ಪುರಂದರದಾಸರು
ಸುಮ್ಮನೆ ಬಾಹೂದೆ ಮುಕುತಿ ನಮ್ಮ |ಚೆನ್ನಾದಿ ಕೇಶವನ ದಯವಾಗದನಕ ಪ.
ಮನದಲ್ಲಿ ದೃಢವಿರಬೇಕು - ದುರ್ |ಜನರ ಸಂಗತಿಯನು ನೀಗಲುಬೇಕು ||ಅನಮಾನಂಗಳ ಬಿಡಬೇಕು - ತನ್ನ |ತನು - ಮನ ಹರಿಗೆ ಒಪ್ಪಿಸಿ ಕೊಡಬೇಕು 1
ಕಾಮ - ಕ್ರೋಧವ ಬಿಡಬೇಕು -ಹರಿ |ನಾಮಸಂಕೀರ್ತನೆ ಮಾಡಲುಬೇಕು ||ಹೇಮದಾಸೆಯ ಸುಡಬೇಕು - ತ |ನ್ನಾ ಮನ ಹರಿಯ ಪಾದದಲಿಡಬೇಕು 2
ಪಾಪಗಳನೆ ಕಳೆಯಬೇಕು - ಜ್ಞಾನ |ದೀಪ ಬೆಳಕಿನಲಿ ಲೋಲಾಡ ಬೇಕು ||ತಾಪ ರಹಿತಗೈಯಬೇಕು - ನಮ್ಮಓಪ ಪುರಂದರವಿಠಲನೊಲೆಯ ಬೇಕು 3
*******