Showing posts with label ನಮೋ ನಮೋ ಹರಿಪ್ರೀಯ ನಮೋ ನಮೋ venugopala vittala madhwacharya stutih. Show all posts
Showing posts with label ನಮೋ ನಮೋ ಹರಿಪ್ರೀಯ ನಮೋ ನಮೋ venugopala vittala madhwacharya stutih. Show all posts

Sunday, 1 August 2021

ನಮೋ ನಮೋ ಹರಿಪ್ರೀಯ ನಮೋ ನಮೋ ankita venugopala vittala madhwacharya stutih

 ..

kruti by venugopala dasaru

ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ


ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ


ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ 1


ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ 2


ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ 3

***