Showing posts with label ಕಂಡೆ ಕಂಡೆನೊ ಕಂಗಳಲಿ ಭೂ ಮಂಡಲಾಬ್ಧಿಗೆ vijaya vittala KANDE KANDENO KANGALALI BHUMANDLABDHIGE VADEENDRA TEERTHA STUTIH. Show all posts
Showing posts with label ಕಂಡೆ ಕಂಡೆನೊ ಕಂಗಳಲಿ ಭೂ ಮಂಡಲಾಬ್ಧಿಗೆ vijaya vittala KANDE KANDENO KANGALALI BHUMANDLABDHIGE VADEENDRA TEERTHA STUTIH. Show all posts

Wednesday, 16 October 2019

ಕಂಡೆ ಕಂಡೆನೊ ಕಂಗಳಲಿ ಭೂ ಮಂಡಲಾಬ್ಧಿಗೆ ankita vijaya vittala KANDE KANDENO KANGALALI BHUMANDLABDHIGE VADEENDRA TEERTHA STUTIH

Audio by Vidwan Sumukh Moudgalya


ಶ್ರೀ ವಿಜಯದಾಸರು ಶ್ರೀ ವಾದೀಂದ್ರತೀರ್ಥರನ್ನು ಕುರಿತು ರಚಿಸಿರುವ ಕೃತಿ 

ವಂದಾರುಜನ ಸಂದೋಹ ಮಂದಾರ ತರು ಸನ್ನಿಭಂ।
ವೃಂದಾರಕ ಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್॥

 ರಾಗ : ಸುರುಟಿ   ಮಿಶ್ರಛಾಪು 

ಕಂಡೆ ಕಂಡೆನೊ ಕಂಗಳಲಿ ಭೂ 
ಮಂಡಲದೊಳು ಮೆರೆವ ಯತಿಗಳ
ಮಂಡಲಾಬ್ಧಿಗೆ ಸೋಮನೆನಿಪ ಅ -
ಖಂಡ ಮಹಿಮಾ ವಾದೇಂದ್ರ ಗುರುಗಳ ॥ಪ॥

ನಸುನಗಿಯ ಮೊಗ ಪಸರಿಸಿದಾ ದ್ವಾ-
ದಶನಾಮಗಳು ಶ್ರೀ ಮುದ್ರೆ ಮುದದಿಂದ 
ನೊಸಿಲಿಲೊಪ್ಪುವ ಗಂಧ ಅಕ್ಷತಿ
 ಎಸೆವ ಸಣ್ಣಂಗಾರ ಕಿವಿಯಲಿ
ಹಸನಾದ ಎಳೆ ತುಲಸಿ ಶೋಭಿಸಿ 
ಬೆಸಸುವ ಒಂದೊಂದು ಮಾತಾ 
ಲಿಸಿದರದು ವೇದಾರ್ಥತುಲ್ಯಾ 
ಲಸವ ಗೈಸದೆ ಬರುವ ಗುರುಗಳ॥೧॥

ಮೊಸಳಿವಾಯ ಪಲಕ್ಕಿ ಸುತ್ತಾ ಭಾ-
ರಿಸುವ ನಾನ ವಾದ್ಯಾದ ಘೋಷಾ 
ಪುಸಿಕರೆದೆದಲ್ಲಣರು ಎಂಬಾ 
ದಶ ದಿಕ್ಕಿನೊಳು ಕೀರ್ತಿ ತುಂಬಿರೆ 
ಶಿಶುವು ಮೊದಲಾದವರು ತಮ ತಮ 
ಬೆಸನೆ ಪೇಳಲು ಕೇಳಿ ಅವರು- 
ಬ್ಬಸವ ಕಳದಿಷ್ಟಾರ್ಥ ತೋರುವ
ಋಷಿಕುಲೋತ್ತಮರಾದ ಗುರುಗಳ॥೨॥

ಶ್ವಶನ ಮತ ವಾರಿಧಿಗೆ ಪೂರ್ಣ 
ಶಶಿ ಎನಿಸಿಕೊಂಬ ಧೀರುದಾರರೆ 
ಅಸಮ ತತ್ವ ಪ್ರಮೆಯದಲಿ ನಿ-
ರ್ಮಿಸಿದನೆ ಲೋಕೇಶ ಇವರನ್ನ
 ವಸುಧಿ ಅಮರರು ಪ್ರಸರ ಎಡಬಲ 
ಎಸದು ತುತಿಸಲು ಹಿಗ್ಗಿ ಕರುಣಾ 
ರಸಭರಿತರಾಗಿ ನೋಡುತ್ತ ಮಾ -
ಸನದಿ ಹರಿಪದ ಭಜಿಪ ಗುರುಗಳ॥೩॥

