Showing posts with label ಕೃಷ್ಣ ವೇಣಿ ನಮೋ ನಮೋ prasannavenkata. Show all posts
Showing posts with label ಕೃಷ್ಣ ವೇಣಿ ನಮೋ ನಮೋ prasannavenkata. Show all posts

Monday, 11 November 2019

ಕೃಷ್ಣ ವೇಣಿ ನಮೋ ನಮೋ ankita prasannavenkata

by ಪ್ರಸನ್ನವೆಂಕಟದಾಸರು
ಕೃಷ್ಣವೇಣಿ ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ ಪ.

ಈ ಜನ್ಮದಘವು ನಾನಾ ಜನ್ಮಕೃತದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ 1

ವಿಪ್ರಮುನಿ ಸುರನರರು ಕನ್ಯಕ್ಕೆಗುರುಬರಲುಕ್ಷಿಪ್ರನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆ ಪ್ರಸನ್ನೀಕರಿಸಿಕೊಳ್ಳುವರಮ್ಮ 2

ನಿರ್ಮಳಾತ್ಮಕÉ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ 3
*******