ರಾಗ ನಾದನಾಮಕ್ರಿಯ ಅಟ ತಾಳ
ನಳಿನನಾಭನ ನೀನು ಪಾಡೊ ಬೇಗ ||ಪ ||
ಒಳಗಣ್ಣಿಂದ ಅವನ ಕಂಡು ನಲಿದಾಡೊ ||ಅ ||
ಹೃದಯ ಆಕಾಶದಲ್ಲಿರುವ ಅಲ್ಲಿ
ಪದುಮಾಕ್ಷ ಪುರುಷೋತ್ತಮನೆಂಬಾತ
ಆತನು ಬಹುರೂಪದಿಂದ ಕಾವ
ಆಧಾರವಾಗಿಪ್ಪ ಸೂಕ್ಷ್ಮ ಪ್ರದೇಶ ||
ಎಂಟೊಂದು ಕದಗಳ ಮುಚ್ಚೊ ಮೇಲೆ
ತಂಟೆಯಿಲ್ಲದ ಮನವ ಅವನಲಿ ಇರಿಸೊ
ಕುಂಡಲಿ ಮಧ್ಯದಿ ನೋಡೊ ದಿವ್ಯ
ಮಂಟಪದಲಿ ಜ್ಯೋತಿ ಥಳ ಥಳಿಸುವುದೊ ||
ಥಳಥಳಿಸುವ ಬಾಲಕೃಷ್ಣ ಅಲ್ಲಿ
ಬಲು ಕ್ರೀಡೆಗಳನೆಲ್ಲ ಮಾಡಿಸುವನಯ್ಯ
ಒಳಗೆ ಹೊರಗೆ ಪರಿಪೂರ್ಣ ನಮ್ಮ
ಫುಲ್ಲಲೋಚನ ತಂದೆ ಪುರಂದರವಿಠಲ ||
***
ನಳಿನನಾಭನ ನೀನು ಪಾಡೊ ಬೇಗ ||ಪ ||
ಒಳಗಣ್ಣಿಂದ ಅವನ ಕಂಡು ನಲಿದಾಡೊ ||ಅ ||
ಹೃದಯ ಆಕಾಶದಲ್ಲಿರುವ ಅಲ್ಲಿ
ಪದುಮಾಕ್ಷ ಪುರುಷೋತ್ತಮನೆಂಬಾತ
ಆತನು ಬಹುರೂಪದಿಂದ ಕಾವ
ಆಧಾರವಾಗಿಪ್ಪ ಸೂಕ್ಷ್ಮ ಪ್ರದೇಶ ||
ಎಂಟೊಂದು ಕದಗಳ ಮುಚ್ಚೊ ಮೇಲೆ
ತಂಟೆಯಿಲ್ಲದ ಮನವ ಅವನಲಿ ಇರಿಸೊ
ಕುಂಡಲಿ ಮಧ್ಯದಿ ನೋಡೊ ದಿವ್ಯ
ಮಂಟಪದಲಿ ಜ್ಯೋತಿ ಥಳ ಥಳಿಸುವುದೊ ||
ಥಳಥಳಿಸುವ ಬಾಲಕೃಷ್ಣ ಅಲ್ಲಿ
ಬಲು ಕ್ರೀಡೆಗಳನೆಲ್ಲ ಮಾಡಿಸುವನಯ್ಯ
ಒಳಗೆ ಹೊರಗೆ ಪರಿಪೂರ್ಣ ನಮ್ಮ
ಫುಲ್ಲಲೋಚನ ತಂದೆ ಪುರಂದರವಿಠಲ ||
***
pallavi
naLina nAbhana nInu pADo bEga oLagaNNinda avana kaNDu nalidADo
caraNam 1
hrdaya AkAshadalliruva alli padumAkSa puruSOttamanembAta
Atanu bahu rUpadinda kAva AdhAravAgippa sUkSma pradEsha
caraNam 2
eNDondu kadagaLa mucco mEle taNTeyillada manava avanali iriso
kuNDali madhyadi nODo divya maNTapadali jyOti thaLa thaLisuvudo
caraNam 3
thaLa thaLisuva bAlakrSNa alli balu krIDegaLanella mADisuvanayya
oLage horage paripUrNa namma pullalOcana tande purandara viTTala
***