..
ಪಾಲಿಸೆನ್ನ ಮಾತೆ ಕರುಣದಿ
ಪಾಲಾಂಬುಧಿ ಜಾತೆ ಪ
ಕಾಲಕಾಲಕೆ ಕಮಲಾಲಯೆ ಗೋಪಿಯ
ಬಾಲನಾಳುಗಳ ಊಳಿಗವಿತ್ತು ಅ.ಪ
ಜಾನಕಿಶುಭಗಾತ್ರೆ ನಮಿಸುವೆ |
ಮಾನಿತೆ ಚರಿತ್ರೆ
ಸಾನುರಾಗದಿ ತವ ಸೂನುವೆನಿಪ ಪವ
ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ 1
ಶಂಭು ದೃಹಿಣಿ ವಿನುತೆ ತ್ರೈಜಗ
ದಂಬೆ ಸುಗುಣ ಭರಿತೆ |
ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ
ಯಾಂಬುಜದೊಳಿಹ ಬಿಂಬನ ತೋರಿ 2
ಪ್ರೇಮದಿಂದ ನೋಡೆ ಮನ್ಮನ |
ಧಾಮದಿ ನಲಿದಾಡಿ |
ಕಾಮಿನಿಮಣೀ ಗಜಗಾಮಿನಿ ಗೋಮಿನಿ
ಶಾಮಸುಂದರನ ವಾಮಾಂಗಿಯೆ ಸದಾ 3
***