ಕುಸುಮಶರನ ಬಾಣವ ಖಂಡ್ರಿಸಿ
ಬಿಸುಟ ಸಂಪನ್ನ ವಿದ್ಯಾ 
ವಸುವಿನಲಿ ಆವಾಗ ತಲೆ ತೂ-
ಗಿಸುವರು ಪಂಡಿತರ ಮೆಚ್ಚಿಸಿ 
ವಶವೆ ಪೊಗಳಲು ಎನಗೆ ಇವರ ದ -
ರುಶನದಿಂದಲಿ ಗತಿಗೆ ಪಥನಿ 
ಮಿಷದೊಳಗೆ ಇದು ಸಿದ್ಧವೆಂದು ವಂ-
ದಿಸಿದಿರೊ ಮರಿಯದೆ ಈ ಗುರುಗಳಾ॥೪॥

ಮಿಸುಣಿಪ ಮಂಟಪದೊಳಗೆ ರಂ-
ಜಿಸುವ ರಾಮನ ಕುಳ್ಳಿರಿಸಿ ಅ-
ರ್ಚಿಸುವ ಚಿತ್ತೇಕಾಗ್ರದಲಿ ವೊ-
ಲಿಸುವ ತಂತ್ರ ಸಾರೋಕ್ತ ಬಗೆಯನು 
ಕುಶಲರಾದ ಉಪೇಂದ್ರ ಮುನಿಕರ 
ಬಿಸಜದಿಂದಲಿ ಜನಿಸಿ ಭಕುತಿಲಿ 
ಅಸುರರಿಪು ಸಿರಿ ವಿಜಯವಿಠ್ಠಲನ್ನ 
ಪೆಸರುಗಳು ಎಣಿಸುವ ಗುರುಗಳ॥೫॥
****

ಕಂಡೆ ಕಂಡೆನೊ ಕಂಗಳಲಿ ಭೂ |
ಮಂಡಲಾಬ್ಧಿಗೆ ಸೋಮನೆನಿಪ ಅ |
ಖಂಡ ಮಹಿಮಾ ವಾದೇಂದ್ರ ಗುರುಗಳ ಪ

ನಸುನಗಿಯ ಮೊಗ |
ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ |
ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ
ಹಸನಾದ ಎಳೆ ತುಲಸಿ ಶೋಭಿಸಿ |
ಬೆಸಸುವ ಒಂದೊಂದು ಮಾತಾ |
ಲಿಸಿದರದು ವೇದಾರ್ಥತುಲ್ಯಾ |
ಲಸವ ಗೈಯಿಸದೆ ಬರುವ ಗುರುಗಳ1

ಮೊಸಳಿವಾಯಪಲಕ್ಕಿ ಸುತ್ತಾ ಭಾ |
ರಿಸುವ ನಾನ ವಾದ್ಯಾದಾ ಘೋಷಾ |
ಪುಸಿಕರೆದೆದಲ್ಲಣರು ಎಂಬಾ |
ದಶ ದಿಕ್ಕಿನೊಳು ಕೀರ್ತಿ ತುಂಬಿರೆ |
ಶಿಶುವು ಮೊದಲಾದವರು ತಮ ತಮ |
ಬೆಸನೆ ಪೇಳಲು ಕೇಳಿ ಅವರು |
ಋಷಿಕುಲೋತ್ತಮರಾದ ಗುರುಗಳ2

ಶ್ವಶನ ಮತ ವಾರಿಧಿಗೆ ಪೂರ್ಣ |
ಶಶಿ ಎನಿಸಿಕೊಂಬ ಧೀರುದಾರರೆ |
ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ |
ಲೋಕೇಶ ಇವರನ್ನ ವಸುಧಿ ಅಮರರು |
ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ |
ರಸಭರಿತರಾಗಿ ನೋಡುತ್ತ ಮಾ |
ಸನದಿ ಹರಿಪದ ಭಜಿಪ ಗುರುಗಳ3

