Showing posts with label ಮನುಷ್ಯನಾದ ಫಲವೇನು ಶ್ರೀನಿವಾಸನ prasannavenkata. Show all posts
Showing posts with label ಮನುಷ್ಯನಾದ ಫಲವೇನು ಶ್ರೀನಿವಾಸನ prasannavenkata. Show all posts

Friday, 15 November 2019

ಮನುಷ್ಯನಾದ ಫಲವೇನು ಶ್ರೀನಿವಾಸನ ankita prasannavenkata

by ಪ್ರಸನ್ನವೆಂಕಟದಾಸರು
ಮನುಷ್ಯನಾದ ಫಲವೇನು ಶ್ರೀನಿವಾಸನ ಕಂಡು ಸುಖಿಯಾಗದನಕ ಪ.

ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1

ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2

ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
*******