||22||
ಪತಿತ = ಧರ್ಮದಿಂದ
ಪಾಮರ = ಮೂರ್ಖ
ಮಂದಮತಿ = ಆಲಸಿ
ಕರುಣದಿಂದಲೀ ಎಮ್ಮ ಪೋರೆವನಲ್ಲದೇ ।
ದುರಿತಕೊಟಿಯಾ ಬ್ಯಾಗ ತರಿವ ದಯದಲೀ ||23||
ದುರಿತ ಕೋಟಿ = ಪಾಪಗಳೆಂಬ ಕೋಟಿಗಳು
ಶ್ರೀ ವಿಜಯರಾಯರು...
ಚಿಂತಾರತುನ ನಿನ್ನ ಕರುಣವಲ್ಲವೇ । ಅ ।
ನಂತ ಸಾಧನೆ ನಾನಾ ಫಲ ಕೊಡುವವೆ ।
ಸಂತೋಷ ಮೂರುತಿ ವಿಜಯವಿಠಲ । ಸಕ ।
ಲಾಂತರ್ಯಾಮಿ ಸ್ವಾಮಿ ಭಕ್ತವತ್ಸಲ ದೇವ ।।
ಮಂದಮತಿಗಳು ಇವರ ಚೆಂದವರಿಯದೇ ।
ನಿಂದೆ ಮಾಡಲೂ ಭವದ ಬಂಧ ತಪ್ಪದೋ ||24||
ಚೆಂದ = ಗುಣ ಜ್ಯೇಷ್ಠತೆ
ಇಂದಿರಾಪತಿ ಇವರ ಮುಂದೆ ಕುಣಿವನೋ ।
ಅಂದ ವಚನವಾ ನಿಜಕೆ ತಂದು ಕೊಡುವನೋ ||25||
ಇಂದಿರಾಪತಿ = ಲಕ್ಷ್ಮೀಪತಿಯಾದ ಶ್ರೀಹರಿ
ನಿಜಕೆ = ಸ್ವಾನುಭವಕ್ಕೆ
ಉದಯ ಕಾಲದಿ ಈ ಪದವ ಪಠಿಸಲೂ ।
ಮದಡನಾರೂ ಜ್ಞಾನ ಉದಯವಾಹುದೋ ||26||
ಉದಯಕಾಲ = ಪ್ರಾತಃಕಾಲ
ಮದಡ = ಅಜ್ಞಾನಿಗೆ
ಜ್ಞಾನ ಉದಯವಾಹುದೋ = ಜ್ಞಾನ ಹುಟ್ಟುವುದು
ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೋ ।
ಪಠಿಸ ಬಹುದಿದೋ ಕೇಳಿ ಕುಠಿಲರಹಿತರು ||27||
ಸಟೆ = ಸುಳ್ಳು
ಕುಠಿಲ = ವಂಚಕತನ
ಶ್ರೀ ವ್ಯಾಸ ವಿಠಲಾಂಕಿತ  ವಿರಚಿತ ಶ್ರೀ ವಿಜಯದಾಸರ ನಕ್ಷತ್ರ ಮಾಲಿಕಾ ಸ್ತೋತ್ರ ಸಂಪೂರ್ಣವಾಯಿತು.
***