ಕುಸುವಶರನ ಬಾಣವನು ಖಂಡ್ರಿಸಿ
ಬಿಸುಟ ಸಂಪನ್ನ ವಿದ್ಯಾ |
ವಸುವಿನಲಿ ಆವಾಗ ತಲೆ ತೂ |
ಗಿಸುವರು ಪಂಡಿತರ ಮೆಚ್ಚಿಸಿ |
ವಶವೆ ಪೊಗಳಲು ಎನಗೆ ಇವರ ದ |
ರುಶನದಿಂದಲಿ ಗತಿಗೆ ಪಥನಿ |
ವಿಷದೊಳಗೆ ಇದು ಸಿದ್ಧವೆಂದು ವಂ |
ದಿಸಿದಿರೊ ಮರಿಯದೆ ಈ ಗುರುಗಳಾ 4

ಮಿಸುಣಿ ಮಂಟಪದೊಳಗೆ ರಂ |
ಜಿಸುವ ರಾಮನÀ ಕುಳ್ಳಿರಿಸಿ ಅ |
ರ್ಚಿಸುವ ಚಿತ್ತೇಕಾಗ್ರದಲಿ ವೊ |
ಲಿಸುವ ತಂತ್ರ ಸಾರೋಕ್ತ ಬಗೆಯನು |
ಕುಶಲರಾದ ಉಪೇಂದ್ರ ಮುನಿಕರ |
ಬಿಸಜದಿಂದಲಿ ಜನಿಪ ಭಕುತಿಲಿ |
ಸಿರಿ ವಿಜಯವಿಠ್ಠಲನ್ನ |
ಪೆಸರುಗಳು ಎಣಿಸುವ ಗುರುಗಳ 5
*****

ರಾಗ : ಭೈರವಿ  ತಾಳ : ತ್ರಿವಿಡಿ 
ಕಂಡೆ ಕಂಡೆನೊ -
ಕಂಗಳಲಿ । ಭೂ ।
ಮಂಡಲದೊಳು -
ಮೆರೆವ ಯತಿಗಳ ।
ಮಂಡಲಾಬ್ಧಿಗೆ -
ಸೋಮ ನೆನಿಪ । ಅ ।
ಖಂಡ ಮಹಿಮಾ 
ವಾದೇಂದ್ರ ಗುರುಗಳ ।। ಪಲ್ಲವಿ ।।
ನಸುನಗಿಯ ಮೊಗ ।
ಪಸರಿಸಿದ ದ್ವಾದಶ । ನಾಮಗ ।
ಳು ಶ್ರೀಮುದ್ರೆ ಮುದದಿಂದ ।
ನಸಿಲಿಲೊಪ್ಪುವ ಗಂಧ ಅಕ್ಷತಿ ।
ಎಸೆವ ಸಣ್ಣಂಗಾರ । ಕಿವಿಯಲಿ ।।
ಹಸನಾದ ಎಳೆ ತುಲಸಿ । 
ಬೆಸಸುವ ಒಂದೊಂದು । ಮಾತಾ ।
ಲಿಸಿದರದು ವೇದಾರ್ಥ । ತುಲ್ಯಾ ।
ಲಸವ ಗೈಯಿಸದೆ 
ಬರುವ ಗುರುಗಳ  ।। ಚರಣ ।।
ಮೊಸಳಿವಾಯ ಪಲಕ್ಕಿ ಸುತ್ತ । ಭಾ ।
ರಿಸುವ ನಾನಾ ವಾದ್ಯದಾ ಘೋಷಾ ।
ಪುಸಿಕರೆದೆದಲ್ಲಣರು ಯೆಂಬಾ ।
ದಶ ದಿಕ್ಕಿನೊಳು ಕೀರ್ತಿ ತುಂಬಿರೆ ।।
ಶಿಶುವು ಮೊದಲಾದವರು ತಮ ತಮ ।
ಬೆಸನೆ ಪೇಳಲು ಕೇಳಿ । ಅವರು ।
ಬ್ಬಸವ ಕಳದಿಷ್ಟಾರ್ಥ ತೋರುವ ।
ಋಷಿ ಕುಲೋತ್ತಮರಾದ 
ಗುರುಗಳ     ।। ಚರಣ ।।
ಶ್ವಸನ ಮತ ವಾರಿಧಿಗೆ ಪೂರ್ಣ ।
ಶಶಿ ಯೆನಿಸಿಕೊಂಬ ಧೀರುದಾರರೆ ।
ಅಸಮ ತತ್ತ್ವ ಪ್ರಮೇಯದಲಿ । ನಿ ।
ರ್ಮಿಸಿದನೆ ಲೋಕೇಶ ಯಿವರನ್ನ ।।
ವಸುಧಿ ಅಮರರು ಪ್ರಸರ ಎಡ ಬಲ ।
ಎಸದು ತುತಿಸಲು ಹಿಗ್ಗಿ । ಕರುಣಾ ।
ರಸಭರಿತನಾಗಿ ನೋಡುತ್ತ । ಮಾ ।
ನಸದಿ ಹರಿಪದ ಭಜಿಪ
ಗುರುಗಳ  ।। ಚರಣ ।।
ಕುಸುಮಶರನ 
ಬಾಣವನು ಖಂಡ್ರಿಸಿ ।
ಬಿಸುಟ ಸಂಪನ್ನ ವಿದ್ಯಾ ।
ವಸುವಿನಲಿ ಆವಾಗ -
ತಲೆ । ತೂ ।
ಗಿಸುವರು ಪಂಡಿತರ -
ಮೆಚ್ಚಿಸಿ ।।
ವಶವೆ ಪೊಗಳಲು -
ಯೆನಗೆ ಇವರ । ದ ।
ರುಶನದಿಂದಲಿ -
ಗತಿಗೆ ಪಥ । ನಿ ।
ಮಿಷದೊಳಗೆ ಯಿದು -
ಸಿದ್ಧವೆಂದು । ವಂ ।
ದಿಸಿರೊ ಮರಿಯದೆ 
ಈ ಗುರುಗಳಾ ।। ಚರಣ ।।
ಮಿಸುಣಿಪ ಮಂಟಪದೊಳಗೆ । ರಂ ।
ಜಿಸುವ ರಾಮನ ಕುಳ್ಳಿರಿಸಿ । ಅ ।
ರ್ಚಿಸುವ ಚಿತ್ತೇಕಾಗ್ರದಲಿ । ವೊ ।
ಲಿಸುವ ತಂತ್ರಸಾರೋಕ್ತ ಬಗೆಯನು ।।
ಕುಶಲರಾದ ಉಪೇಂದ್ರ ಮುನಿಕರ ।
ಬಿಸಜದಿಂದಲಿ ಜನಿಸಿ ಭಕುತಿಯಲಿ ।
ಅಸುರರಿಪು ಸಿರಿ ವಿಜಯವಿಠ್ಠಲನ್ನ ।
ಪೆಸರುಗಳು ಎಣಿಸುವ 
ಗುರುಗಳ   ।। ಚರಣ ।।
*****

