ದಿವಶಿ ಗೌರಿ ಹಾಡು ಭೀಮನ ಅಮವಾಸ್ಯೆ ದಿನ
ಭೀಮನ ಅಮಾವಾಸ್ಯೆ ಹಾಡು
ಗಜಮುಖ ಗಣಪನ ಭಜನೆಯ ಮಾಡುತ ಅಜನಸತಿಗೆನಮಿಸಿ ನಿಜಭಕ್ತಿಯಿಂದಲಿ ಪೇಳುವೆನಿಮಗೆ ದಿವುಸಿಗೌರಿಕಥೆಯ||ಪಲ್ಲ||
ಆಷಾಢಮಾಸದ ಅಮಾವಾಸ್ಯೆದಿನದಿ ಸೋಸಿಲಿಮಾಡಲೆಂದು ಹುಟ್ಟಿದಾಗಿನಿಂದ ಹೆಣ್ಣುಮಗುವು ಮದುವೆಆಗುವ ವರೆಗು||೧||
ಭೀಮನ ಅಮಾವಾಸ್ಯೆ ಎಂದು ಕೆಲವರು ಭಕ್ತಿಂದಪೂಜಿಪರು
ದೀಪಸ್ಥಂಭಗೌರಿಯೆಂದು ನಿಷ್ಟೆಯಲಿ ಪೂಜಿಪರು||೨||
ಕತ್ಲರಾಯನೆಂಬ ರಾಜನ ಪತ್ನಿಗೆ ಪುತ್ರಸಂತಾನವಾಗಲು
ಅರ್ಥಿಯಿಂದ ಲಿ ಮೂ ಬಟ್ಟಲೀರಲು ಮಾಡಿ ವಸ್ತ್ರದಾನವ
ಮಾಡಿ||೩||
ದಿನದಿನ ಬೆಳೆದನು ಕಾಳಿಂನೆಂಬ ಹೆಸರಿಂದಹರುಷವಗೈದರೆಲ್ಲ
ಘನವಾಗಿತಿರುಗಿದ ಗಿರಿಕಾನನಗಳ ಬೇಟೆಯಾಡುವ ನೆವದಿ||೪||
ಒಂದು ದಿನ ಅಡವಿಗೆ ಹೋದ ಸಮಯದಿ ವ್ಯಾಘ್ರದ ಧ್ವನಿ
ಕೇಳಲು ಹಿಂದಲೆ ಭಯಗೊಂಡು ಕಾನನದಿ ಮೂರ್ಛೆಯಗೊಂಡನಾಗ
||೫||
ಅರಸಗೆ ತಿಳಿಸೆ ಮೃತನಾದ ಮಗನಿಗೆ ಕನ್ಯ ಕೊಡೆರೆಂದು ಪ್ರಕ
ಟಿಸಿದ
ಸತತ ದ್ರವ್ಯ ಬೆಳ್ಳಿ ಬಂಗಾರ ಸಹಿತ ಕೊಡುವುದಾಗಿ ತಿಳಿಸಿದ
||೬||
ಬಡ ಬ್ರಾಹ್ಮಣ ನೊಬ್ಬ ತೀರ್ಥಯಾತ್ರೆಗೆ ಹೊರಡೆ ಮಗನ ಬಳಿ
ತಂಗಿ ಇರಲು
ಧನದಾಸೆಗೆ ಅಣ್ಣನು ತಾನು ಕನ್ಯದಾನವ ಮಾಡಿದ||೭||
ಹೋಗುತ ರಾಜನು ಸೊಸೆಯನ್ನ ನೋಡಿ ಬಾ ಎಂದುಕರೆದ
ನಾಗ
ಪತಿಯ ಬಿಟ್ಟು ನಾನು ಹೋದರೆ ಸದ್ಗತಿ ಯು ಇಲ್ಲವೆನಲು||೮||
ಭೋರೆಂಬೊ ಮಳೆಯು ಸುರಿಯತ್ತಲಿರಲು ಕಾನನದಿ ಒಬ್ಬ
ಳಿರಲು
ಕನ್ನಿಕೆಯರು ಬಂದು ಅಲ್ಲಿ ದಿವುಸಿಗೌರಿ ಪೂಜೆಯಮಾಡಲು||
||೯||
ಪೂಜೆಯ ವಿವರವ ತಿಳಿದುಕೊಂಡು ತಾನು ವ್ರತವನ ಆಚರಿಸಿ
ನಾರು ಬಟ್ಟೆಮಾಡಿ ನೀರುಎಣ್ಢೆಮಾಡಿ ಪೂಜೆಯಗೈದಳಾಗ||೧೦||
ಅಣ್ಣ ಭಂಡಾರವ ವಡೆಯುತಿದ್ದನೆಂದು ಮನದಲ್ಲಿ ಆಲೋಚಿಸೆ
ಶಿವ ಪಾರ್ವತಿಯರು ಬಂದರು ಅಲ್ಲಿಗೆ ಶಿವನು ಭಂಡಾರವಡೆದ
||೧೧||
ಪಾರ್ವತಿಯು ತಾನು ಪೂಜೆಯ ಮಾಡಿಸೆಕಾಳಿಂಗನೆದ್ದು
ಕೂಡಲು
ಅತಿ ಸಂತೋಷದಿ ಶಿವ ಪಾರ್ವತಿಯರು ಹರಸುತ್ತ ಹೊರಟ
ರಾಗ||೧೨||
ಸತಿ ಪತಿಯರು ಬಹಳ ಸಂತೋಷದಿ ತಮ್ಮ ಊರಿಗೆ ಬರಲು
ಮಗಸೊಸೆಯನು ಕಂಡು ರಾಜನು ಹರುಷವಗೊಂಡನಾಗ\|೧೩||
ಹಿರಿಯರ ದಯವ ದಿವುಸಿಗೌರಿ ಪೂಜೆ ಫಲಿಸಿತು ನಮಗೆನುತ
ಪೂರ್ವದ ಹಿರಿಯರು ಮಾಡಿದ ಕಾರ್ಯವ ನಡೆಸಬೇಕೆನ್ನುತ||೧೪||
ಕನ್ಯಾಮಣಿಗಳು ತಾವು ದಿವುಸಿಗೌರಿ ಪೂಜೆ ಅರ್ಥಿಂದ ಮಾಡಿದರೆ
ದಂಪತಿಗಳು ಸುಖದಿಂದಿರುವರೆಂದು ಮಧ್ವೇಶಕೃಷ್ಣನು
ಹರಸುವನು||೧೫||
***