Showing posts with label ತೊರೆದು ಜೀವಿಸಬಹುದೆ ಗುರು ನಿಮ್ಮ gopalakrishna vittala. Show all posts
Showing posts with label ತೊರೆದು ಜೀವಿಸಬಹುದೆ ಗುರು ನಿಮ್ಮ gopalakrishna vittala. Show all posts

Friday, 27 December 2019

ತೊರೆದು ಜೀವಿಸಬಹುದೆ ಗುರು ನಿಮ್ಮ ankita gopalakrishna vittala

ಅಂಬಾಬಾಯಿ ರಚನೆ

ತೊರೆದು ಜೀವಿಸಬಹುದೆ ಗುರು ನಿಮ್ಮ ಚರಣವ ಪ.

ಬರಿಯ ಮಾತಲ್ಲವಿದು ಜರಿದು ನುಡಿವೆ
ಕರಕರೆಗೊಳಿಸದೆ ಕಾಯಬೇಕಿನ್ನು ಗುರು ಅ.ಪ.

ಅತಿಶಯ ಮಹಿಮೆಯ ಹಿತದಿಂದ ತೋರಿದ
ಪಿತನಂತೆ ಪೊರೆಯುವಚ್ಯುತ ದೂರ ಪದವೀವ
ಮತಿವಂತರೆ ನಿಮ್ಮ ಕ್ಷಿತಿಯೊಳಗಲಲಾರೆ1

ನೀತಿಯ ಬೋಧಿಪ ಖ್ಯಾತಿ ಶ್ರೀ ಗುರುಗಳೆ
ದೂತರಾದವರನು ಈ ತೆರ ಮಾಳ್ಪರೆ
ಪಾತಕರಹಿತರೆ ಪ್ರೀತಿಯ ತೋರಿರಿ2

ಬಂದಿರಿ ಮಮತೆಲಿ ಕಂದರಂದದಿ ತಿಳಿದು
ಇಂದಿರೇಶನ ತತ್ವಾವೃಂದಗಳರುಹುತ
ಮಂದಿಗಳಿಗೆ ಆನಂದವನೆ ತೋರ್ದಿರಿ 3

ಎಲ್ಲಿ ಭಕ್ತರು ಕರಿಯೆ ಅಲ್ಲಿಗೆ ಬರುವ ಗುರುವೆ
ಇಲ್ಲಿ ನಿಮ್ಮ ಹೊರತು ಇಲ್ಲವು ಇನ್ನೊಂದು
ಒಲ್ಲೆನು ಈ ಜಗದ ನಿಲ್ಲದ ವಸ್ತುಗಳು 4

ಗೋಪಾಲಕೃಷ್ಣವಿಠ್ಠಲ ತಾ ಪರಿಪರಿ ಲೀಲ
ವ್ಯಾಪ್ತ ಶ್ರೀ ಗುರು ಸಹ ಶ್ರೀಪತಿ ಹೃದಯದಿ
ತೋರ್ಪಂತೆ ಕೃಪೆ ಮಾಡಿ ಕಾಪಾಡಬೇಕೊ ದೊರಿ 5
*******