Showing posts with label ದುಗ್ಗಾಣಿ ಎಂಬುದು ದುರ್ಜನ ಸಂಗ ದುಗ್ಗಾಣಿ ಬಲು purandara vittala DUGGAANI EMBUDU DURJANA SANGA DUGGAANI BALU. Show all posts
Showing posts with label ದುಗ್ಗಾಣಿ ಎಂಬುದು ದುರ್ಜನ ಸಂಗ ದುಗ್ಗಾಣಿ ಬಲು purandara vittala DUGGAANI EMBUDU DURJANA SANGA DUGGAANI BALU. Show all posts

Saturday 2 October 2021

ದುಗ್ಗಾಣಿ ಎಂಬುದು ದುರ್ಜನ ಸಂಗ ದುಗ್ಗಾಣಿ ಬಲು purandara vittala DUGGAANI EMBUDU DURJANA SANGA DUGGAANI BALU



ದುಗ್ಗಾಣಿ ಎಂಬುದು ದುರ್ಜನ ಸಂಗ ||ಪ ||

ದುಗ್ಗಾಣಿ ಬಲು ಕೆಟ್ಟದಣ್ಣ ||ಅ||

ಆಚಾರ ಹೇಳೋದು ದುಗ್ಗಾಣಿ, ಬಹು
ನೀಚರ ಮಾಡೋದು ದುಗ್ಗಾಣಿ
ನಾಚಿಕೆಯಿಲ್ಲದೆ ಮನೆಮನೆ ತಿರುಗಿಸಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ ||

ನೆಂಟತನ ಹೇಳೋದು ದುಗ್ಗಾಣಿ, ಬಹು
ನೆಂಟರನೊಲಿಸೋದು ದುಗ್ಗಾಣಿ
ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕುಂಟನೆನಿಸುವುದು ದುಗ್ಗಾಣಿಯಣ್ಣ ||

ಮಾನವಾಗಿರಿಸೋದು ದುಗ್ಗಾಣಿ, ಮಾನ
ಹಸಗೇಡಿಸೋದು ದುಗ್ಗಾಣಿ, ಬಹು
ಮಾನನಿಧಿ ಶ್ರೀಪುರಂದರವಿಠಲನ
ಕಾಣಿಸದಿರುವುದು ದುಗ್ಗಾಣಿಯಣ್ಣ ||
*********

ರಾಗ ನಾದನಾಮಕ್ರಿಯೆ ಅಟತಾಳ (RAGA TALA MAY DIFFER IN AUDIO)

P: DuggaNi embodu Durjana sangha Duggani balu keTTadaNNa

C1: Achara helodu Duggani bahu nichara maDodu Duggani

Nachike illade mane mane tirugi chi chi ennodu duggani

C2: nentatana helodu Duggani Bahu nentara nudisodu Duggani

Onte hange more melakke selakondu kunta nenisuvudu Duggnianna

C3:manava gelisuvudu Duggani mana hadagedisuvudu Duggani

Bahumananidhi shri purandaravittalana kanisadiruvudu Dugganianna
***
 

Meaning: Money (duggani) is association(sangha) with impious. Money is bad (kettadu) in itself. (Money has the capacity to make a person wicked)

C1: Money makes one preach(mostly improperly), and it also makes one very(bahu) lowly(nicha)

(money) also makes one visit houses without shame and makes one ridicule

C2: Money establishes relationships(nentatana), it also makes those relatives speak

Money makes one lift his face upwards(melakke) like a Camel(onte), so that others say that he is a leg-less(kunta) leg-less .

C3: Money makes one win respect(manava gelisodu), also it makes one loose respect.

It is money that makes one not see the most precious prize shri purandaravithala.
***
ದುಗ್ಗಾಣಿ ಎನ್ನುವುದು ದುರ್ಜನರ ಸಂಗ

ಪುರಂದರ ದಾಸರು ಮುಟ್ಟದ ವಿಷಯಗಳಿಲ್ಲ. ಬಾದರಾಯಣ ಬೋಧವನ್ನು ನಾದದ ಮೂಲಕ ಓಣಿ ಓಣಿಗೆ ತಲುಪಿಸಿದವರು. ವೇದವೇದ್ಯನ ವಿಚಾರ ಜನಪದಕ್ಕೆ ತಲುಪಿಸಲು ಬೀದಿಗೆ ಬಿದ್ದವರು.

ದುಗ್ಗಾಣಿ ಎನ್ನುವುದು ದುರ್ಜನರ ಸಂಗ ಎಂಬುದು ಕಟು ಸತ್ಯ. ಹಣವೆಂಬುದು ತೃಣಕ್ಕೆ ಸಮಾನ ಅದನ್ನು ಕೃಷ್ಣಾರ್ಪಣ ಎಂದು ಸಂಕರ್ಷಣನ ಕಾಣ ಹೊರಟವರು ದಾಸರು.

ಹಣ ಅವಶ್ಯಕತೆ. ಅತೀ ಅನಿವಾರ್ಯವೇನಲ್ಲ. ಮಾಡುವ ಊಟದ ರುಚಿ ಪರಿಶ್ರಮದಲ್ಲಿದೆ. ಬಡಿಸುವರ ಪ್ರೇಮದಲ್ಲಿದೆ. ಹಣದ ಹೂರಣ ಅದು ಬರುವ ಮಾರ್ಗದಲ್ಲಿದೆ. ತರುವ ಸಂತೋಷದಲ್ಲಿದೆ. ಇರುವ ತೃಪ್ತಿಯಲ್ಲಿದೆ.

ವ್ಯವಧಾನ-ಸಮಾಧಾನವಿಲ್ಲದ ಬದುಕು ನಿಸ್ಸಾರವಾಗುತ್ತದೆ. ಅನ್ಯಾಯದಿಂದ ಬಂದ, ಆತ್ಮಸಾಕ್ಷಿ ಒಪ್ಪದ,  ಹೊತ್ತಿಗಾಗದ, ಸಂತೃಪ್ತಿ ತರದ ಹಣ ದುಗ್ಗಾಣಿ ಎನಿಸುತ್ತದೆ.

ಇಂಥ ದುಗ್ಗಾಣಿ ಎಂಬುದು ದುರ್ಜನರ ಸಂಗ. ಇದು ನೆಂಟರ ಮಾಡಿಸುತ್ತದೆ ಕೆಡೆಸುತ್ತದೆ. ಮಾನ ಕೊಡಿಸುತ್ತದೆ-ಕಳೆಯುತ್ತದೆ.

ಇಹ-ಪರಕ್ಕೂ ಆಪತ್ತು ತರದ ದ್ರವ್ಯ ಅದು ಸಂಪತ್ತು. ಪುಣ್ಯ ಸಾಧನದ ಸಂಪತ್ತು ದೊಡ್ಡದು. ಸಿರಿ ರಮಣನ ಕರುಣೆಯೇ ಬೆಲೆ ಕಟ್ಟಲಾಗದ ಸಂಪತ್ತು. ದುಗ್ಗಾಣಿಯನ್ನು ತೊರೆದಾಗಲೇ ಅದರ ಅರಿವು.

ಎಂದು ದುಗ್ಗಾಣಿಯ ದುಷ್ಪರಿಣಾಮಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.
******