" ಶ್ರೀ ಜನಾರ್ದನವಿಠ್ಠಲರು "..... 
ರಾಗ : ಕಲ್ಯಾಣಿ ತಾಳ : ಝಂಪೆ 
ವಾದೇಂದ್ರ ಗುರುರಾಯಾ ।
ಮೋದ ಕೊಡು ನಿನ್ನ ।
ಪಾದ ಸ್ಮರಿಸುವಂತೆ  ।। ಪಲ್ಲವಿ ।।
ಉಪೇಂದ್ರರಾಯರ -
ವರ ಕುಮಾರನೆ ।
ತಪಸಿಗಳೊಳಗೆನ್ನ -
ತವಕದಿ ಪೊಂದಿಸೋ ।। ಚರಣ ।।  
ಕವನ ಮಾರ್ಗದ -
ಹವಣವ ತೋರಿಸೋ ।
ಭುವನ ಪವಿತ್ರಾ -
ಭೂಸುರಾಗ್ರಣಿಯೇ ।। ಚರಣ ।।
ಮಂತ್ರಾಲಯದಲ್ಲಿ -
ನಿಂತು ಮೆರೆವ । ಶ್ರೀ ।
ಕಂತು ಜನಕನ -
ಏಕಾಂತದಿ ಭಜಿಪ  ।। ಚರಣ ।।
ಮಾನ ಮಮತೆಯಿಂದ -
ಹೀನತನವ ಪರಿ ।
ಜ್ಞಾನಿಗಳೊಳಗಿಡು -
ಸಾನುರಾಗದಿ ।। ಚರಣ ।।
ವರ ಜನಾರ್ದನ-
ವಿಠ್ಠಲ ಯನ್ನನು ।
ಕರವಿಡಿವಂದದಿ -
ಕರುಣಿಸೈಯ್ಯ ಶ್ರೀ ।। ಚರಣ ।।
****