Showing posts with label ಆವ ಮಾನುನಿ ನಿನಗೇನು ಮಾಡಿದಳೊ prasannavenkata. Show all posts
Showing posts with label ಆವ ಮಾನುನಿ ನಿನಗೇನು ಮಾಡಿದಳೊ prasannavenkata. Show all posts

Monday, 18 November 2019

ಆವ ಮಾನುನಿ ನಿನಗೇನು ಮಾಡಿದಳೊ ankita prasannavenkata

ಪ್ರಸನ್ನವೆಂಕಟದಾಸರು

ಆವ ಮಾನುನಿ ನಿನಗೇನು ಮಾಡಿದಳೊ 
ಇಂದಿನಭಾವಬೇರ್ಯಾಗಿದೆ ಮುಖದಲಿ ಕೇಳೊಪ.

ಬಿರಿಗಣ್ಣು ಬಿಡುವೆ ಮೊಲೆಯನೆÉೂಲ್ಲೆ ಕಂದ 
ದಿವ್ಯಶರೀರಕ್ಕೆ ಗ್ರಹಕಪಟೇನೊ ಮುಕುಂದ 1

ಬಾಯೊಳು ಬಿರಿಜೊಲ್ಲು ಬರುತಿದೆ ಮಗುವೆ 
ಹಾ ಹಾಹಾಯೆಂದು ತೆರಬಾಯ ತೆರದ್ಯಾಕೊ ನಗುವೆ 2

ತಿರುಕರಣುಗನಂತೆ ತಿರುಗುವೆ ಬಾಲ ಲೇಶಕರುಣವಿಲ್ಲ 
ಎನ್ನೊಳು ಪುಣ್ಯಶೀಲ 3

ಅನ್ನವನೊಲ್ಲೆ ಮನೆಯ ಬಿಟ್ಟೆಯೊ ಕೂಸು 
ನಿನ್ನಚಿನ್ನತನದ್ಭುತವಾಗಿದೆ ಲೇಸೊ 4

ಉದ್ಹಿಡಿದಾಡುವ ಮರುಳಾಂತ ಶಿಶುವೆ 
ಪುಣ್ಯದೆÉೂಡೆಯ ಪ್ರಸನ್ನವೆಂಕಟನೆ ಎನ್ನಸುವೆ 5
********