Showing posts with label ಮರುಳಾಟವ್ಯಾಕೆ ಮನುಜಗೆ prasannavenkata. Show all posts
Showing posts with label ಮರುಳಾಟವ್ಯಾಕೆ ಮನುಜಗೆ prasannavenkata. Show all posts

Friday, 15 November 2019

ಮರುಳಾಟವ್ಯಾಕೆ ಮನುಜಗೆ ankita prasannavenkata

by ಪ್ರಸನ್ನವೆಂಕಟದಾಸರು
ಮರುಳಾಟವ್ಯಾಕೆ ಮನುಜಗೆ ಮರುಳಾಟವ್ಯಾಕೆಹರಿಭಕ್ತನಲ್ಲದವಗೆ ಹಲವಂಗವ್ಯಾಕೆ ಪ.

ಮೃತ್ತಿಕಾಶೌಚವಿಲ್ಲದೆ ಮತ್ತೆ ಸ್ನಾನ ಜಪವ್ಯಾಕೆಹತ್ತು ಕಟ್ಟದವಗೆ ಅಗ್ನಿಹೋತ್ರವ್ಯಾತಕೆತೊತ್ತುಬಡಕಗೆ ಬಹು ತತ್ವವಿಚಾರವ್ಯಾಕೆಕರ್ತಕೃಷ್ಣನ್ನೊಪ್ಪದ ವಿದ್ವತ್ತವ್ಯಾತಕೆ1

ಹಸಿವೆತೃಷೆತಾಳದವಗೆಹುಸಿವೈರಾಗ್ಯವ್ಯಾತಕೆವಿಷಮ ಚಿತ್ತಗೆ ಪರರ ಕುಶಲ ಬಯಕ್ಯಾಕೆದಶ ಜಪ ಮಾಡಲಾರ ಮುಸುಕಿನ ಡಂಬವ್ಯಾಕೆಕುಶಶಾಯಿಗರ್ಪಿಸದ ಅಶನವ್ಯಾತಕೆ 2

ಮೂಲಮಂತ್ರವರಿಯದ ಮೇಲೆ ದೇವಾರ್ಚನೆ ಯಾಕೆಸಾಲಿಗ್ರಾಮವಿಲ್ಲದ ತೀರ್ಥವ್ಯಾತಕೆಸೂಳೆಗಾರಗೆ ತುಳಸಿಮಾಲೆ ಶೃಂಗಾರವ್ಯಾಕೆಮೇಲೆ ಮೇಲೆ ಹರಿಯೆನ್ನದ ನಾಲಿಗ್ಯಾತಕೆ 3

ಊಧ್ರ್ವಪುಂಡ್ರಿಲ್ಲದಾಸ್ಯ ತಿದ್ದಿನೋಡಬೇಕ್ಯಾಕೆಶುದ್ಧ ಸಾತ್ವಿಕವಲ್ಲದ ಬುದ್ಧಿ ಯಾತಕೆಕದ್ದು ಹೊಟ್ಟೆ ಹೊರೆವವಗೆ ಸಿದ್ಧ ಶೀಲವೃತ್ತಿಯಾತಕೆಮಧ್ವ ಮತವÀ ಬಿಟ್ಟಿತರ ಪದ್ಧತ್ಯಾತಕೆ 4

ಕಂಡ ನಾರೇರಿಚ್ಛೈಸುವ ಲೆಂಡಗೆ ಪುರಾಣವ್ಯಾಕೆಭಂಡು ಮಾತಿನ ಕವಿತ್ವ ಪಾಂಡಿತ್ಯಾತಕೆಕುಂಡಲಿಪ್ರಸನ್ವೆಂಕಟ ಮಂಡಲೇಶನ ಶ್ರೀಪಾದಪುಂಡರೀಕಬಿಟ್ಟವನ ವಿತಂಡವ್ಯಾತಕೆ5
*******