Showing posts with label ಏನೆಂದಳಯ್ಯ ಸೀತೆ ಹನುಮ ನಿನಗೆ purandara vittala ENENDALAYYA SEETE HANUMA NINAGE. Show all posts
Showing posts with label ಏನೆಂದಳಯ್ಯ ಸೀತೆ ಹನುಮ ನಿನಗೆ purandara vittala ENENDALAYYA SEETE HANUMA NINAGE. Show all posts

Sunday, 5 December 2021

ಏನೆಂದಳಯ್ಯ ಸೀತೆ ಹನುಮ ನಿನಗೆ purandara vittala ENENDALAYYA SEETE HANUMA NINAGE


ರಾಗ ಬೃಂದಾವನ ಸಾರಂಗ ತಾಳ ರೂಪಕ




ಏನೆಂದಳಯ್ಯ ಸೀತೆ, ಹನುಮ ನಿನಗೆ
ಏನ್ನುಡಿದಿಹಳು ಪ್ರೀತೆ ||ಪ||

ಚೆನ್ನಿಗ ಚೆಲುವನೆ ಕೇಳೋ , ಜಾನಕಿಯು
ನಿನ್ನ ಬಿಟ್ಟಿರಲಾರಳು
ನಿನ್ನಿರುಳು ನೀ ನೀಲಕುಂತಳೆ ಕನಸಿನಲಿ
ಚೆನ್ನಾಗಿ ನಿಂತಿಹಳೊ ರಾಮ ||

ಸ್ವಾಮಿರಾಯರ ಪಾದವ, ಎಲೆ ಕಪಿಯೆ
ನಾನೆಂತು ಬಿಟ್ಟಿರಲಿ
ದಾನವನ ಶಿರವರಿದು ಲಂಕೆಯ ಪುರವನ್ನು
ದಹನವನು ಮಾಡೆಂದಳೊ ರಾಮ ||

ಎಲ್ಲಿಂದ ಬಂದೆ ಹನುಮ, ನೀನೆಂದ
ಸೊಲ್ಲ ಕೇಳೋ ಪ್ರೇಮ
ವಲ್ಲಭ ಕಾಣದೆ ನಿಮಿಷ ಯುಗವಾಗಿದೆ
ನಿಲ್ಲಲಾರೆ ಎಂದಳು ರಾಮ ||

ಚಿಂತಿಸುತ ಬಡವಾದಳೊ, ಜಾನಕಿಯು
ಕಾಂತೆ ತಾನಾಗಿಹಳೊ
ಅಂತರಂಗದಿ ಅನಂತ ಅನಂತ ಎನುತ
ಭ್ರಾಂತಿಲಿ ಮರುಗುತಿಹಳೊ ರಾಮ||

ಅಂಜನೆಯತನಯ ಕೇಳೋ, ನೀ ಪೋಗೆ
ಕಂಜನಾಭನಿಗೆ ಹೇಳೊ
ಕುಂಜರನ ಕಾಯ್ದ ಶ್ರೀಪುರಂದರವಿಠಲನ್ನ
ಪಂಜರದ ಅರಗಿಣಿ ಎಂದಳು ರಾಮ ||
****

ರಾಗ ನಾದನಾಮಕ್ರಿಯಾ. ಝಂಪೆ ತಾಳ)(raga, taala may differ in audio)

pallavi

EnendaLayya sIte hanuma ninage En nuDidihaLu prIte

caraNam 1

cenniga celuvane kELO jAnakiyu ninna biTTilalAraLu ninniruLu
nI nIlakuntaLe kanasinali cennAgi nintiyendaLo rAma

caraNam 2

svAmi rAtara pAdava ele kapiya nAnendu biTTirali dAnavana
shiravaridu lankeya puravannu dahanavanu mADendaLo rAma

caraNam 3

ellinda bande hanumana nInenda solla kELO prEma
vallabha kANadenimiSa yugavAgide nillalArE endaLu rAma

caraNam 4

anjaneya tanaya kELO nI pOge kanja nAbhanige hELo kunjarana
kAida shrI purandara viTTalanna panjarada aragiNi endaLu rAma
***

ಏನೆಂದಳಯ್ಯ ಸೀತೆ ನಿನಗೇನ ಮಾಡಿದಳೊ ಪ್ರೀತೆ ಪ

ದಾನವನ ಪುರದೊಳಗೆ ದಾರಿಯನು ನೋಡುತಲೆ |ಧ್ಯಾನವನು ಮಾಡುತಿಹಳೊ ಹನುಮಾ ಅ.ಪ

ಎಲ್ಲಿಂದ ಬಂದೆ ಹನುಮಾ - ನೀಯೆನ್ನ -ಕೇಳುಸೊಲ್ಲೆನ್ನ ಪ್ರೇಮ ||ವಲ್ಲಭನ ನೆನೆದರೆ ನಿಮಿಷ ಯುಗವಾಗುತಿದೆನಿಲ್ಲಲಾರೆನು ಎಂದಳೊ ಹನುಮಾ 1

ದೇವರಾಯನ ಪಾದವ - ಎಲೆ ಕಪಿಯೆ -ದಾವಪರಿಯಲಿ ಕಾಂಬೆನೊ ||ರಾವಣನ ಶಿರವರಿದು ಲಂಕಪಟ್ಟಣವನೆಲ್ಲ |ಹವನವಮಾಡಿಸು ಎಂದಳೊ ಹನುಮಾ || 2

ಅಂಜನಾತನಯ ಕೇಳೊ - ನೀ ಹೋಗಿ -ಕಂಜನಾಭನಿಗೆ ಪೇಳೊ ||ಕುಂಜರವಕಾಯ್ದು ಶ್ರೀಪುರಂದರವಿಠಲನ |ಪಂಜರದ ಗಿಣಿಯೆಂದಳೊ ಹನುಮಾ 3
*******